ನಟ್ಸ್ ಹಾಗೂ ಡ್ರೈಫ್ರುಟ್ಸ್ ನೆನೆಸಿ ತಿಂದರೆ ಆರೋಗ್ಯ ಪ್ರಯೋಜನ ದುಪ್ಪಟ್ಟು; ಈ ತಪ್ಪು ಮುಂದೆ ಮಾಡದಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟ್ಸ್ ಹಾಗೂ ಡ್ರೈಫ್ರುಟ್ಸ್ ನೆನೆಸಿ ತಿಂದರೆ ಆರೋಗ್ಯ ಪ್ರಯೋಜನ ದುಪ್ಪಟ್ಟು; ಈ ತಪ್ಪು ಮುಂದೆ ಮಾಡದಿರಿ

ನಟ್ಸ್ ಹಾಗೂ ಡ್ರೈಫ್ರುಟ್ಸ್ ನೆನೆಸಿ ತಿಂದರೆ ಆರೋಗ್ಯ ಪ್ರಯೋಜನ ದುಪ್ಪಟ್ಟು; ಈ ತಪ್ಪು ಮುಂದೆ ಮಾಡದಿರಿ

  • ಆಯುರ್ವೇದದ ಪ್ರಕಾರ, ಒಣ ಬೀಜಗಳು ಮತ್ತು ಡ್ರೈ ಫ್ರುಟ್‌ಗಳನ್ನು ಹಾಗೆಯೇ ತಿನ್ನುವುದಕ್ಕಿಂತ, ನೆನೆಸಿ ತಿಂದರೆ ಆರೋಗ್ಯಕ್ಕೆ ಉತ್ತಮ. ಹಣ್ಣುಗಳನ್ನು ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸುವುದರಿಂದ ಪ್ರಯೋಜನಗಳು ಅಧಿಕ. ಈ ರೀತಿ ಮಾಡಿದರೆ, ಒಣ ಹಣ್ಣುಗಳ ಪರಿಣಾಮ ಹೆಚ್ಚುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಡ್ರೈ ಫ್ರುಟ್‌ಗಳನ್ನು ನೆನೆಸಿದ ನಂತರವೇ ಸೇವಿಸಬೇಕು ಎಂಬುದಕ್ಕೆ ಹಲವು ಕಾರಣಗಳಿವೆ. ಸಹಜವಾಗಿ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅಲ್ಲದೆ ದೇಹದ ಆರೋಗ್ಯ ಸಮತೋಲನಕ್ಕೆ ನೆರವಾಗುತ್ತದೆ. ತಿನ್ನುವ ಮೊದಲು ಬೀಜಗಳು ಮತ್ತು ಒಣ ಹಣ್ಣುಗಳನ್ನು ನೆನೆಸಿಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
icon

(1 / 8)

(pixabay)

ಜೀರ್ಣಕ್ರಿಯೆ ಸುಧಾರಿಸುತ್ತದೆ: ನೆನೆಸಿದ ಡ್ರೈಫುಟ್‌ ಮೆದುವಾಗುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಒಣ ಬೀಜಗಳು ಮತ್ತು ಒಣ ಹಣ್ಣುಗಳನ್ನು ನೆನೆಸುವುದುರಿಂದ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಆಹಾರ ಮೃದುವಾಗಿ, ದೇಹಕ್ಕೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.
icon

(2 / 8)

ಪೋಷಕಾಂಶಗಳ ಆಗರ: ನೆನೆಸಿದ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಜೀವಸತ್ವಗಳು, ಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಖನಿಜಗಳು ಹೇರಳವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರೋಗಗಳನ್ನು ತಡೆಗಟ್ಟಲು ಮತ್ತು ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತವೆ.
icon

(3 / 8)

