ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

  • India vs England 1st Test Records: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ 28 ರನ್​ಗಳಿಂದ ಹೀನಾಯ ಕಂಡಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಕೆಲವು ಆಟಗಾರರು ಮುರಿದ ದಾಖಲೆಗಳ ಪಟ್ಟಿ ಇಲ್ಲಿದೆ.

ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್​ನಲ್ಲಿ ಭಾರತ ತಂಡವನ್ನು ಸೋಲಿಸಿದ ಇತಿಹಾಸದಲ್ಲಿ ಮೊದಲ ತಂಡ ಎನಿಸಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಇಲ್ಲಿ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಆಡಿದ 5ರಲ್ಲಿ 4 ಗೆಲುವು, 1 ಡ್ರಾ ಸಾಧಿಸಿತ್ತು.
icon

(1 / 9)

(PTI)

ಜೋ ರೂಟ್ ಅವರು ಸಚಿನ್ ತೆಂಡೂಲ್ಕರ್ ಅವರ 2535 ರನ್‌ಗಳ ದಾಖಲೆಯನ್ನು ಮುರಿದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ರೂಟ್​ ಭಾರತದ ವಿರುದ್ಧ 26 ಟೆಸ್ಟ್‌ಗಳಲ್ಲಿ 2557 ರನ್ ಗಳಿಸಿದ್ದಾರೆ.
icon

(2 / 9)

(AFP)

ಜೋ ರೂಟ್ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ 2555 ರನ್ ಗಳಿಸಿದ ದಾಖಲೆಯನ್ನು ಮುರಿದು ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ರೂಟ್​​ ಹೆಸರಿನಲ್ಲಿ ಈಗ 2557 ರನ್‌ಗಳಿವೆ.
icon

(3 / 9)

(REUTERS)

ಮೊದಲನೇ ಟೆಸ್ಟ್ ವೇಳೆ ಜೋ ರೂಟ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ​ 4000 ರನ್ ಗಳಿಸಿದ ಇತಿಹಾಸದಲ್ಲಿ ಮೊದಲ ಬ್ಯಾಟರ್ ಎನಿಸಿದ್ದಾರೆ. 48 ಪಂದ್ಯಗಳಲ್ಲಿ 4018 ರನ್ ಗಳಿಸಿದ್ದಾರೆ.
icon

(4 / 9)

ಅಲಿ ಪೋಪ್ ಅವರು 196 ರನ್ ಸಿಡಿಸಿ ತಮ್ಮ ದೇಶದ ಮಾಜಿ ಕ್ರಿಕೆಟಿಗ ಅಲೆಸ್ಟೈರ್ ಕುಕ್ ಅವರ 12 ವರ್ಷಗಳ ಹಳೆಯ ದಾಖಲೆ ಮುರಿದರು. ಭಾರತದ ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಪರ ಗರಿಷ್ಠ ವೈಯಕ್ತಿಕ ಸ್ಕೋರರ್ ಎನಿಸಿಕೊಂಡರು.
icon

(5 / 9)

ಸ್ಪಿನ್ನರ್ ಟಾಮ್ ಹಾರ್ಟ್ಲಿ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಪಡೆದ 7ನೇ ಇಂಗ್ಲಿಷ್ ಆಟಗಾರರಾದರು. ಹೈದರಾಬಾದ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 7 ಭಾರತೀಯ ಬ್ಯಾಟರ್‌ಗಳನ್ನು ಔಟ್ ಮಾಡಿ 62 ರನ್‌ ಬಿಟ್ಟುಕೊಟ್ಟರು.
icon

(6 / 9)

ಸೌರವ್ ಗಂಗೂಲಿ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ರೋಹಿತ್ 468 ಪಂದ್ಯಗಳಲ್ಲಿ 18,483 ರನ್ ಗಳಿಸಿದ್ದರೆ, ಗಂಗೂಲಿ 421 ಪಂದ್ಯಗಳಲ್ಲಿ 18,433 ರನ್ ಗಳಿಸಿದ್ದಾರೆ.
icon

(7 / 9)

ಆರ್​​ ಅಶ್ವಿನ್ ಅವರು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬೌಲರ್ ಎನಿಸಿದರು. 31 ಡಬ್ಲ್ಯಟಿಸಿ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ.
icon

(8 / 9)

ರವೀಂದ್ರ ಜಡೇಜಾ ಅವರು ಜಾವಗಲ್ ಶ್ರೀನಾಥ್ (551) ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಆರನೇ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. 332 ಪಂದ್ಯಗಳಲ್ಲಿ 553 ವಿಕೆಟ್‌ ಕಿತ್ತಿದ್ದಾರೆ.
icon

(9 / 9)

(ANI )

ಇತರ ಗ್ಯಾಲರಿಗಳು