Liver Health: ಮದ್ಯ ಕುಡಿಯುವುದರಿಂದ ಮಾತ್ರವಲ್ಲ, ಈ ಆಹಾರಗಳ ಅತಿಯಾದ ಸೇವನೆ ಯಕೃತ್ತಿಗೆ ಮಾಡಬಹುದು ಹಾನಿ
ಮದ್ಯಪಾನವು ಯಕೃತ್ತಿಗೆ ಹಾನಿ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಕಾರಣದಿಂದಾಗಿ ಮಾತ್ರವಲ್ಲ, ನಿಮ್ಮ ದೈನಂದಿನ ಆಹಾರದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಯಕೃತ್ತಿನ ಆರೋಗ್ಯಕ್ಕೂ ಹಾನಿಯಾಗಬಹುದು. ಲಿವರ್ ಗೆ ಹಾನಿ ಮಾಡಬಹುದಾದ ಆಹಾರಗಳ ಬಗ್ಗೆ ತಿಳಿಯೋಣ.
(1 / 10)
ಯಕೃತ್ತಿನ ಹಾನಿಗೆ ಆಲ್ಕೋಹಾಲ್ ಮಾತ್ರವಲ್ಲ ಕೆಲವೊಂದು ಆಹಾರಗಳೂ ಕಾರಮವಾಗುತ್ತವೆ. ಬಹುತೇಕರು ಯಕೃತ್ತಿನ ಕಾಯಿಲೆ ಎಂದಾಕ್ಷಣ ಮದ್ಯ ಸೇವಿಸಿ ಬರುತ್ತದೆ ಎಂದು ಭಾವಿಸಿದ್ದಾರೆ. ಆಹಾರದಿಂದಲೂ ಯಕೃತ್ತು ಹಾನಿಗೊಳಗಾಗುತ್ತದೆ ಎಂಬುದ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ.
(Shutterstock)(2 / 10)
ಲಿವರ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲಿನ ವಿಷಾಂಶ ಮತ್ತು ತ್ಯಾಜ್ಯವನ್ನು ತೆಗೆದುಹಾಕುತ್ತದೆ.
(Canva)(3 / 10)
ಪಿತ್ತಜನಕಾಂಗದ ಕಾಯಿಲೆಯು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೆಲವೊಂದು ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಅವು ಯಾವ್ಯಾವು ಎಂಬುದು ಇಲ್ಲಿ ತಿಳಿದುಕೊಳ್ಳಿ.
(Canva)(4 / 10)
ಲಿವರ್ ಆರೋಗ್ಯ ದೃಷ್ಟಿಯಿಂದ ಆಲ್ಕೋಹಾಲ್ ಒಳ್ಳೆಯದಲ್ಲ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಾಗಿರಿಸಲು ಕೆಲವರು ಹೆಚ್ಚು ಮದ್ಯ ಕುಡಿಯುತ್ತಾರೆ. ಇದು ಕೆಲವೊಮ್ಮೆ ಚಟವಾಗಿ ಬದಲಾಗಬಹುದು. ಆದರೆ, ಇದು ಒಳ್ಳೆಯದಲ್ಲ. ಆದಷ್ಟು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ.
(Canva)(7 / 10)
ಉಪ್ಪು ಅಧಿಕವಾಗಿರುವ ಆಹಾರವನ್ನು ಸೇವಿಸಬಾರದು. ಉಪ್ಪು ಇರದ ಆಹಾರವನ್ನು ತಿನ್ನಲು ಆಗುವುದಿಲ್ಲ. ಹಾಗಂತ ಅತಿ ಹೆಚ್ಚು ಉಪ್ಪು ಇರುವ ಆಹಾರವನ್ನು ತಿನ್ನುವುದು ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
(Canva)(8 / 10)
ಅತಿಯಾಗಿ ಪಿಜ್ಜಾ, ಬರ್ಗರ್ ಇತ್ಯಾದಿ ಜಂಕ್ ಫುಡ್ ತಿನ್ನುವುದು ಕೂಡ ಒಳ್ಳೆಯದಲ್ಲ. ಇದು ಕೂಡ ಯಕೃತ್ತಿಯನ್ನು ಹಾನಿಗೊಳಿಸಬಹುದು.
(Canva)(9 / 10)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
(shutterstock)ಇತರ ಗ್ಯಾಲರಿಗಳು