ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಸಿ ಅರಿಶಿನ ಬೇರಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ; ಅಡುಗೆಗೆ ಪುಡಿಗಿಂತ ಅರಿಶಿನ ಕೊಂಬು ಬಳಕೆಯೇ ಉತ್ತಮ

ಹಸಿ ಅರಿಶಿನ ಬೇರಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ; ಅಡುಗೆಗೆ ಪುಡಿಗಿಂತ ಅರಿಶಿನ ಕೊಂಬು ಬಳಕೆಯೇ ಉತ್ತಮ

  • ಅಡುಗೆ ಮನೆಯಲ್ಲಿ ಅರಿಶಿನ ಇದ್ದೇ ಇರುತ್ತದೆ. ಸಸ್ಯಹಾರ ಮಾತ್ರವಲ್ಲದೆ ಮಾಂಸಾಹಾರಿ ಅಡುಗೆಗಳಿಗೂ ಭಾರತೀಯರು ಅರಿಶಿನ ಬಳಸುತ್ತಾರೆ. ಅರಿಶಿನವು ಅಡುಗೆ ರುಚಿ ಹೆಚ್ಚಿಸುವುದಲ್ಲಿದೆ, ಒಂದೊಳ್ಳೆ ಬಣ್ಣವನ್ನೂ ನೀಡುತ್ತದೆ. ಇಷ್ಟೇ ಅಲ್ಲದೆ ಇದರಿಂದ ಹಲವಾರು ಆರೋಗ್ಯ ಪ್ರಯೋಜನವಿದೆ.

ಸಾಮಾನ್ಯವಾಗಿ ಅಡುಗೆಗೆ ಅರಿಶಿನ ಪುಡಿ ಬಳಸುವವರು ಹೆಚ್ಚು. ಆದರೆ, ಹಸಿ ಅರಿಶಿನ ಅಥವಾ ಅರಿಶಿನದ ಬೇರು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ. ನಿತ್ಯ ಅಡುಗೆಯಲ್ಲಿ ಹಸಿ ಅರಿಶಿನ ಬಳಸುವುದರ ಪ್ರಯೋಜನಗಳೇನು ಎಂಬುದನ್ನು ನೋಡೋಣ.
icon

(1 / 6)

ಸಾಮಾನ್ಯವಾಗಿ ಅಡುಗೆಗೆ ಅರಿಶಿನ ಪುಡಿ ಬಳಸುವವರು ಹೆಚ್ಚು. ಆದರೆ, ಹಸಿ ಅರಿಶಿನ ಅಥವಾ ಅರಿಶಿನದ ಬೇರು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ. ನಿತ್ಯ ಅಡುಗೆಯಲ್ಲಿ ಹಸಿ ಅರಿಶಿನ ಬಳಸುವುದರ ಪ್ರಯೋಜನಗಳೇನು ಎಂಬುದನ್ನು ನೋಡೋಣ.(pixabay)

ಹಲವು ಔಷಧೀಯ ಗುಣಗಳು: ಹಸಿ ಅರಿಶಿನದಲ್ಲಿ ಅಪಾರ ಔಷಧೀಯ ಗುಣಗಳಿವೆ. ಇದರಲ್ಲಿರುವ ನಂಜುನಿರೋಧಕ ಗುಣವು ದೇಹದಲ್ಲಿರುವ ನಂಜು ಅಂಶವನ್ನು ಹೋಗಲಾಡಿಸುತ್ತದೆ. ನಂಜು ಆಹಾರ ಪದಾರ್ಥಗಳ ಅಡುಗೆಗೆ ಅರಿಶಿನ ತಪ್ಪದೆ ಬಳಸಬೇಕು. ಜೊತೆಗೆ ಶೀತ, ಕೆಮ್ಮು, ಚರ್ಮದ ಸೋಂಕು, ಮೂತ್ರನಾಳದ ಸೋಂಕಿಗೆ ಚಿಕಿತ್ಸೆ ನೀಡಲು ಸಹಕಾರಿ.
icon

(2 / 6)

ಹಲವು ಔಷಧೀಯ ಗುಣಗಳು: ಹಸಿ ಅರಿಶಿನದಲ್ಲಿ ಅಪಾರ ಔಷಧೀಯ ಗುಣಗಳಿವೆ. ಇದರಲ್ಲಿರುವ ನಂಜುನಿರೋಧಕ ಗುಣವು ದೇಹದಲ್ಲಿರುವ ನಂಜು ಅಂಶವನ್ನು ಹೋಗಲಾಡಿಸುತ್ತದೆ. ನಂಜು ಆಹಾರ ಪದಾರ್ಥಗಳ ಅಡುಗೆಗೆ ಅರಿಶಿನ ತಪ್ಪದೆ ಬಳಸಬೇಕು. ಜೊತೆಗೆ ಶೀತ, ಕೆಮ್ಮು, ಚರ್ಮದ ಸೋಂಕು, ಮೂತ್ರನಾಳದ ಸೋಂಕಿಗೆ ಚಿಕಿತ್ಸೆ ನೀಡಲು ಸಹಕಾರಿ.(pixabay)

ಜೀರ್ಣಕ್ರಿಯೆಗೆ ಸಹಕಾರಿ: ಅರಿಶಿನದ ಬೇರನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ಪಿತ್ತರಸದ ಉತ್ಪಾದನೆ ಸುಧಾರಿಸಬಹುದು. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ.
icon

(3 / 6)

ಜೀರ್ಣಕ್ರಿಯೆಗೆ ಸಹಕಾರಿ: ಅರಿಶಿನದ ಬೇರನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ಪಿತ್ತರಸದ ಉತ್ಪಾದನೆ ಸುಧಾರಿಸಬಹುದು. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ.(pixabay)

ನೋವು ನಿವಾರಕ: ಅರಿಶಿನ ಬೇರು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಕೀಲು ನೋವಿಗೆ ಪರಿಣಾಮಕಾರಿ.
icon

(4 / 6)

ನೋವು ನಿವಾರಕ: ಅರಿಶಿನ ಬೇರು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಕೀಲು ನೋವಿಗೆ ಪರಿಣಾಮಕಾರಿ.(pixabay)

ರಕ್ತ ಶುದ್ಧಿಕರಣ: ಹಸಿ ಹಳದಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಜೀವಕೋಶದ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ರಕ್ತದ ವಿಷವನ್ನು ಹೊರಹಾಕುವ ಮೂಲಕ ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.
icon

(5 / 6)

ರಕ್ತ ಶುದ್ಧಿಕರಣ: ಹಸಿ ಹಳದಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಜೀವಕೋಶದ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ರಕ್ತದ ವಿಷವನ್ನು ಹೊರಹಾಕುವ ಮೂಲಕ ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.(pixabay)

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ: ಮಧುಮೇಹದಿಂದ ಬಳಲುತ್ತಿರುವವರಿಗೆ, ಹಸಿ ಅರಿಶಿನ ಉತ್ತಮ ಮದ್ದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುವುದು ಮಾತ್ರವಲ್ಲದೆ ಇನ್ಸುಲಿನ್ ಪ್ರತಿರೋಧದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
icon

(6 / 6)

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ: ಮಧುಮೇಹದಿಂದ ಬಳಲುತ್ತಿರುವವರಿಗೆ, ಹಸಿ ಅರಿಶಿನ ಉತ್ತಮ ಮದ್ದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುವುದು ಮಾತ್ರವಲ್ಲದೆ ಇನ್ಸುಲಿನ್ ಪ್ರತಿರೋಧದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.(pixabay)


ಇತರ ಗ್ಯಾಲರಿಗಳು