ಜಿಡಿಪಿ ಪ್ರಕಾರ ಭಾರತದ ಟಾಪ್ 10 ಶ್ರೀಮಂತ ನಗರಗಳು ಯಾವು. ಬೆಂಗಳೂರಿಗೆ ಎಷ್ಟನೇ ಸ್ಥಾನ
- 2024ರಲ್ಲಿ ಭಾರತದ GDP ಗೆ ಗಣನೀಯವಾಗಿ ಕೊಡುಗೆ ನೀಡುವ ಇತರ ಪ್ರಮುಖ ನಗರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮುಂಬೈ, ದೆಹಲಿ, ಕೋಲ್ಕತ್ತಾ ನಂತರ ಬೆಂಗಳೂರು ಇದೆ. ಒಟ್ಟು ಹತ್ತು ನಗರಗಳ ಪಟ್ಟಿ, ಆದಾಯ ಪ್ರಮಾಣ ಹಾಗೂ ಬೆಳವಣಿಗೆ ಕ್ಷೇತ್ರಗಳ ಮಾಹಿತಿ ಇಲ್ಲಿದೆ.
- 2024ರಲ್ಲಿ ಭಾರತದ GDP ಗೆ ಗಣನೀಯವಾಗಿ ಕೊಡುಗೆ ನೀಡುವ ಇತರ ಪ್ರಮುಖ ನಗರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮುಂಬೈ, ದೆಹಲಿ, ಕೋಲ್ಕತ್ತಾ ನಂತರ ಬೆಂಗಳೂರು ಇದೆ. ಒಟ್ಟು ಹತ್ತು ನಗರಗಳ ಪಟ್ಟಿ, ಆದಾಯ ಪ್ರಮಾಣ ಹಾಗೂ ಬೆಳವಣಿಗೆ ಕ್ಷೇತ್ರಗಳ ಮಾಹಿತಿ ಇಲ್ಲಿದೆ.
(1 / 10)
1.. ಭಾರತದ ವಾಣಿಜ್ಯ ನಗರಿ ಮುಂಬೈ ಆದಾಯದ ಪ್ರಮಾಣ $368 ಬಿಲಿಯನ್. ಹಣಕಾಸು, ಬಾಲಿವುಡ್, ವ್ಯಾಪಾರ, ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಮುಂಬೈ ಮುಂದೆ.
(2 / 10)
2. ಭಾರತದ ರಾಜಧಾನಿ ನಗರಿ ದೆಹಲಿ ಆದಾಯ ಪ್ರಮಾಣ $167 ಬಿಲಿಯನ್. ದೆಹಲಿಯು ಸರ್ಕಾರಿ ಸೇವೆಗಳು, ಚಿಲ್ಲರೆ ವ್ಯಾಪಾರ, ಐಟಿ, ಪ್ರವಾಸೋದ್ಯಮಕ್ಕೆ ಹೆಸರುವಾಸಿ.
(3 / 10)
3. ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾ ದ ಆದಾಯ ಪ್ರಮಾಣವು $150 ಬಿಲಿಯನ್. ಕೋಲ್ಕತ್ತಾವು ಸೆಣಬು, ಉಕ್ಕು, ಚಹಾ, ಜವಳಿ ವಹಿವಾಟಿಗೆ ಪ್ರಸಿದ್ದಿ.
(4 / 10)
4. ಐಟಿ ಹಾಗೂ ಉದ್ಯಾನ ನಗರಿ ಎಂದು ಹೆಸರಾದ ಬೆಂಗಳೂರು ಆದಾಯ $110 ಬಿಲಿಯನ್. ಐಟಿ, ಸ್ಟಾರ್ಟ್‌ಅಪ್‌ಗಳು, ಏರೋಸ್ಪೇಸ್, ಬಯೋಟೆಕ್ನಾಲಜಿಯಲ್ಲಿ ಬೆಂಗಳೂರಿಗೆ ಹೆಸರು ಬಂದಿದೆ.
(5 / 10)
5..ತಮಿಳುನಾಡಿನ ರಾಜಧಾನಿ ಚೆನ್ನೈನಗರದ ಆದಾಯ ಪ್ರಮಾಣ $78.6 ಬಿಲಿಯನ್. ಚೆನ್ನೈ ನಗರ ಆಟೋಮೊಬೈಲ್, ಉತ್ಪಾದನೆ, ಐಟಿ, ಬಂದರು ವ್ಯಾಪಾರದಲ್ಲಿ ಮುಂದಡಿ ಇಟ್ಟಿದೆ.
(6 / 10)
6. ಒಂದು ಕಾಲಕ್ಕೆ ಮುತ್ತಿನ ನಗರಿ ಎಂದೇ ಹೆಸರಾಗಿದ್ದ ಹೈದರಾಬಾದ್‌ನ ಆದಾ ಯ ಪ್ರಮಾಣ $75 ಬಿಲಿಯನ್. ಈ ನಗರವು ಐಟಿ, ಫಾರ್ಮಾಸ್ಯುಟಿಕಲ್ಸ್, ಬಯೋಟೆಕ್ನಾಲಜಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ.
(8 / 10)
8. ಗುಜರಾತ್‌ನ ರಾಜಧಾನಿ ಅಹಮದಾಬಾದ್ ಆದಾಯ ಪ್ರಮಾಣ $68 ಬಿಲಿಯನ್. ಜವಳಿ, ರಾಸಾಯನಿಕಗಳು, ರತ್ನಗಳು, ಪೆಟ್ರೋಕೆಮಿಕಲ್ಸ್ ಉದ್ಯಮದಲ್ಲಿ ಅಹಮದಾಬಾದ್ ಮುಂಚೂಣಿಯಲ್ಲಿದೆ.
(9 / 10)
9. ಗುಜರಾತ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಸೂರತ್ ನಗರದ ವಹಿವಾಟು ಪ್ರಮಾಣ $65 ಬಿಲಿಯನ್. ಇಲ್ಲಿ ಡೈಮಂಡ್ ಕಟಿಂಗ್, ಜವಳಿ, ವ್ಯಾಪಾರ ಹೆಚ್ಚು ಆರ್ಥಿಕ ವೃದ್ದಿಗೆ ದಾರಿ ಮಾಡಿಕೊಟ್ಟಿದೆ.
ಇತರ ಗ್ಯಾಲರಿಗಳು