ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್ಸ್ ಇರುವ 10 ಆಹಾರಗಳಿವು; ಕರುಳಿನ ಆರೋಗ್ಯಕ್ಕೆ ಉತ್ತಮ ಆಯ್ಕೆ
- ಕರುಳಿನ ಆರೋಗ್ಯ ತುಂಬಾ ಮುಖ್ಯ. ನಿಮಗೆ ಮೊಸರು ತಿನ್ನಲು ಇಷ್ಟವಿಲ್ಲದಿದ್ದರೆ, ನೀವು ಈ 10 ಇತರ ಆಹಾರಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಬಹುದು. ಈ ಆಹಾರಗಳ ವಿಶೇಷತೆಯೆಂದರೆ ಅವು ಮೊಸರಿಗಿಂತ ಹೆಚ್ಚಿನ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ.
- ಕರುಳಿನ ಆರೋಗ್ಯ ತುಂಬಾ ಮುಖ್ಯ. ನಿಮಗೆ ಮೊಸರು ತಿನ್ನಲು ಇಷ್ಟವಿಲ್ಲದಿದ್ದರೆ, ನೀವು ಈ 10 ಇತರ ಆಹಾರಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಬಹುದು. ಈ ಆಹಾರಗಳ ವಿಶೇಷತೆಯೆಂದರೆ ಅವು ಮೊಸರಿಗಿಂತ ಹೆಚ್ಚಿನ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ.
(1 / 10)
ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್ಸ್ ಹೊಂದಿರುವ ಆಹಾರಗಳು: ಮೊಸರು ಪ್ರೋಬಯಾಟಿಕ್‌ಗಳಿಗೆ ಉತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಪ್ರೋಬಯಾಟಿಕ್‌ಗಳು ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ನಿರ್ವಹಿಸಲು ಅಥವಾ ಸುಧಾರಿಸಲು ಬೇಕಾದ ಜೀವಂತ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಆಹಾರ ಅಥವಾ ಪೂರಕ ಆಹಾರಗಳಾಗಿವೆ. ನೀವು ಮೊಸರು ತಿನ್ನದಿದ್ದರೂ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ 10 ಆಹಾರಗಳನ್ನು ಸೇವಿಸಬಹುದು. ಇವು ಮೊಸರಿಗಿಂತ ಹೆಚ್ಚಿನ ಪ್ರಮಾಣದ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕರುಳಿನ ಆರೋಗ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ.
(Freepik)(2 / 10)
ಕೆಫೀರ್: ಮೊಸರಿನಂತೇ ಇರುವ ಕೆಫೀರ್ ಒಂದು ಹಾಲಿನ ಉತ್ಪನ್ನವಾಗಿದ್ದು, ಇದು ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು 30ಕ್ಕೂ ಹೆಚ್ಚು ವಿಧದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
(Freepik)(3 / 10)
ಕಿಮ್ಚಿ: ಕಿಮ್ಚಿ ಎಂಬುದು ಹುದುಗಿಸಿದ ಕೊರಿಯನ್ ಖಾದ್ಯವಾಗಿದ್ದು, ಎಲೆಕೋಸು, ಮೂಲಂಗಿ ಮತ್ತು ಇತರ ತರಕಾರಿಗಳನ್ನು ಮಸಾಲೆಗಳೊಂದಿಗೆ ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಇದು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾದಲ್ಲಿ ಸಮೃದ್ಧವಾಗಿದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ಸಲಾಡ್ ಅಥವಾ ಸೈಡ್ ಡಿಶ್ ಆಗಿ ತಿನ್ನಬಹುದು.
(Freepik)(4 / 10)
ಸೌರ್ಕ್ರಾಟ್: ಎಲೆಕೋಸಿನಿಂದ ತಯಾರಿಸಲಾದ ಈ ಖಾದ್ಯವು ಲ್ಯಾಕ್ಟಿಕ್ ಆಮ್ಲ ಬ್ಯಾಕ್ಟೀರಿಯಾ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಇದು ಮೊಸರಿಗಿಂತ ಹೆಚ್ಚಿನ ಪ್ರೋಬಯಾಟಿಕ್‌ಗಳನ್ನು ಒದಗಿಸುತ್ತದೆ. ಅಲ್ಲದೆ ‘ವಿಟಮಿನ್ ಸಿ’ಯ ಮೂಲವಾಗಿದೆ. ಇದನ್ನು ಸ್ಯಾಂಡ್‌ವಿಚ್ ಅಥವಾ ಸಲಾಡ್‌ನೊಂದಿಗೆ ಸೇವಿಸಬಹುದು.
(Pic Credit: Freepik)(5 / 10)
ಇಡ್ಲಿ ಮತ್ತು ದೋಸೆ: ಅನ್ನ ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸುವ ಇಡ್ಲಿಯಲ್ಲೂ ಉತ್ತಮ ಪ್ರಮಾಣದ ಪ್ರೋಬಯಾಟಿಕ್ ಇರುತ್ತವೆ. ಈ ಹಿಟ್ಟನ್ನು ಹುದುಗಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
(Freepik)(6 / 10)
ಕಾಂಜಿ: ಕಾಂಜಿ ಎಂಬುದು ಭಾರತದ ಸಾಂಪ್ರದಾಯಿಕ ಪ್ರೋಬಯಾಟಿಕ್ ಪಾನೀಯವಾಗಿದ್ದು, ಇದನ್ನು ವಿಶೇಷವಾಗಿ ಕಪ್ಪು ಕ್ಯಾರೆಟ್, ಸಾಸಿವೆ ಮತ್ತು ನೀರು ಹಾಕಿ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಪ್ರೋಬಯಾಟಿಕ್‌ಗಳನ್ನು ಹೊಂದಿದ್ದು, ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಮೂಲಕ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
(Freepik)(7 / 10)
ಮಜ್ಜಿಗೆ: ಮಜ್ಜಿಗೆಯಲ್ಲಿ ಲ್ಯಾಕ್ಟೋಬಾಸಿಲಸ್‌ನಂತಹ ಪ್ರೋಬಯಾಟಿಕ್‌ಗಳು ಸಮೃದ್ಧವಾಗಿವೆ. ಲ್ಯಾಕ್ಟಿಕ್ ಆಮ್ಲ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿರುವುದರಿಂದ ಇದು ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
(Freepik)(8 / 10)
ಉತ್ತಪಮ್: ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸುವ ಉತ್ತಪ್ಪ ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ. ಇದು ಪೌಷ್ಟಿಕಾಂಶಭರಿತ ಮಾತ್ರವಲ್ಲದೆ ಮಕ್ಕಳು ಮತ್ತು ವಯಸ್ಕರಿಗೆ ರುಚಿಕರವೂ ಆಗಿದೆ.
(Freepik)(9 / 10)
ಧೋಕ್ಲಾ: ಕಡಲೆ ಹಿಟ್ಟು ಮತ್ತು ಬೇಳೆ ಮಿಶ್ರಣದಿಂದ ತಯಾರಿಸಲಾಗುವ ಗುಜರಾತ್‌ನ ಜನಪ್ರಿಯ ತಿನಿಸು ಧೋಕ್ಲಾ, ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಇದು ಹಗುರವಾಗಿದ್ದು ಜೀರ್ಣಕ್ರಿಯೆಗೆ ಒಳ್ಳೆಯದು.
(Freepik)ಇತರ ಗ್ಯಾಲರಿಗಳು