Kannada News  /  Photo Gallery  /  Lifestyle News Making Changes To Your Diet You May Be Able To Improve Your Sleep Quality Diet For Good Sleep Mnk

Diet for good sleep: ತೃಪ್ತಿದಾಯಕ ನಿದ್ದೆಯಿಂದ ವಂಚಿತರಾಗಿದ್ದೀರಾ? ಹೀಗಿರಲಿ ನಿಮ್ಮ ನಿತ್ಯದ ಆಹಾರ ಕ್ರಮ

Jun 04, 2023 05:36 PM IST Manjunath B Kotagunasi
Jun 04, 2023 05:36 PM , IST

  • Diet for good sleep: ಎಷ್ಟೋ ಮಂದಿಗೆ ಈ ರಾತ್ರಿ ಯಾಕಾದರೂ ಬರುತ್ತೋ ಅನ್ನೋ ಚಿಂತೆ. ಅದಕ್ಕೆ ಕಾರಣ; ಸರಿಯಾಗಿ ಆಗದ ನಿದ್ದೆ. ಆದರೆ, ಈ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿದ್ದೆಯ ಗುಣಮಟ್ಟ ಸುಧಾರಿಸಲಿದೆ.

ನೀವು ಸೇವಿಸುವ ಆರೋಗ್ಯಕರ ಆಹಾರವು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಯಾವಾಗಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಆ ತೃಪ್ತಿದಾಯಕ ನಿದ್ದೆಯಿಂದ ನೀವು ವಂಚಿತರಾಗಿದ್ದರೆ, ಇಲ್ಲಿ ಸೂಚಿಸಿರುವ ಕೆಲವು ಆಹಾರ ಸಲಹೆಗಳನ್ನು ಪಾಲಿಸಿ.

(1 / 8)

ನೀವು ಸೇವಿಸುವ ಆರೋಗ್ಯಕರ ಆಹಾರವು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಯಾವಾಗಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಆ ತೃಪ್ತಿದಾಯಕ ನಿದ್ದೆಯಿಂದ ನೀವು ವಂಚಿತರಾಗಿದ್ದರೆ, ಇಲ್ಲಿ ಸೂಚಿಸಿರುವ ಕೆಲವು ಆಹಾರ ಸಲಹೆಗಳನ್ನು ಪಾಲಿಸಿ.(Unsplash)

ಟೀ, ಕಾಫಿ ಬೇಡ: ಮಲಗುವ ಕೆಲ ಗಂಟೆಗಳ ಹಿಂದೆ ಯಾವುದೇ ಕಾರಣಕ್ಕೂ ಟೀ, ಕಾಫಿಯನ್ನು ಸೇವಿಸಬೇಡಿ. ಅದರಲ್ಲಿ ಕೆಫೀನ್‌ ಅಂಶ ನಿಮ್ಮನ್ನು ನಿದ್ದೆಗೆ ಭಂಗ ತರುವ ಸಾಧ್ಯತೆ ಹೆಚ್ಚು. 

(2 / 8)

ಟೀ, ಕಾಫಿ ಬೇಡ: ಮಲಗುವ ಕೆಲ ಗಂಟೆಗಳ ಹಿಂದೆ ಯಾವುದೇ ಕಾರಣಕ್ಕೂ ಟೀ, ಕಾಫಿಯನ್ನು ಸೇವಿಸಬೇಡಿ. ಅದರಲ್ಲಿ ಕೆಫೀನ್‌ ಅಂಶ ನಿಮ್ಮನ್ನು ನಿದ್ದೆಗೆ ಭಂಗ ತರುವ ಸಾಧ್ಯತೆ ಹೆಚ್ಚು. (Unsplash)

ಮಿತಿಯಲ್ಲಿರಲಿ ಆಲ್ಕೋಹಾಲ್ ಸೇವನೆ: ಆಲ್ಕೋಹಾಲ್ ಸೇವಿಸಿ ಮಲಗುವುದರಿಂದ ನೀವು ಆರಂಭದಲ್ಲಿ ನಿದ್ದೆಗೆ ಜಾರಬಹುದು. ಆದರೆ, ರಾತ್ರಿಯಲ್ಲಿ ಅದು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು. ಸಾಧ್ಯವಾದ ಮಟ್ಟಿಗೆ ಆಲ್ಕೊಹಾಲ್ ಸೇವನೆ ಮಿತಿಯಲ್ಲಿರಲಿ ಅಥವಾ ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಇನ್ನೂ ಉತ್ತಮ.