ಹೈಡ್ರೇಷನ್: ಬೀಜಗಳು ಮತ್ತು ಒಣ ಹಣ್ಣುಗಳನ್ನು ನೆನೆಸಿ ತಿನ್ನುವುದರಿದ ದೇಹಕ್ಕೆ ನೀರಿನ ಅಂಶ ಹೆಚ್ಚು ಪ್ರವೇಶಿಸುತ್ತದೆ. ವಾತ ದೋಷಕ್ಕೆ ಸಂಬಂಧಿಸಿದ ಶುಷ್ಕತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
icon

(4 / 8)

ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ: ನೀರಲ್ಲಿ ನೆನೆಸುವುದರಿಂದ ಬೀಜಗಳು ಮತ್ತು ಒಣ ಹಣ್ಣುಗಳಲ್ಲಿ ಇರುವ ಫೈಟಿಕ್ ಆಮ್ಲ, ಟ್ಯಾನಿನ್‌ಗಳು ಮತ್ತು ಕಿಣ್ವಗಳಂಥ ಪ್ರತಿರೋಧಕ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದು ಪೋಷಕಾಂಶಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ.
icon

(5 / 8)

ದೇಹದ ಪಿತ್ತ ಕಡಿಮೆ ಮಾಡುತ್ತದೆ: ಕೆಲವೊಂದು ಒಣ ಹಣ್ಣುಗಳು ಮತ್ತು ಬೀಜಗಳು ದೇಹಕ್ಕೆ ಉಷ್ಣ. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಪಿತ್ತ ಹೆಚ್ಚಬಹುದು. ಹೀಗಗಾಇ ಅದನ್ನು ನೀರಲ್ಲಿ ನೆನೆಸಿದಾಗ ಆ ಉಷ್ಣ ಪ್ರಮಾಣ ಕಡಿಮೆ ಮಾಡುತ್ತದೆ. ಆಗ ಅದು ದೇಹಕ್ಕೆ ತಂಪಾಗಿಸುತ್ತದೆ. ಜೀರ್ಣಕಾರಿ ಸಮಸ್ಯೆ ಮತ್ತು ಪಿತ್ತ ದೋಷದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದು.
icon

(6 / 8)

ತ್ರಿದೋಶಗಳನ್ನು ಸಮತೋಲನ: ಆಯುರ್ವೇದದ ಪ್ರಕಾರ, ಮಾನವ ದೇಹವನ್ನು ನಿಯಂತ್ರಿಸುವ ಮೂರು ದೋಷಗಳಿವೆ. ಅವುಗಳೇ ವಾತ, ಪಿತ್ತ ಮತ್ತು ಕಫ. ಈ ಸಮಸ್ಯೆಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ನೆನೆಸಿದ ಒಣ ಹಣ್ಣುಗಳನ್ನು ತಿನ್ನುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ಮುಖ್ಯವಾಗಿ ವಾತ ನಿವಾರಣೆಗೆ ನೆರವಾಗುತ್ತದೆ.
icon

(7 / 8)

ಅಮಾ ರಚನೆ: ಅಮಾ ಎಂದರೆ ದೇಹದಲ್ಲಿ ಶೇಖರಗೊಳ್ಳುವ ವಿಷಕಾರಿ ಪದಾರ್ಥಗಳು ಅಥವಾ ಜೀರ್ಣವಾಗದ ವಸ್ತುಗಳು. ಇದು ಚಯಾಪಚಯ ಆರೋಗ್ಯವು ನಿಧಾನವಾಗುವಂತೆ ಮಾಡುತ್ತದೆ. ಅಲ್ಲದೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಡ್ರೈಫ್ರುಟ್ಸ್‌ ನೆನೆಸಿ ತಿನ್ನುವುದರಿಂದ ಅಮಾ ರಚನೆ ಕಡಿಮೆ ಮಾಡುತ್ತದೆ. ಜೀರ್ಣವಾಗದ ಪದಾರ್ಥಗಳ ಸಂಗ್ರಹವನ್ನು ತಡೆಯುವ ಮೂಲಕ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. 
icon

(8 / 8)

ಇತರ ಗ್ಯಾಲರಿಗಳು