ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ

  • ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಆಲಮಟ್ಟಿ, ಕೆಆರ್‌ಎಸ್.‌ ಬೆಂಗಳೂರು,ಮೈಸೂರು, ಹಾವೇರಿ, ಮಡಿಕೇರಿಯಲ್ಲಿ ರೂಪಿಸಿರುವ ವಿಭಿನ್ನ ಗಾರ್ಡನ್‌ಗಳ ಮಾಹಿತಿ ಇಲ್ಲಿ ಒದಗಿಸಿದೆ.

ಕರ್ನಾಟಕ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲಿ ವಿಭಿನ್ನ ಗಾರ್ಡನ್‌ಗಳೂ ಇವೆ. ಬೆಂಗಳೂರು, ಮೈಸೂರು, ಮಡಿಕೇರಿ, ಹಾವೇರಿ, ಆಲಮಟ್ಟಿಯ ವಿಭಿನ್ನ ಗಾರ್ಡನ್‌ಗಳ ನೋಟ ಇಲ್ಲಿದೆ.
icon

(1 / 11)

ಮಡಿಕೇರಿ ರಾಜಾಸೀಟ್‌//ಮಂಜಿನ ನಗರಿ ಮಡಿಕೇರಿಯ ಎತ್ತರ ಸ್ಥಳದಲ್ಲಿದೆ ರಾಜಾಸೀಟ್‌. ಈ ವಿಶಿಷ್ಟ ಉದ್ಯಾನವವನ್ನು ಒಂದು ಸುತ್ತು ಹಾಕುವ ಜತೆಗೆ ತುದಿಯಲ್ಲಿ ನಿಂತು ನೋಡಿದರೆ ಪಶ್ಚಿಮ ಘಟ್ಟಗಳ ಸೌಂದರ್ಯ ರಾಶಿ ಎದುರಿಗೆ ನಿಂತ ಹಾಗಾಗುತ್ತದೆ. ಸೂರ್ಯಾಸ್ತವೂ ಇಲ್ಲಿ ವೀಕ್ಷಣೆಯ ವಿಶೇಷ. ಪ್ರವಾಸಿಗರಿಗೆ ಹಲವು ರೀತಿ ಸಾಹಸ ಚಟುವಟಿಕೆಗಳೂ ಇಲ್ಲಿವೆ 
icon

(2 / 11)

ಕಬ್ಬನ್‌ ಪಾರ್ಕ್‌ ಬೆಂಗಳೂರು// 1870 ರಲ್ಲಿ ನಿರ್ಮಿತವಾಗಿರುವ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗೂ ಕಸ್ತೂರ ಬಾ ರೋಡ್ ಮುಖಾಂತರ ಇದನ್ನು ಪ್ರವೇಶಿಸಬಹುದು. ಮೊದಲಿಗೆ 100 ಎಕರೆ ವಿಸ್ತಿರ್ಣ ಹೊಂದಿದ್ದ ಈ ಪ್ರದೇಶವು ತದನಂತರ ಸುಮಾರು 300 ಎಕರೆವರೆಗೂ ವಿಸ್ತರಣೆಗೊಂಡಿದೆ. 
icon

(3 / 11)

ಕರ್ಜನ್‌ ಪಾರ್ಕ್‌ ಮೈಸೂರು//ಕರ್ಜನ್ ಪಾರ್ಕ್ ಭಾರತದ  ಮೈಸೂರಿನಲ್ಲಿರುವ ಸುಂದರವಾದ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನವನ . 1899 ರಿಂದ 1905 ರವರೆಗೆ ಭಾರತದ ವೈಸರಾಯ್ ಲಾರ್ಡ್ ಕರ್ಜನ್ ಅವರ ಹೆಸರನ್ನು ಈ ಉದ್ಯಾನವನಕ್ಕೆ ಇಡಲಾಯಿತು. ಅವರು ತಮ್ಮ ಅಧಿಕಾರಾವಧಿಯಲ್ಲಿ ಉದ್ಯಾನವನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಉದ್ಯಾನವನವು ಮೈಸೂರು ಅರಮನೆಯ ಸಮೀಪ 22 ಎಕರೆಗಳಷ್ಟು ವಿಸ್ತಾರವಾಗಿದೆ
icon