(3 / 8)

ಮಿತಿಯಲ್ಲಿರಲಿ ಆಲ್ಕೋಹಾಲ್ ಸೇವನೆ: ಆಲ್ಕೋಹಾಲ್ ಸೇವಿಸಿ ಮಲಗುವುದರಿಂದ ನೀವು ಆರಂಭದಲ್ಲಿ ನಿದ್ದೆಗೆ ಜಾರಬಹುದು. ಆದರೆ, ರಾತ್ರಿಯಲ್ಲಿ ಅದು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು. ಸಾಧ್ಯವಾದ ಮಟ್ಟಿಗೆ ಆಲ್ಕೊಹಾಲ್ ಸೇವನೆ ಮಿತಿಯಲ್ಲಿರಲಿ ಅಥವಾ ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಇನ್ನೂ ಉತ್ತಮ.(Unsplash)

ಹಾಲು, ಮೊಟ್ಟೆ ನಿದ್ದೆಗೆ ಸಹಕಾರಿ; ಟ್ರಿಪ್ಟೊಫಾನ್ (Tryptophan) ಒಂದು ಅಮೈನೋ ಆಮ್ಲವಾಗಿದ್ದು, ಇದು ದೇಹದಲ್ಲಿ ಸಿರೊಟೋನಿನ್ (Serotonin) ಅಂಶವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಅಂಶ ಹಾಲು, ಮೊಟ್ಟೆ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಹೇರಳವಾಗಿರುತ್ತದೆ. ಇದರ ಸೇವನೆಯೂ ನಿಮ್ಮ ಆಹಾರದಲ್ಲಿರಲಿ. 

(4 / 8)

ಹಾಲು, ಮೊಟ್ಟೆ ನಿದ್ದೆಗೆ ಸಹಕಾರಿ; ಟ್ರಿಪ್ಟೊಫಾನ್ (Tryptophan) ಒಂದು ಅಮೈನೋ ಆಮ್ಲವಾಗಿದ್ದು, ಇದು ದೇಹದಲ್ಲಿ ಸಿರೊಟೋನಿನ್ (Serotonin) ಅಂಶವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಅಂಶ ಹಾಲು, ಮೊಟ್ಟೆ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಹೇರಳವಾಗಿರುತ್ತದೆ. ಇದರ ಸೇವನೆಯೂ ನಿಮ್ಮ ಆಹಾರದಲ್ಲಿರಲಿ. (Unsplash)

ಹೆಚ್ಚು ನೀರು ಕುಡಿಯಿರಿ: ದಿನದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ನೀವು ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಸಾಧ್ಯ. ಹಾಗಾಗಿ ಸಾಧ್ಯವಾದ ಮಟ್ಟಿಗೆ ಹೆಚ್ಚು ನೀರು ಸೇವಿಸಿ. ಒಬ್ಬ ವಯಸ್ಕ ವ್ಯಕ್ತಿ ನಿತ್ಯ 7ರಿಂದ 8 ಲೀಟರ್‌ ನೀರು ಕುಡಿಯಬೇಕಾಗುತ್ತದೆ. ಇದು ರಾತ್ರಿ ನಿದ್ರಾಭಂಗ ತಪ್ಪಿಸಲು ಸಹಾಯ ಮಾಡುತ್ತದೆ. 

(5 / 8)

ಹೆಚ್ಚು ನೀರು ಕುಡಿಯಿರಿ: ದಿನದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ನೀವು ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಸಾಧ್ಯ. ಹಾಗಾಗಿ ಸಾಧ್ಯವಾದ ಮಟ್ಟಿಗೆ ಹೆಚ್ಚು ನೀರು ಸೇವಿಸಿ. ಒಬ್ಬ ವಯಸ್ಕ ವ್ಯಕ್ತಿ ನಿತ್ಯ 7ರಿಂದ 8 ಲೀಟರ್‌ ನೀರು ಕುಡಿಯಬೇಕಾಗುತ್ತದೆ. ಇದು ರಾತ್ರಿ ನಿದ್ರಾಭಂಗ ತಪ್ಪಿಸಲು ಸಹಾಯ ಮಾಡುತ್ತದೆ. (Unsplash)

ಗಿಡಮೂಲಿಕೆ ಚಹಾವನ್ನು ಕುಡಿಯಿರಿ: ಮಲಗುವ ಮೊದಲು ಕ್ಯಾಮೊಮೈಲ್  (chamomile) ಅಥವಾ ವ್ಯಾಲೇರಿಯನ್ (valerian) ಗಿಡಮೂಲಿಕೆಯಿಂದ ಮಾಡಿದ ಚಹಾವನ್ನು ಸೇವಿಸಿ. ಇದು ನಿದ್ರೆಯನ್ನು ಹೆಚ್ಚಿಸುತ್ತದೆ. 

