ಲೋಕಸಭೆ ಚುನಾವಣೆ 2024; ರಾಷ್ಟ್ರಪತಿ ದ್ರೌಪದಿ ಮುರ್ಮು, ಸೋನಿಯಾ ಗಾಂಧಿ, ಜೈಶಂಕರ್ ಸೇರಿ ಗಣ್ಯರಿಂದ 6ನೇ ಹಂತದಲ್ಲಿ ಮತದಾನ; ಫೋಟೊಸ್
- ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಮೇ 25ರ ಶನಿವಾರ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ದೆಹಲಿಯ ಎಲ್ಲಾ 7 ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಸಚಿವರಾದ ಎಸ್.ಜೈಶಂಕರ್ ಸೇರಿ ಇತರ ಗಣ್ಯರು ಮತ ಚಲಾಯಿಸಿದ್ದಾರೆ.
- ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಮೇ 25ರ ಶನಿವಾರ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ದೆಹಲಿಯ ಎಲ್ಲಾ 7 ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಸಚಿವರಾದ ಎಸ್.ಜೈಶಂಕರ್ ಸೇರಿ ಇತರ ಗಣ್ಯರು ಮತ ಚಲಾಯಿಸಿದ್ದಾರೆ.
(1 / 11)
ದೆಹಲಿಯ 7 ಲೋಕಸಭಾ ಸ್ಥಾನಗಳಿಗೆ ಶನಿವಾರ (ಮೇ 25) ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಏಳು ಕ್ಷೇತ್ರಗಳ 13,000 ಕ್ಕೂ ಹೆಚ್ಚು ಮತಗಟ್ಟೆಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಪ್ರಮುಖ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
(3 / 11)
ದೆಹಲಿ ಕ್ಷೇತ್ರದ ಎಪಿಜೆ ಅಬ್ದುಲ್ ಕಲಾಂ ಲೇನ್ ನಲ್ಲಿರುವ ಅಟಲ್ ಆದರ್ಶ್ ವಿದ್ಯಾಲಯದಲ್ಲಿ ಮೊದಲಿಗರಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತದಾನ ಮಾಡಿದ್ದಾರೆ.(@DrSJaishankar)
(4 / 11)
ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರು ದಕ್ಷಿಣ ದೆಹಲಿ ಕ್ಷೇತ್ರದ ಕಲ್ಕಾಜಿ ಬಿ ಬ್ಲಾಕ್‌ನಲ್ಲಿರುವ ನಿಗಮ್ ಪ್ರತಿಭಾ ವಿದ್ಯಾಲಯದಲ್ಲಿ ಮತ ಚಲಾಯಿಸಿದರು.
(5 / 11)
ಭಾರತದ ಮಾಜಿ ಕ್ರಿಕೆಟಿಗ ಮತ್ತು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಸರ್ಕಾರದ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಮತ ಚಲಾಯಿಸಿದರು.
(6 / 11)
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಅವರ ಪತ್ನಿ ಲಕ್ಷ್ಮಿ ಪುರಿ ಶನಿವಾರ ದೆಹಲಿಯಲ್ಲಿ ಹಕ್ಕು ಚಲಾಯಿಸಿದ್ದಾರೆ.
(7 / 11)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಯಲ್ಲಿ ಮತ ಚಲಾಯಿಸಿದರು. ಬಳಿಕ ಮಾಧ್ಯಮಗಳ ಮುಂದೆ ತೋರು ಬೆಳರಿಗೆ ಹಾಕಿರುವ ಶಾಯಿಯನ್ನು ಪ್ರದರ್ಶಿಸಿದರು.(PTI)
(8 / 11)
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಅವರ ಪತ್ನಿ ಸುದೇಶ್ ಧನ್ಕರ್ ದೆಹಲಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.(PTI)
(9 / 11)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ತಂದೆ ಗೋವಿಂದ್ ರಾಮ್ ಕೇಜ್ರಿವಾಲ್ ಅವರೊಂದಿಗೆ ದೆಹಲಿಯಲ್ಲಿ ಮತ ಚಲಾಯಿಸಿದರು.(PTI)
(10 / 11)
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ದೆಹಲಿಯ ಮಟಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ಫೋಟೊಗೆ ಪೋಸ್ ನೀಡಿದ್ದಾರೆ.(Rahul Gandhi-X)
ಇತರ ಗ್ಯಾಲರಿಗಳು