ಮನೆಯಲ್ಲಿ ಇಲಿ ಕಾಟದಿಂದ ಬೇಸತ್ತಿದ್ದೀರಾ; ನೆಲ ಒರೆಸುವಾಗ ಈ ಒಂದು ಕೆಲಸ ಮಾಡಿ, ಇಲಿ ಮತ್ತೆ ಮನೆಕಡೆ ಸುಳಿಯಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆಯಲ್ಲಿ ಇಲಿ ಕಾಟದಿಂದ ಬೇಸತ್ತಿದ್ದೀರಾ; ನೆಲ ಒರೆಸುವಾಗ ಈ ಒಂದು ಕೆಲಸ ಮಾಡಿ, ಇಲಿ ಮತ್ತೆ ಮನೆಕಡೆ ಸುಳಿಯಲ್ಲ

ಮನೆಯಲ್ಲಿ ಇಲಿ ಕಾಟದಿಂದ ಬೇಸತ್ತಿದ್ದೀರಾ; ನೆಲ ಒರೆಸುವಾಗ ಈ ಒಂದು ಕೆಲಸ ಮಾಡಿ, ಇಲಿ ಮತ್ತೆ ಮನೆಕಡೆ ಸುಳಿಯಲ್ಲ

  • ಕೆಲವು ಮನೆಗಳಲ್ಲಿ ಇಲಿಗಳ ಕಾಟ ಸಾಮಾನ್ಯ ಸಮಸ್ಯೆಯಾಗಿದೆ. ಹಲವು ಬಾರಿ ಇಲಿಗಳು ಹೊಸ ಬಟ್ಟೆಗಳನ್ನು ಹಾಳುಮಾಡಿ ನಿಮ್ಮ ಮೂಡ್‌ ಹಾಳುಮಾಡುತ್ತವೆ. ಅಡಿಗೆ ಮನೆಯಲ್ಲಿಟ್ಟ ಆಹಾರದಿಂದ ಹಿಡಿದು ಎಲ್ಲದಕ್ಕೂ ಇಲಿ ಕಾಟ ತಪ್ಪಿದ್ದಲ್ಲ. ಆದರೆ, ಇಲಿಗಳನ್ನು ಮನೆಯಿಂದ ಓಡಿಸಲು ಕೆಲವೊಂದು ಸರಳ ಪರಿಹಾರವಿದೆ.

ಇಲಿಗಳ ಕಾಟ ಹೆಚ್ಚಾದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಪ್ಲೇಗ್‌ನತಹ ಕೆಲವೊಂದು ಮಾರಕ ರೋಗಗಳನ್ನು ಸಹ ಇವು ಹರಡಬಹುದು. ಇಲಿಗಳನ್ನು ಓಡಿಸಲು ಸಾಮಾನ್ಯವಾಗಿ ಜನರು ಹಲವು ವಿಧಾನಗಳ ಮೊರೆ ಹೋಗುತ್ತಾರೆ.
icon

(1 / 8)

(freepik)

ಹೆಚ್ಚಿನವರು ಇಲಿ ಬೋನು ಅಥವಾ ವಿಷವಿಟ್ಟು ಇಲಿಯನ್ನು ಓಡಿಸುವ ಪ್ರಯತ್ನ ಮಾಡುತ್ತಾರೆ. ರಾಸಾಯನಿಕಗಳನ್ನು ಬಳಸಿ ಇಲಿಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನ ಮಾಡುತ್ತಾರೆ. ಇವು ದುಬಾರಿ ಮಾತ್ರವಲ್ಲದೆ ಅಷ್ಟೊಂದು ಪರಿಣಾಮಕಾರಿಯಲ್ಲ. ಇದರ ಬದಲಿಗೆ ನೀವು ಸುಲಭವಾಗಿ ಲಭ್ಯವಿರುವ ಕರ್ಪೂರದ ಸಹಾಯದಿಂದ ಇಲಿಗಳ ಸಮಸ್ಯೆಯನ್ನು ನಿವಾರಿಸಬಹುದು.
icon

(2 / 8)

