ರಾತ್ರಿ-ಹಗಲು ಎನ್ನದೆ ಪ್ರತಿದಿನ ಮೊಸರು ತಿನ್ನುತ್ತೀರಾ; ಹಾಗಿದ್ದರೆ ಆಯುರ್ವೇದ ಈ 7 ಸಲಹೆ ನಿಮಗೆ ತಿಳಿದಿರಲಿ
- ಮೊಸರು ಇಲ್ಲದೆ ಹಲವರಿಗೆ ಊಟ ಸೇರುವುದಿಲ್ಲ. ಕೊನೆಯ ತುತ್ತು ಮೊಸರಿನ ಜೊತೆಗೆ ಆಗಬೇಕು. ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಭೋಜನವಾಗಲಿ, ಮೊಸರು ಇದ್ದರೆ ಚೆನ್ನ ಎನ್ನುವವರು ನೀವಾಗಿದ್ದರೆ ಈ ಸುದ್ದಿ ನಿಮಗಾಗಿ. ಮೊಸರು ತಿನ್ನುವ ವಿಷಯವಾಗಿ ಆಯುರ್ವೇದವು ಕೆಲವೊಂದು ಸಲಹೆ ನೀಡುತ್ತದೆ. ಮೊಸರನ್ನು ಈ ಪ್ರಕಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
- ಮೊಸರು ಇಲ್ಲದೆ ಹಲವರಿಗೆ ಊಟ ಸೇರುವುದಿಲ್ಲ. ಕೊನೆಯ ತುತ್ತು ಮೊಸರಿನ ಜೊತೆಗೆ ಆಗಬೇಕು. ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಭೋಜನವಾಗಲಿ, ಮೊಸರು ಇದ್ದರೆ ಚೆನ್ನ ಎನ್ನುವವರು ನೀವಾಗಿದ್ದರೆ ಈ ಸುದ್ದಿ ನಿಮಗಾಗಿ. ಮೊಸರು ತಿನ್ನುವ ವಿಷಯವಾಗಿ ಆಯುರ್ವೇದವು ಕೆಲವೊಂದು ಸಲಹೆ ನೀಡುತ್ತದೆ. ಮೊಸರನ್ನು ಈ ಪ್ರಕಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
(1 / 8)
ಪೋಷಕಾಂಶಗಳ ನಿಧಿ: ಮೊಸರು ವಿವಿಧ ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ಜೀವಸತ್ವ, ಖನಿಜಗಳು, ಕ್ಯಾಲ್ಸಿಯಂ, ಪ್ರೋಟೀನ್‌ನಂತಹ ಅನೇಕ ಪ್ರಯೋಜನಕಾರಿ ಅಂಶಗಳಿವೆ. ಅಲ್ಲದೆ, ಇದು ಪ್ರೋಬಯಾಟಿಕ್ ಆಗಿದೆ, ಅಂದರೆ ಇದು ನಮ್ಮ ಆರೋಗ್ಯಕ್ಕೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಆಯುರ್ವೇದವು ಪ್ರತಿದಿನ ಮೊಸರು ತಿನ್ನುದಿರಲು ಸಲಹೆ ನೀಡುತ್ತದೆ.
(2 / 8)
ಊಟದ ನಂತರ ಮೊಸರು ತಿನ್ನಬೇಡಿ: ಆಯುರ್ವೇದ ಪ್ರಕಾರ, ಮೊಸರನ್ನು ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ಅದನ್ನು ಸರಿಯಾದ ಕ್ರಮದಲ್ಲಿ ತಿನ್ನಬೇಕು. ಇಲ್ಲವಾದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ಆಯುರ್ವೇದ ಪ್ರಕಾರ, ಊಟದ ನಂತರ ಮೊಸರು ತಿನ್ನುವುದನ್ನು ಸರಿಯಲ್ಲ. ಊಟಕ್ಕೆ ಎರಡು ಗಂಟೆಗಳ ಮೊದಲು ಇದನ್ನು ಸೇವಿಸುವುದು ಸೂಕ್ತ.
(3 / 8)
ಮೊಸರನ್ನು ಬಿಸಿ ಮಾಡಬೇಡಿ: ಮೊಸರನ್ನು ಬಿಸಿ ಮಾಡಿ ತಿನ್ನಬೇಡಿ. ಮೊಸರಿನಿಂದ ತಯಾರಿಸಿದ ವಸ್ತುಗಳನ್ನು ಬಿಸಿ ಮಾಡುವುದರಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ.
(4 / 8)
ಆಯುರ್ವೇದದ ಪ್ರಕಾರ, ರಾತ್ರಿ ಮೊಸರು ತಿನ್ನುವುದು ಸರಿಯಲ್ಲ. ರಾತ್ರಿ ಮೊಸರು ತಿನ್ನುವುದರಿಂದ ಕಫ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚು ಲೋಳೆ ಉತ್ಪತ್ತಿಯಾಗುತ್ತದೆ. ಅಲರ್ಜಿ ಅಥವಾ ಕೆಮ್ಮಿನಂತಹ ಸಮಸ್ಯೆಗಳಿರುವವರು ರಾತ್ರಿ ಮೊಸರು ಸೇವನೆ ತಪ್ಪಿಸಬೇಕು. ಹೀಗಾಗಿ ಮೊಸರು ತಿನ್ನಲು ಸರಿಯಾದ ಸಮಯ ಬೆಳಿಗ್ಗೆ ಮತ್ತು ಮಧ್ಯಾಹ್ನ.
(5 / 8)
ಪ್ರತಿದಿನ ಮೊಸರು ತಿನ್ನಬೇಡಿ: ಆಯುರ್ವೇದ ಅನುಸಾರ ಪ್ರತಿದಿನ ಮೊಸರು ತಿನ್ನುವುದು ಸರಿಯಾದ ಕ್ರಮವಲ್ಲ. ಪ್ರತಿದಿನ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು.
(6 / 8)
ಮೊಸರಿನ ಬದಲಿಗೆ ಮಜ್ಜಿಗೆ ಕುಡಿಯಿರಿ: ಆಯುರ್ವೇದ ಪ್ರಕಾರ, ಮೊಸರು ಉಷ್ಣ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಮೊಸರು ಹೆಚ್ಚು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಇದರ ಬದಲಿಗೆ ಮಜ್ಜಿಗೆ ಕುಡಿಯುವುದು ಪ್ರಯೋಜನಕಾರಿ.
(7 / 8)
ಋತುಚಕ್ರದ ಸಮಯದಲ್ಲಿ ತಿನ್ನಬೇಡಿ: ಮಹಿಳೆಯರು ಋತುಚಕ್ರದ ಸಮಯದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಇದೇ ವೇಳೆ ಮೂಗಿನಿಂದ ರಕ್ತಸ್ರಾವದಿಂದ ಬಳಲುತ್ತಿದ್ದರೆ ಮೊಸಲು ಸೇವನೆ ಒಳ್ಳೆಯದಲ್ಲ.
ಇತರ ಗ್ಯಾಲರಿಗಳು