ನೋಡಲು ಹಾವಿನಂತೆ ಕಂಡರೂ ಪಡವಲಕಾಯಿಯಲ್ಲಿದೆ ಹಲವು ಆರೋಗ್ಯ ಪ್ರಯೋಜನೆ
- ನೋಡಲು ಹಾವಿನಂತೆ ಉದ್ದವಾಗಿರುವ ಪಡವಲಕಾಯಿಯನ್ನು ಸಾಮಾನ್ಯವಾಗಿ ಸೇವಿಸುವವರ ಸಂಖ್ಯೆ ಕಡಿಮೆ. ಆದರೆ, ಆರೋಗ್ಯಕ್ಕೆ ಹಲವಾರು ಪ್ರಯೋಜನ ಈ ಪಡವಲಕಾಯಿಯಿಂದ ಇದೆ. ಇದು ಒಂದು ರೀತಿಯ ಅಮೃತವೇ ಸರಿ. ಅದರ ಬಗ್ಗೆ ತಿಳಿಯೋಣ.
- ನೋಡಲು ಹಾವಿನಂತೆ ಉದ್ದವಾಗಿರುವ ಪಡವಲಕಾಯಿಯನ್ನು ಸಾಮಾನ್ಯವಾಗಿ ಸೇವಿಸುವವರ ಸಂಖ್ಯೆ ಕಡಿಮೆ. ಆದರೆ, ಆರೋಗ್ಯಕ್ಕೆ ಹಲವಾರು ಪ್ರಯೋಜನ ಈ ಪಡವಲಕಾಯಿಯಿಂದ ಇದೆ. ಇದು ಒಂದು ರೀತಿಯ ಅಮೃತವೇ ಸರಿ. ಅದರ ಬಗ್ಗೆ ತಿಳಿಯೋಣ.
(1 / 6)
ನಿತ್ಯ ಬಳಕೆಯ ತರಾಕಾರಿ ಬೆಲೆ ಈಗೀಗ ಗಗನಕ್ಕೇರುತ್ತಿದೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ತರಕಾರಿ ಲಭ್ಯತೆ ಕಡಿಮೆಯಾಗಿದೆ. ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಈ ನಡುವೆ ಈ ಒಂದು ತರಕಾರಿ ನಿಮ್ಮನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.(Freepik)
(2 / 6)
ತಜ್ಞರ ಪ್ರಕಾರ, ಪಡವಲಕಾಯಿಯಲ್ಲಿ ವಿಟಮಿನ್ ಎ, ಇ, ಬಿ6 ಮತ್ತು ಸಿ ಯಂತಹ ಹಲವಾರು ಪೋಷಕಾಂಶಗಳಿವೆ. ಇದರ ಜೊತೆಗೆ ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಈ ಪೋಷಕಾಂಶಗಳು ದೇಹದ ಚಯಾಪಚಯ ಕ್ರಿಯೆಯನ್ನ ಸಕ್ರಿಯವಾಗಿಸುತ್ತವೆ.
(3 / 6)
ಮಧುಮೇಹ ಈಗೀಗ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಮಧುಮೇಹ ನಿಯಂತ್ರಣಕ್ಕೆ ಪಡವಲಕಾಯಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಇದರಿಂದ ದೈಹಿಕ ಅಸ್ವಸ್ಥತೆ ಸುಲಭವಾಗಿ ಸಂಭವಿಸುವುದಿಲ್ಲ.(Freepik)
(4 / 6)
ಹೃದಯವನ್ನು ಆರೋಗ್ಯವಾಗಿಡಲು ಪಡವಲಕಾಯಿ ಉತ್ತಮ ತರಕಾರಿ. ಇವುಗಳಲ್ಲಿ ಕುಕುರ್ಬಿಟಾಸಿನ್-ಬಿ, ಕುಕುರ್ಬಿಟಾಸಿನ್-ಇ, ಕ್ಯಾರೊಟಿನಾಯ್ಡ್‌ಗಳು ಮತ್ತು ಆಸ್ಕೋರ್ಬಿಕ್ ಆಮ್ಲ ಸೇರಿವೆ. ಅವು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.(Freepik)
(5 / 6)
ಜೀರ್ಣಕಾರಿ ಸಮಸ್ಯೆ, ಎದೆಯುರಿ ಸೇರಿದಂತೆ ಹೊಟ್ಟೆಯುಬ್ಬರದವರೆಗೆ ಹೊಟ್ಟೆಯ ಸಮಸ್ಯೆಗಳಿಗೆ ಈ ತರಕಾರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಣೆಯಾಗುತ್ತದೆ.(Freepik)
ಇತರ ಗ್ಯಾಲರಿಗಳು