ನೀರು ಕುಡಿಯುವ ಈ ತಪ್ಪು ವಿಧಾನದಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು; ಸರಿಯಾದ ಕ್ರಮ ಹೀಗಿದೆ ನೋಡಿ
- ಪ್ರತಿನಿತ್ಯ ಯಥೇಚ್ಛ ನೀರು ಕುಡಿಯಬೇಕು. ಹಾಗಂತಾ ನೀರು ಕುರಿಯುವಾಗ ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಆಯುರ್ವೇದ ತಜ್ಞರ ಪ್ರಕಾರ, ನಿಂತಿರುವಾಗ, ನಡೆಯುವಾಗ ಅಥವಾ ಮಲಗಿರುವಾಗ ನೀರು ಕುಡಿಯುವುದು ಸರಿಯಲ್ಲ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು.
- ಪ್ರತಿನಿತ್ಯ ಯಥೇಚ್ಛ ನೀರು ಕುಡಿಯಬೇಕು. ಹಾಗಂತಾ ನೀರು ಕುರಿಯುವಾಗ ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಆಯುರ್ವೇದ ತಜ್ಞರ ಪ್ರಕಾರ, ನಿಂತಿರುವಾಗ, ನಡೆಯುವಾಗ ಅಥವಾ ಮಲಗಿರುವಾಗ ನೀರು ಕುಡಿಯುವುದು ಸರಿಯಲ್ಲ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು.
(1 / 8)
ಕುಡಿಯುವ ನೀರು ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕುಡಿಯುವ ನೀರಿನ ವಿಧಾನ ತಪ್ಪಿದರೆ ಅದು ಪ್ರಯೋಜನವಿಲ್ಲ. ಬದಲಾಗಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಜನರು ನಡೆಯುವಾಗ ಅಥವಾ ನಿಂತಾಗ ನೇರವಾಗಿ ಬಾಟಲಿಯಿಂದ ನೀರು ಕುಡಿಯುವುದನ್ನು ನೋಡಿರುತ್ತೀರಿ. ನೀವು ಕೂಡಾ ಇದೇ ರೀತಿ ಮಾಡುತ್ತಿದ್ದರೆ, ಆ ಅಭ್ಯಾಸ ಇವತ್ತಿಗೆ ಬಿಟ್ಟುಬಿಡಿ
(2 / 8)
ಆಯುರ್ವೇದದ ಪ್ರಕಾರ; ನಿಂತಿರುವಾಗ, ನಡೆದಾಡುವಾಗ ಅಥವಾ ಮಲಗಿರುವಾಗ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ. ತಪ್ಪಾದ ಭಂಗಿಯಲ್ಲಿ ನೀರು ಕುಡಿಯುವುದು ವ್ಯಕ್ತಿಯ ಆರೋಗ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
(3 / 8)
ನಿಂತು ನೀರು ಕುಡಿಯುವುದರಿಂದ ನರಗಳಲ್ಲಿ ಒತ್ತಡ ಉಂಟಾಗುತ್ತದೆ. ಇದು ದೇಹದಲ್ಲಿನ ದ್ರವದ ಸಮತೋಲನಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ಕೀಲು ನೋವು, ಮೊಣಕಾಲು ನೋವು, ಅಜೀರ್ಣದಂತಾ ಸಮಸ್ಯೆ ಹೆಚ್ಚಾಗಬಹುದು.
(4 / 8)
ನಿಂತಿರುವಾಗ ನೀರು ಕುಡಿಯುವುದರಿಂದ ಕೀಲು ನೋವಿನ ಸಮಸ್ಯೆಯೂ ಕಾಡಬಹುದು. ಇದು ಕ್ರಮೇಣ ಸಂಧಿವಾತದಂಥ ನೋವಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.
(5 / 8)
ಆಯುರ್ವೇದದ ಪ್ರಕಾರ, ನಿಂತಿರುವಾಗ ಅಥವಾ ಮಲಗಿರುವಾಗ ನೀರು ಕುಡಿಯುವುದು ಜೀರ್ಣಾಂಗ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಿಸಬಹುದು.
(6 / 8)
ದೇಹವನ್ನು ಹೈಡ್ರೀಕರಿಸುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ನಿವಾರಣೆಯಾಗುತ್ತದೆ. ನೀರು ಕುಡಿಯಲು ಸರಿಯಾದ ಮಾರ್ಗ ಎಲ್ಲರೂ ಅನುಸರಿಸುವುದಿಲ್ಲ. ನಿಂತುಕೊಂಡು ನೀರು ಕುಡಿದಾಗ, ನೀರು ವೇಗವಾಗಿ ಕೆಳಗಿಳಿದು ಹೊಟ್ಟೆಯ ಕೆಳಭಾಗ ತಲುಪುತ್ತದೆ. ಅದು ಜೀರ್ಣಾಂಗ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತದೆ.
(7 / 8)
ನಿಂತುಕೊಂಡು ನೀರು ಕುಡಿದರೆ, ದೇಹದ ಆಮ್ಲಜನಕದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಶ್ವಾಸಕೋಶ ಮತ್ತು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಇತರ ಗ್ಯಾಲರಿಗಳು