ವಿವೋ ವಿ 40ಇ ಫಸ್ಟ್ ಇಂಪ್ರೆಷನ್ ಹೇಗಿದೆ; ಸ್ಲಿಮ್ ವಿನ್ಯಾಸದ ಸ್ಮಾರ್ಟ್‌ಫೋನ್ ಲುಕ್, ಫೀಚರ್ಸ್
- Vivo V40e: ವಿವೋ ವಿ40ಇ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಮೊದಲ ಇಂಪ್ರೆಷನ್ ಮೂಡಿಸಿದೆ. 30,000 ರೂಪಾಯಿ ಒಳಗಿನ ಈ ಹೊಸ ಸ್ಮಾರ್ಟ್ ಫೋನ್ ನಿಮ್ಮ ಮಧ್ಯಮ ಬಜೆಟ್ ಖರೀದಿಗೆ ಉತ್ತಮ ಆಯ್ಕೆ. ಫೋನ್ ಹೇಗಿದೆ, ಅದರ ವಿನ್ಯಾಸ, ಬ್ಯಾಟರಿ ಸೇರಿದಂತೆ ವಿಶೇಷಣಗಳು ಹೀಗಿವೆ.
- Vivo V40e: ವಿವೋ ವಿ40ಇ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಮೊದಲ ಇಂಪ್ರೆಷನ್ ಮೂಡಿಸಿದೆ. 30,000 ರೂಪಾಯಿ ಒಳಗಿನ ಈ ಹೊಸ ಸ್ಮಾರ್ಟ್ ಫೋನ್ ನಿಮ್ಮ ಮಧ್ಯಮ ಬಜೆಟ್ ಖರೀದಿಗೆ ಉತ್ತಮ ಆಯ್ಕೆ. ಫೋನ್ ಹೇಗಿದೆ, ಅದರ ವಿನ್ಯಾಸ, ಬ್ಯಾಟರಿ ಸೇರಿದಂತೆ ವಿಶೇಷಣಗಳು ಹೀಗಿವೆ.
(1 / 5)
ವಿ 40 ಸರಣಿಯಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಫೋನ್ ವಿವೋ ವಿ40 ಇ. ಇದು ವಿವೋ ವಿ 40 ಸರಣಿಯನ್ನು ಹೋಲುವ ವಿನ್ಯಾಸವನ್ನೇ ಉಳಿಸಿಕೊಂಡಿದ್ದರೂ, ಫೋನ್‌ಗೆ ಬಳಸಿರುವ ಮಟೀರಿಯಲ್ ಮತ್ತು ಕ್ಯಾಮೆರಾ ಮಾಡ್ಯೂಲ್‌ನಲ್ಲಿ ವ್ಯತ್ಯಾಸಗಳಿವೆ. ವಿವೋ ವಿ 40 ಇ ಬಾಡಿ ಪ್ಲಾಸ್ಟಿಕ್ ಮಟೀರಿಯಲ್‌ನದ್ದು. ಹೀಗಾಗಿ ನೋಡಲು ತುಂಬಾ ಪ್ರೀಮಿಯಂ ಅನಿಸುವುದಿಲ್ಲ. ಅಲ್ಲದೆ ಕೈಯಲ್ಲಿ ಸಾಕಷ್ಟು ಜಾರುತ್ತದೆ. ಮಿಂಟ್ ಗ್ರೀನ್ ಬಣ್ಣ ಆಕರ್ಷಕವಾಗಿದೆ.(Aishwarya Panda/ HT Tech)
(2 / 5)
ವಿವೋ ವಿ 40 ಇ 6.77-ಇಂಚಿನ 3ಡಿ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಇದು ಆಹ್ಲಾದಕರ ಮತ್ತು ಎಚ್‌ಡಿ ವೀಕ್ಷಣೆಯ ಅನುಭವ ನೀಡುತ್ತದೆ. ಈಗಿನಂತೆ, ಸ್ಮಾರ್ಟ್ಫೋನ್ 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ.(Aishwarya Panda/ HT Tech)
(3 / 5)
ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ವಿವೋ ವಿ40 ಇ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ವಿಡಿಯೋ ಸ್ಕ್ರಾಲ್ ಮಾಡುವುದು, ಸಂದೇಶ ಕಳುಹಿಸುವುದು, ವಿಡಿಯೊ ನೋಡುವುದು ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು.(Aishwarya Panda/ HT Tech)
(4 / 5)
ಛಾಯಾಗ್ರಹಣಕ್ಕಾಗಿ, ವಿವೋ ವಿ 40 ಇ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸೋನಿ ಐಎಂಎಕ್ಸ್ 882 ಮತ್ತು 2 ಎಕ್ಸ್ ಪೋರ್ಟ್ರೇಟ್ ಮೋಡ್‌ನೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದೆ.(Aishwarya Panda/ HT Tech)
ಇತರ ಗ್ಯಾಲರಿಗಳು