ನೆನೆಸಿದ ಒಣದ್ರಾಕ್ಷಿ vs ಒಣಗಿದ ದ್ರಾಕ್ಷಿ; ಆರೋಗ್ಯಕ್ಕೆ ಯಾವುದು ಉತ್ತಮ?
- Soaked Raisins: ಒಣದ್ರಾಕ್ಷಿಯಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಮತ್ತೆ ಹಾಗೆಯೇ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಭಿನ್ನ ಪ್ರಯೋಜನಗಳು ದೇಹಕ್ಕೆ ಸಿಗುತ್ತವೆ. ಒಣ ದ್ರಾಕ್ಷಿಯು ಶಕ್ತಿಯ ಕೇಂದ್ರೀಕೃತ ಮೂಲವಾಗಿದ್ದರೂ, ನೆನೆಸಿದ ಒಣದ್ರಾಕ್ಷಿಯಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ.
- Soaked Raisins: ಒಣದ್ರಾಕ್ಷಿಯಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಮತ್ತೆ ಹಾಗೆಯೇ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಭಿನ್ನ ಪ್ರಯೋಜನಗಳು ದೇಹಕ್ಕೆ ಸಿಗುತ್ತವೆ. ಒಣ ದ್ರಾಕ್ಷಿಯು ಶಕ್ತಿಯ ಕೇಂದ್ರೀಕೃತ ಮೂಲವಾಗಿದ್ದರೂ, ನೆನೆಸಿದ ಒಣದ್ರಾಕ್ಷಿಯಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ.
(1 / 6)
ಒಣ ದ್ರಾಕ್ಷಿಯನ್ನು ಹಾಗೆಯೇ ಆಹಾರದಲ್ಲಿ ಸೇರಿಸುವುದಕ್ಕಿಂತ ನೆನೆಸಿ ತಿನ್ನುವುದರಿಂದ ಪ್ರಯೋಜನ ಜಾಸ್ತಿ. ಇದರಲ್ಲಿ ಪೌಷ್ಟಿಕಾಂಶ ಹೆಚ್ಚು ಅಲ್ಲದೆ ಜೀರ್ಣವಾಗುವ ಸಾಮರ್ಥ್ಯ ಕೂಡಾ ಜಾಸ್ತಿ ಇದೆ. ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸುವುದರಿಂದ ಪೋಷಕಾಂಶಗಳು ಹಾಗೆಯೇ ಉಳಿಯುತ್ತದೆ. ಒಟ್ಟಾರೆ ಪೌಷ್ಟಿಕಾಂಶದ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.(Pixabay)
(2 / 6)
ಜೀರ್ಣಕ್ರಿಯೆಗೆ ಸಹಕಾರಿ: ಜೀರ್ಣಕ್ರಿಯೆ ವಿಚಾರಕ್ಕೆ ಬಂದರೆ ನೆನೆಸಿದ ಒಣದ್ರಾಕ್ಷಿ ಉತ್ತಮ. ಕೆರಳಿಸುವ ಕರುಳಿನ ಸಹಲಕ್ಷಣಗಳು (IBS) ಅಥವಾ ಕೊಲೈಟಿಸ್‌ನಂತಹ ಜೀರ್ಣಕಾರಿ ಸಮಸ್ಯೆಗಳಿರುವವರಿಗೆ ನೆನೆಸಿದ ಒಣದ್ರಾಕ್ಷಿ ಉತ್ತಮ. ಇದು ಬೇಗನ ಜೀರ್ಣವಾಗುತ್ತದೆ.(Pixabay)
(3 / 6)
ಪೌಷ್ಟಿಕಾಂಶದ ಮೂಲ: ನೆನೆಸಿದ ಒಣದ್ರಾಕ್ಷಿಗಳು ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ನೆನೆಸುವ ಪ್ರಕ್ರಿಯೆಯು ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಇದು ಪೌಷ್ಟಿಕಾಂಶದ ಪ್ರೊಫೈಲ್ ಹೆಚ್ಚಿಸುವುದಲ್ಲದೆ, ನೆನೆಸಿದ ಒಣದ್ರಾಕ್ಷಿಗಳ ಮಾಧುರ್ಯ ಮತ್ತು ಪರಿಮಳ ಕೂಡಾ ಹೆಚ್ಚು.(Pixabay)
(4 / 6)
ಮಲಬದ್ಧತೆ ನಿವಾರಿಸುತ್ತದೆ: ನೆನೆಸಿದ ಒಣದ್ರಾಕ್ಷಿ, ನೈಸರ್ಗಿಕವಾಗಿ ಮಲಬದ್ಧತೆಯನ್ನು ತಡೆಯುವ ಮೂಲಕ ಜೀರ್ಣಕಾರಿ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಅದರ ಫೈಬರ್-ಭರಿತ ಸಂಯೋಜನೆಯು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.(Pixabay)
(5 / 6)
ತೂಕ ನಿರ್ವಹಣೆ: ಒಣದ್ರಾಕ್ಷಿಯಲ್ಲಿ ನೈಸರ್ಗಿಕವಾಗಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೂ, ಅವುಗಳನ್ನು ಮಿತವಾಗಿ ಮತ್ತು ನೆನೆಸಿ ಸೇವಿಸುವುದರಿಂದ ತೂಕ ನಿರ್ವಹಣೆಗೆ ಸಹಕಾರಿ.(Pixabay)
(6 / 6)
ಮೂಳೆಯನ್ನು ಬಲಪಡಿಸುತ್ತದೆ: ನೆನೆಸಿದ ಒಣದ್ರಾಕ್ಷಿಯಲ್ಲಿ ಬೋರಾನ್ ಮತ್ತು ಕ್ಯಾಲ್ಸಿಯಂನಂಥ ಅಗತ್ಯ ಪೋಷಕಾಂಶಗಳಿವೆ. ಇದು ಮೂಳೆಯ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೋರಾನ್ ಮೂಳೆ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಒಟ್ಟಾರೆ ಮೂಳೆಯ ಬಲಕ್ಕೆ ಕೊಡುಗೆ ನೀಡುತ್ತದೆ. ನೆನೆಸಿ ಸೇವಿಸುವುದರಿಂದ ಒಟ್ಟಾರೆ ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ.(Pixabay)
ಇತರ ಗ್ಯಾಲರಿಗಳು