Lok Sabha Elections 2024: ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಗುರುತಿನ ಚೀಟಿ ಇಲ್ಲದಿದ್ದರೆ ಹೀಗೆ ವೋಟ್ ಹಾಕಿ
- ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಚಿಂತೆ ಮಾಡಬೇಡಿ. ಚುನಾವಣಾ ಆಯೋಗ ನಿಮಗಾಗಿ ಹಲವು ಪರಿಹಾರವನ್ನು ಪರಿಚಯಿಸಿದೆ. ವೋಟರ್ ಐಡಿ ಇಲ್ಲದವರು ಈ ಕೆಳಗಿನ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನ ಬಳಿಸಿ ಮತದಾನ ಮಾಡಿ.
- ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಚಿಂತೆ ಮಾಡಬೇಡಿ. ಚುನಾವಣಾ ಆಯೋಗ ನಿಮಗಾಗಿ ಹಲವು ಪರಿಹಾರವನ್ನು ಪರಿಚಯಿಸಿದೆ. ವೋಟರ್ ಐಡಿ ಇಲ್ಲದವರು ಈ ಕೆಳಗಿನ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನ ಬಳಿಸಿ ಮತದಾನ ಮಾಡಿ.
(1 / 11)
ಚುನಾವಣೆಯಲ್ಲಿ ಮತ ಚಲಾಯಿಸುವುದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರ ಜವಾಬ್ದಾರಿಯಾಗಿದೆ. ನಿಮ್ಮ ಮತ ಚಲಾಯಿಸಲು ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಪರವಾಗಿಲ್ಲ. ಈ ಕೆಳಗಿನ ಯಾವುದಾದರೂ ಒಂದು ದಾಖಲೆ ತೆಗೆದುಕೊಂಡು ಹೋಗಿ ನಿಮ್ಮ ಮತವನ್ನು ಚಲಾಯಿಸಿ.
(HT File Photo)(3 / 11)
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಪ್ರಕಾರ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ನೀಡುವ ಸ್ಮಾರ್ಟ್ ಕಾರ್ಡ್ ಅನ್ನು ಮತದಾನದ ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು.
(File Photo)(4 / 11)
ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲಿದ್ದರೆ ಭಾರತ ಸರ್ಕಾರ ನೀಡುವ ಪಾಸ್‌ಪೋರ್ಟ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಿಕೊಂಡು ಹಕ್ಕು ಚಲಾಯಿಸಲು ಅವಕಾಶ ಇದೆ.
(File Photo)(5 / 11)
ವಿಕಲಚೇತನರಿಗೆ ನೀಡಲಾಗುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಯನ್ನು ಮತ ಚಲಾಯಿಸಲು ಗುರುತಿನ ಚೀಟಿಯಾಗಿಯೂ ಬಳಸಬಹುದು.
(HT File Photo)(6 / 11)
ಚಲಾವಣೆಯಲ್ಲಿರುವ ಡ್ರೈವಿಂಗ್ ಲೈಸೆನ್ಸ್ ಅನ್ನು ಮತ ಚಲಾಯಿಸಲು ಗುರುತಿನ ಚೀಟಿಯಾಗಿಯೂ ಬಳಸಲು ಅವಕಾಶ ಇದೆ.
(File Photo (Shutterstock))(7 / 11)
ಚುನಾವಣೆಯಲ್ಲಿ ಪ್ಯಾನ್ ಕಾರ್ಡ್ ಅನ್ನು ಮತದಾರರ ಗುರುತಿನ ಚೀಟಿಯಾಗಿಯೂ ಬಳಸಿಕೊಂಡು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
(File Photo)(8 / 11)
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಗುರುತಿನ ಚೀಟಿಗಳನ್ನು ಸಹ ಮತದಾರರ ಗುರುತಿನ ಚೀಟಿಯನ್ನಾಗಿ ಬಳಸಿಕೊಳ್ಳಬಹುದು.
(HT File Photo)(9 / 11)
ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್ ಅನ್ನು ಮತ ಚಲಾಯಿಸಲು ಗುರುತಿನ ಚೀಟಿಯಾಗಿಯೂ ಬಳಸಬಹುದು. ಕೇಂದ್ರ ಕಾರ್ಮಿಕ ಸಚಿವಾಲಯ ನೀಡಿದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ ಅನ್ನು ಮತ ಚಲಾಯಿಸಲು ಗುರುತಿನ ಚೀಟಿಯಾಗಿ ಬಳಸಬಹುದು.
(File Photo)(10 / 11)
ನೀವು ಪಿಂಚಣಿ ಪಡೆಯುತ್ತಿದ್ದರೆ ಪಿಂಚಣಿಯ ದೃಢೀಕರಣದ ದಾಖಲೆ ಪತ್ರವನ್ನು ತೋರಿಸಿ ನೀವು ಮತ ಚಲಾಯಿಸಬಹುದು, ಆದರೆ ನಿಮ್ಮ ಫೋಟೊ ಆ ದಾಖಲೆಯಲ್ಲಿ ಇರಬೇಕು.
(HT File Photo)ಇತರ ಗ್ಯಾಲರಿಗಳು