(4 / 11)

ಉತ್ಸವ ರಾಕ್‌ ಗಾರ್ಡನ್‌ ಹಾವೇರಿ//ಉತ್ಸವ್ ರಾಕ್ ಗಾರ್ಡನ್ ಎಂಬುದು  ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯಲ್ಲಿರುವ ಒಳಾಂಗಣ ಮತ್ತು ಹೊರಾಂಗಣ ಶಿಲ್ಪ ಸಂಗ್ರಹಾಲಯ. ಕಲಾವಿದ ಸೊಲಬ್ಬಕ್ಕರ್‌ನವರು ಕನಸಿನ ಗಾರ್ಡನ್‌ ಇದು. ಬದುಕಿನ ಮಜಲುಗಳನ್ನು ಕಲೆಗಳ ಮೂಲಕ ವೀಕ್ಷಿಸುವ ವಿಭಿನ್ನ ಅನುಭವವನ್ನು ಈ ಗಾರ್ಡನ್‌ ನೀಡುತ್ತದೆ. ಉದ್ಯಾನವು ಉತ್ತರ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ-ಶಿಲ್ಪಗಳನ್ನು ಒಳಗೊಂಡಿದೆ.
icon

(5 / 11)

ಬೃಂದಾವನ ಉದ್ಯಾನವನ ಕೆಆರ್‌ಎಸ್‌ ಮಂಡ್ಯ//ಕಾವೇರಿ ನದಿಗೆ ಶತಮಾನದ ಹಿಂದೆಯೇ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿಯೇ ವಿಶೇಷ ಉದ್ಯಾನ ರೂಪಿಸಲಾಗಿದೆ. ಇದನ್ನು ಬೃಂದಾವನ ಗಾರ್ಡನ್ಸ್‌ ಎಂದು ಕರೆಯಲಾಗುತ್ತದೆ. ಅಲ್ಲಿನ ಬೆಳಕಿನ ಕಾರಂಜಿ ವಿಶೇಷ ಆಕರ್ಷಣೆ, ಹಲವಾರು ಚಿತ್ರಗಳ ಚಿತ್ರೀಕರಣವೂ ಇಲ್ಲಿ ಆಗಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆ ಈ ತಾಣ.
icon

(6 / 11)

ಲವಕುಶ ಉದ್ಯಾನವನ ಬಾಗಲಕೋಟೆ//ಆಲಮಟ್ಟಿಗೆ ಹೊಂದಿಕೊಂಡಂತೆ ಇರುವ ಬಾಗಲಕೋಟೆ ಜಿಲ್ಲೆಯ ಸೀತಿಮನಿ ಗುಡ್ಡದ ಸೀತಾ ಮಾತಾ ದೇವಸ್ಥಾನದ ಮುಂದೆ  ನಿರ್ಮಿಸಿರುವ ಲವಕುಶ ಉದ್ಯಾನ ಆಕರ್ಷಕವಾಗಿದೆ. ಇಲ್ಲಿ ರಾಮಾಯಣದ ಹಲವಾರು ಪಾತ್ರಗಳಿಗೆ ಕಲಾ ರೂಪ ನೀಡಲಾಗಿದೆ.
icon

(7 / 11)

ಕಿಷ್ಕಿಂಧ ವನ ಮೈಸೂರು//ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಗಣಪತಿಸಚ್ಚಿದಾನಂದ ಆಶ್ರಮದ ಬೋನ್ಸಾಯ್‌ ಗಿಡಗಳ ಕಿಷ್ಕಿಂಧ ವನ ಆಕರ್ಷಕವಾಗಿದೆ. ಎರಡು ದಶಕದ ಹಿಂದೆಯೇ ಆರಂಭಗೊಂಡಿರುವ ಈ ಕಿಷ್ಕಿಂಧ ವನದಲ್ಲಿ ನೂರು ವರ್ಷಕ್ಕೂ ಹಳೆಯಾದ ಬೋನ್ಸಾಯ್‌ಗಳ ಸಂಗ್ರಹವಿದೆ. 
icon

