Lok Sabha Election 2024: ಮಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ; ಫೋಟೊಸ್
- Lok Sabha Election 2024: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಕರಾವಳಿಯಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಅದರ ಫೋಟೊಸ್ ಇಲ್ಲಿದೆ.
- Lok Sabha Election 2024: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಕರಾವಳಿಯಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಅದರ ಫೋಟೊಸ್ ಇಲ್ಲಿದೆ.
(1 / 7)
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಜೇಶ್ ಚೌಟ ಹಾಗೂ ಉಡುಪಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಡಲನಗರಿ ಮಂಗಳೂರಲ್ಲಿ ಭಾನುವಾರ (ಏಪ್ರಿಲ್ 14) ರೋಡ್ ಶೋ ನಡೆಸಿದರು.
(2 / 7)
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಹರ್ಷಗೊಂಡ ಜನರು ನಮೋ ಅವರತ್ತ ಹೂಗಳನ್ನು ಎಸೆದು ಸಂಭ್ರಮಿಸಿದರು.
(Narendra Modi Twitter)(3 / 7)
ಮಂಗಳೂರಿನಲ್ಲಿ ನಡೆದ ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಮಲದ ಗುರುತನ್ನು ತೋರಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
(BJP )(4 / 7)
ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ಆಗಮಿಸಿದ ಪ್ರಧಾನಿ ಅವರು ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಜನರತ್ತ ಕೈ ಬೀಸಿದರು.
(PTI)(5 / 7)
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ಪಿವಿಎಸ್ ಜಂಕ್ಷನ್ ನಿಂದ ನವಭಾರತ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು.
(PTI)(6 / 7)
ತೆರೆದ ವಾಹನದಲ್ಲಿ ಮೋದಿ ಅವರು ಅಭ್ಯರ್ಥಿ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಜೊತೆ ಎಂ.ಜಿ. ರಸ್ತೆಯಾಗಿ, ಪಿವಿಎಸ್ ಜಂಕ್ಷನ್ ನಿಂದ ನವಭಾರತ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು.
(Narendra Modi Twitter)ಇತರ ಗ್ಯಾಲರಿಗಳು