ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 2ನೇ ಹಂತದ ಮತದಾನ, ಗುಮ್ಮಟ ನಗರಿ ವಿಜಯಪುರದಲ್ಲಿ ಮುಗಿಲು ಮುಟ್ಟಿದ ಮತದಾರರ ಸಂಭ್ರಮ- ಚಿತ್ರನೋಟ

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 2ನೇ ಹಂತದ ಮತದಾನ, ಗುಮ್ಮಟ ನಗರಿ ವಿಜಯಪುರದಲ್ಲಿ ಮುಗಿಲು ಮುಟ್ಟಿದ ಮತದಾರರ ಸಂಭ್ರಮ- ಚಿತ್ರನೋಟ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ (ಮೇ 7) ನಡೆಯಿತು. ಗುಮ್ಮಟ ನಗರಿ ವಿಜಯಪುರದಲ್ಲಿ ಮತದಾರರ ಸಂಭ್ರಮ ಮುಗಿಲು ಮುಟ್ಟಿದ್ದು, ನರೇಗಾ ಕಾರ್ಮಿಕರಿಂದ ಹಿಡಿದು ಅನೇಕರು ಮತಚಲಾಯಿಸಿ ಸಂಭ್ರಮಿಸಿದರು. ಆ ಸಂಭ್ರಮದ ಆಯ್ದ ಚಿತ್ರನೋಟ ಇಲ್ಲಿದೆ. (ವರದಿ- ಸಮೀವುಲ್ಲಾ ಉಸ್ತಾದ್, ವಿಜಯಪುರ) 

ನರೇಗಾ ಕಾರ್ಮಿಕರು ಉತ್ಸಾಹದಿಂದ ಮತದಾನದ ಕರ್ತವ್ಯ ನಿಭಾಯಿಸಿ ನಂತರ ತಮ್ಮ ಎಂದಿನ ಕಾಯಕ ಮುಂದುವರೆಸುವ ಮೂಲಕ ಮಾದರಿಯಾದರು. ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿಮ, ಬಳಬಟ್ಟಿ ಮೊದಲಾದ ಗ್ರಾಮಗಳಲ್ಲಿ ನೊಂದಾಯಿತ ನರೇಗಾ ಕಾರ್ಮಿಕರು ಬೆಳಿಗ್ಗೆಯೇ ಮತದಾನ ಕೇಂದ್ರಕ್ಕೆ ತೆರಳಿ ಸಂಭ್ರಮದಿಂದ ಮತಚಲಾಯಿಸಿದರು. ನಂತರ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.
icon

(1 / 5)

ಪ್ರಜಾಪ್ರಭುತ್ವದ ಪರ್ವ ಮತದಾನದ ಸಂಭ್ರಮ. `ಪ್ರಥಮ ಬಾರಿಗೆ ಮತಚಲಾಯಿಸಿದ್ದೇನೆ, ನಮಗೆ ಸರಿಕಂಡ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರವೇ ಒಂದು ಅನನ್ಯ, ಈ ಅಧಿಕಾರವನ್ನು ಚಲಾಯಿಸಿದ ಅನುಭವ ಪಡೆದಿರುವೆ, ಪ್ರತಿ ಬಾರಿಯೂ ತಪ್ಪದೇ ಮತಚಲಾಯಿಸುವೆ ಎಂದು ಪ್ರಥಮ ಬಾರಿಗೆ ಮತಚಲಾಯಿಸಿದ ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಮತದಾರರಾದ ಗೂಜಿಬಾಯಿ, ಚಂದುಬಾಯಿ (ಬಲಚಿತ್ರ) ಅವರು ಸಾಂಪ್ರದಾಯಿಕ ಲಂಬಾಣಿ ಉಡುಪಿನಲ್ಲಿ ಬಂದು ಮತ ಚಲಾಯಿಸಿ ಸಂಭ್ರಮಿಸಿದರು.
icon

(2 / 5)

ವಿಜಯಪುರದ ಮತಗಟ್ಟೆಯಲ್ಲಿ ಮತದಾನಕ್ಕೆ ನಿಂತ ಮತದಾರರು.
icon

(3 / 5)

ವಿಜಯಪುರದ ಮತಗಟ್ಟೆಯಲ್ಲಿ ಮತದಾನಕ್ಕೆ ನಿಂತ ಮತದಾರರು.

ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ತಮ್ಮ 96 ವರ್ಷದ ಇಳಿ ವಯಸ್ಸಿನಲ್ಲಿ ಕೂಡ ಮರಿಮೊಮ್ಮಗಳೊಡನೆ ಮಸಬಿನಾಳ ಗ್ರಾಮದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿ ಎಲ್ಲರಿಗೂ ಆದರ್ಶರಾದ ಸಿದ್ದವ್ವ ಡೊನೂರ ಎಂಬ ಹಿರಿಯ ಮತದಾರರು.
icon

(4 / 5)

ಪ್ರಥಮ ಬಾರಿಗೆ ಮತಚಲಾಯಿಸಿದವರ ಖುಷಿಯ ಪಾರವೇ ಇರಲಿಲ್ಲ, ಪ್ರಥಮ ಬಾರಿಗೆ ಮತದಾನ ಕೇಂದ್ರಕ್ಕೆ ತೆರಳಿ ಮತಯಂತ್ರದ ಮೂಲಕ ತಮಗಿಷ್ಟದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಕರ್ತವ್ಯದಲ್ಲಿ ಭಾಗಿಯಾದ ಸಂತೋಷದಲ್ಲಿ ಸಾವಿರಾರು ಯುವಕರು, ಯುವತಿಯರು ಮಿಂದೆದ್ದರು. ಅಧಿಕಾರಿಗಳು ಕೂಡ ಮತ ಚಲಾಯಿಸಿ ಸಂಭ್ರಮಿಸಿದರು.
icon

(5 / 5)

IPL_Entry_Point

ಇತರ ಗ್ಯಾಲರಿಗಳು