ಕರ್ಪೂರದ ವಾಸನೆ ತುಂಬಾ ಪ್ರಬಲವಾಗಿರುತ್ತದೆ. ಇಲಿಗಳು ಈ ವಾಸನೆ ಇಷ್ಟಪಡುವುದಿಲ್ಲ. ವಾಸನೆ ಸಹಿಸಲಾಗದೆ ತಕ್ಷಣ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ ಕರ್ಪೂರದ ಸಹಾಯದಿಂದ, ನೀವು ಇಲಿಗಳನ್ನು ನೈಸರ್ಗಿಕ ರೀತಿಯಲ್ಲಿ ಓಡಿಸಬಹುದು. ಅಲ್ಲದೆ ಇದು ಸುರಕ್ಷಿತ ಮತ್ತು ಅಗ್ಗದ ಪರಿಹಾರವೂ ಹೌದು.
icon

(3 / 8)

ಮೊದಲು, ನೀರಿಗೆ ಕರ್ಪೂರ ಸೇರಿಸಿ. ಒಂದು ಬಕೆಟ್ ನೀರಿಗೆ 4-5 ಕರ್ಪೂರದ ತುಂಡುಗಳನ್ನು ಹಾಕಬಹುದು. ಈ ನೀರಿನಿಂದ ಇಡೀ ಮನೆಯನ್ನು ಒರೆಸಿ. ಇಲಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳನ್ನು ಪತ್ತೆಮಾಡಿ ಸರಿಯಾಗಿ ಒರೆಸಿ.
icon

(4 / 8)

ಅಡುಗೆಮನೆ, ಸ್ಟೋರ್ ರೂಮ್ ಅಥವಾ ಬಾಗಿಲಿನ ಬಳಿ ಚೆನ್ನಾಗಿ ಒರೆಸಿ. ಇದಕ್ಕೂ ಹೆಚ್ಚು ಪರಿಣಾಮಕಾರಿ ಫಲಿತಾಂಶಕ್ಕೆ ಮನೆಯ ಮೂಲೆಯಲ್ಲಿ ಕರ್ಪೂರದ ಸಣ್ಣ ತುಂಡುಗಳನ್ನು ಸಹ ಇಡಬಹುದು.
icon

(5 / 8)

ಕರ್ಪೂರ ಕಡಿಮೆಯಿದ್ದರೆ, ನೀವು ಪುದೀನಾ ಎಣ್ಣೆಯನ್ನು ಸಹ ಸೇರಿಸಬಹುದು. ಮನೆಯಲ್ಲಿ ಕರ್ಪೂರವನ್ನು ಒರೆಸಿದ ತಕ್ಷಣ, ಅದರ ವಾಸನೆ ಇಲಿಗಳನ್ನು ಕಾಡಲು ಪ್ರಾರಂಭಿಸುತ್ತದೆ. ಹೀಗಾಗಿ ಅವು ಕರ್ಪೂರದ ವಾಸನೆ ಇಲ್ಲದ ಸ್ಥಳಗಳಿಗೆ ಓಡುತ್ತವೆ. ಮನೆ ಪೂರ್ತಿ ಇದೇ ವಾಸನೆ ಇದ್ದರೆ, ಮನೆಯಿಂದ ಹೊರಗೆ ಓಡುತ್ತವೆ.
icon

(6 / 8)

ಕೆಲವು ದಿನ ಬಿಡದೆ ನಿಯಮಿತವಾಗಿ ಕರ್ಪೂರ ಬಳಸಿದರೆ, ಇಲಿಗಳು ಮನೆಯಿಂದ ಸಂಪೂರ್ಣವಾಗಿ ದೂರವಿರುತ್ತವೆ. ಮತ್ತೆ ಮನೆ ಕಡೆ ಹಿಂತಿರುಗುವ ಧೈರ್ಯ ಮಾಡುವುದಿಲ್ಲ.
icon

(7 / 8)

ಕರ್ಪೂರವು ಇಲಿಗಳನ್ನು ದೂರ ಓಡಿಸುವುದು ಮಾತ್ರವಲ್ಲದೆ, ಮನೆಯೊಳಗೆ ಸುವಾಸನೆ ಹರಡುತ್ತದೆ. ಇದರ ಸುಗಂಧವು ಮನೆಗೆ ತಾಜಾತನವನ್ನು ತರುತ್ತದೆ. ಅಲ್ಲದೆ ಬ್ಯಾಕ್ಟೀರಿಯಾವನ್ನು ದೂರವಿರಿಸುತ್ತದೆ. ಇದರ ವಾಸನೆ ಇಲಿಗಳನ್ನು ಮಾತ್ರವಲ್ಲದೆ ಕೀಟಗಳನ್ನು ಸಹ ಮನೆಯಿಂದ ದೂರವಿರಿಸುತ್ತದೆ.
icon

(8 / 8)

ಇತರ ಗ್ಯಾಲರಿಗಳು