(8 / 11)

ದರಿಯಾದೌಲತ್‌ ಶ್ರೀರಂಗಪಟ್ಟಣ//ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪಟ್ಟಣದೊಳಗೆ ಆಕರ್ಷಕ ಉದ್ಯಾನವನ ಮತ್ತು ಟಿಪ್ಪುವಿನ ಬೇಸಿಗೆ ಅರಮನೆಯನ್ನು 'ದರಿಯಾ ದೌಲತ್' (ಸಂಪತ್ತಿನ ಸಮುದ್ರ) ಎಂದು ಕರೆಯಲಾಗುತ್ತದೆ. ಇದು ಟಿಪ್ಪುವಿನ ವಿಶ್ರಾಂತಿ ಗೃಹ ಮತ್ತು ಮನೋರಂಜನಾ ಕೇಂದ್ರವೂ ಆಗಿತ್ತು. ವಿದೇಶಿ ಪ್ರವಾಸಿ ರೀಸ್, ಎಸ್ಫಾನ್‌ನಲ್ಲಿರುವ ಅರಮನೆಯನ್ನು ಹೊರತುಪಡಿಸಿ ಭಾರತದಲ್ಲಿ ಬೇರೆ ಯಾವುದೇ ಸ್ಥಳವಿಲ್ಲ ಎಂದು ಅದರ ಗೋಡೆಗಳಾದ್ಯಂತ ಬಣ್ಣ ವರ್ಣಚಿತ್ರಗಳ ಅಲಂಕಾರದಲ್ಲಿ ಹೇಳಿದ್ದಾರೆ
icon

(9 / 11)

ಮೊಘಲ್‌ ಉದ್ಯಾನವನ ಆಲಮಟ್ಟಿ ವಿಜಯಪುರ//ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್‌ ಬಹದ್ದೂರು ಶಾಸ್ತ್ರಿ ಆಣೆಕಟ್ಟಿನ ಕೆಳ ಭಾಗದಲ್ಲಿ 77 ಎಕರೆ ಭೂಮಿಯಲ್ಲಿ 4 ವಿಶ್ವ ಪರಂಪರೆ ಉದ್ಯಾನಗಳನ್ನು ಎರಡು ದಶಕದ ಹಿಂದೆ ನಿರ್ಮಿಸಲಾಗಿದೆ. ಮೊಘಲ್ ಗಾರ್ಡನ್, ಇಟಾಲಿಯನ್ ಶೈಲಿ ಲಾನ್,  ಫ್ರೆಂಚ್ ಉದ್ಯಾನ, ರೋಸ್ ಉದ್ಯಾನ ಗಮನ ಸೆಳೆಯುತ್ತದೆ.
icon

(10 / 11)

ಲಾಲ್‌ ಬಾಗ್‌ ಬೆಂಗಳೂರು//ಬೆಂಗಳೂರಿನ ಪುರಾತನ ಉದ್ಯಾನ. ಪ್ರವಾಸಿ ತಾಣ, ಲಾಲ್‌ಬಾಗ್ 240 ಎಕರೆ ವಿಶಾಲದ ಉದ್ಯಾನವನವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿ ನೆಲೆಗೊಂಡಿದೆ. ಇದು ಎರಡು ಪುಷ್ಪ ಪ್ರದರ್ಶನಗಳನ್ನು ಹೊಂದಿದೆ. ನೂರು ವರ್ಷಗಳಿಗಿಂತ ಹೆಚ್ಚು ಹಳೆಯದಾದ ಅನೇಕ ಮರಗಳೊಂದಿಗೆ 1,000 ಕ್ಕೂ ಹೆಚ್ಚು ಜಾತಿಯ ಸಸ್ಯಗಳ ಇಲ್ಲಿರುವುದು ವಿಶೇಷ.
icon

(11 / 11)

ಇತರ ಗ್ಯಾಲರಿಗಳು