ಲೋಕ ಸಮರ ಗೆಲ್ಲೋಕೆ ಕಾಂಗ್ರೆಸ್ 25 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 1 ಲಕ್ಷ ಸೇರಿ ನ್ಯಾಯ ಪತ್ರದಲ್ಲಿ ಏನೆಲ್ಲಾ ಇದೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕ ಸಮರ ಗೆಲ್ಲೋಕೆ ಕಾಂಗ್ರೆಸ್ 25 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 1 ಲಕ್ಷ ಸೇರಿ ನ್ಯಾಯ ಪತ್ರದಲ್ಲಿ ಏನೆಲ್ಲಾ ಇದೆ?

ಲೋಕ ಸಮರ ಗೆಲ್ಲೋಕೆ ಕಾಂಗ್ರೆಸ್ 25 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 1 ಲಕ್ಷ ಸೇರಿ ನ್ಯಾಯ ಪತ್ರದಲ್ಲಿ ಏನೆಲ್ಲಾ ಇದೆ?

  • ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂಪಾಯಿ, ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ಸೇರಿದಂತೆ 25 ಗ್ಯಾರಂಟಿಗಳ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ನ್ಯಾಯ ಪತ್ರದ ಹೆಸರಿನಲ್ಲಿ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಶುಕ್ರವಾರ (ಏಪ್ರಿಲ್ 5) ನಡೆದ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ 2024 ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಪಿ ಚಿದಂಬರಂ ಇದ್ದಾರೆ.
icon

(1 / 7)

(Hindustan Times)

ನ್ಯಾಯ ಪತ್ರ ಎಂದು ಕರೆಯಲ್ಪಡುವ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಐದು ನ್ಯಾಯ ಸ್ತಂಭಗಳ ಮೇಲೆ ಕೇಂದ್ರೀಕರಿಸಿದೆ. ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ ಹಾಗೂ ಶ್ರಮಿಕ್ ನ್ಯಾಯ ಹಾಗೂ ಹಿಸ್ಸೆದಾರಿ ನ್ಯಾಯವಾಗಿದೆ.
icon

(2 / 7)

(HT)

ಕಾಂಗ್ರೆಸ್ ಬಿಡುಗಡೆ ಮಾಡಿರುವ 25 ಗ್ಯಾರಂಟಿಗಳ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ನಗದು, ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 50 ರಷ್ಟು ಮೀಸಲಾತಿ, ಕೆಲಸದ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯೂ ಸೇರಿದೆ
icon

(3 / 7)

2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಟ್ಟು 14 ಭರವಸೆಗಳನ್ನು ನೀಡಿದೆ. ಪ್ರತಿ ಬಡ ಭಾರತೀಯ ಕುಟುಂಬಕ್ಕೆ ಯಾವುದೇ ಷರತ್ತುಗಳು ಇಲ್ಲದೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ
icon

(4 / 7)

(REUTERS)

2025 ರಿಂದ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ. ಹೆಚ್ಚಿನ ಮಹಿಳೆಯನ್ನು ನ್ಯಾಯಾಧೀಶರು, ಕಾನೂನು ಅಧಿಕಾರಿಗಳು, ಪಟ್ಟಿ ಮಾಡಿದ ಕಂಪನಿಗಳ ಮಂಡಳಿಗಳಲ್ಲಿ ನಿರ್ದೇಶಕರು ಸೇರಿದಂತೆ ಇತರೆ ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ.
icon

(5 / 7)

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಬಹುಮತ ನೀಡಿದರೆ ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯ ವೇತನವನ್ನು ದ್ವಿಗುಣಗೊಳಿಸಲಾಗುತ್ತದೆ. ಬ್ಯಾಂಕ್‌ಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸ್ವಸಹಾಯ ಗುಂಪುಗಳಿಗೆ ಸಾಲದ ಮೊತ್ತ ವಿಸ್ತರಣೆ ಮಾಡುವುದಾಗಿ ಹೇಳಿದೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(7 / 7)

ಇತರ ಗ್ಯಾಲರಿಗಳು