(6 / 8)

ಗಿಡಮೂಲಿಕೆ ಚಹಾವನ್ನು ಕುಡಿಯಿರಿ: ಮಲಗುವ ಮೊದಲು ಕ್ಯಾಮೊಮೈಲ್  (chamomile) ಅಥವಾ ವ್ಯಾಲೇರಿಯನ್ (valerian) ಗಿಡಮೂಲಿಕೆಯಿಂದ ಮಾಡಿದ ಚಹಾವನ್ನು ಸೇವಿಸಿ. ಇದು ನಿದ್ರೆಯನ್ನು ಹೆಚ್ಚಿಸುತ್ತದೆ. (Unsplash)

ಮಲಗುವ ಮುನ್ನ ಜೀರ್ಣಕ್ರಿಯೆಗೆ ಕಷ್ಟಕರ ಆಹಾರ ಬೇಡ: ಮಲಗುವ ಮುನ್ನ ಜೀರ್ಣಕ್ರಿಯೆಗೆ ಕಷ್ಟಕರ ಎನಿಸುವ ಆಹಾರವನ್ನು ಸೇವಿಸಬೇಡಿ. ಇದು ನಿಮ್ಮ ನಿದ್ರೆಯನ್ನು ಕಸಿಯುತ್ತದೆ. ಮಲಗುವ ಎರಡು ಗಂಟೆ ಮೊದಲು ಲಘು ಆಹಾರ ಸೇವಿಸಿದರೆ ಉತ್ತಮ.

(7 / 8)

ಮಲಗುವ ಮುನ್ನ ಜೀರ್ಣಕ್ರಿಯೆಗೆ ಕಷ್ಟಕರ ಆಹಾರ ಬೇಡ: ಮಲಗುವ ಮುನ್ನ ಜೀರ್ಣಕ್ರಿಯೆಗೆ ಕಷ್ಟಕರ ಎನಿಸುವ ಆಹಾರವನ್ನು ಸೇವಿಸಬೇಡಿ. ಇದು ನಿಮ್ಮ ನಿದ್ರೆಯನ್ನು ಕಸಿಯುತ್ತದೆ. ಮಲಗುವ ಎರಡು ಗಂಟೆ ಮೊದಲು ಲಘು ಆಹಾರ ಸೇವಿಸಿದರೆ ಉತ್ತಮ.(Unsplash)

ಮಸಾಲೆಯುಕ್ತ ಆಹಾರ ತಪ್ಪಿಸಿ: ರಾತ್ರಿ ವೇಳೆ ಮಸಾಲೆಯುಕ್ತ ಅಥವಾ ಆಮ್ಲೀಯ ಆಹಾರಗಳು ಅಜೀರ್ಣ ಅಥವಾ ಎದೆಯುರಿ ಉಂಟುಮಾಡಬಹುದು. ಹಾಗಾಗಿ ಸಾಧ್ಯವಾದಷ್ಟು ಮಸಾಲೆಯುಕ್ತ ಆಹಾರ ಸೇವನೆಯಿಂದ ದೂರವಿರುವುದೇ ಒಳಿತು.

(8 / 8)

ಮಸಾಲೆಯುಕ್ತ ಆಹಾರ ತಪ್ಪಿಸಿ: ರಾತ್ರಿ ವೇಳೆ ಮಸಾಲೆಯುಕ್ತ ಅಥವಾ ಆಮ್ಲೀಯ ಆಹಾರಗಳು ಅಜೀರ್ಣ ಅಥವಾ ಎದೆಯುರಿ ಉಂಟುಮಾಡಬಹುದು. ಹಾಗಾಗಿ ಸಾಧ್ಯವಾದಷ್ಟು ಮಸಾಲೆಯುಕ್ತ ಆಹಾರ ಸೇವನೆಯಿಂದ ದೂರವಿರುವುದೇ ಒಳಿತು.(Unsplash)

ಇತರ ಗ್ಯಾಲರಿಗಳು