Mysuru Results: ಮೈಸೂರು ರಾಜವಂಶಸ್ಥ ಯದುವೀರ್‌ಗೆ ಕೃಷ್ಣರಾಜ ಒಡೆಯರ್ ಜನುಮ ದಿನ ನೆನಪಿನ ಜಯ photos
ಮೈಸೂರು ಮಾತ್ರವಲ್ಲ. ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಯದುವಂಶರಿಗೆ ಪ್ರಮುಖ ಹೆಸರು. ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ಒಡೆಯರ್ ನಂತರ ಯದುವೀರ್ ಒಡೆಯರ್( Yaduveer Wadiyar) ಗೆ ಈಗ ಅಧಿಕಾರದ ಸಮಯ. ಮೈಸೂರಿನ ಸಂಸದರಾಗಿ ಆಯ್ಕೆಯಾದ ಯದುವೀರ್ ವಿಶೇಷ ಇಲ್ಲಿದೆ.
(1 / 7)
ಶತಮಾನದ ಹಿಂದೆಯೇ ಮೈಸೂರು ಮಾತ್ರವಲ್ಲ ಕರ್ನಾಟಕ ಕಟ್ಟಿದ ಕೃಷ್ಣರಾಜ ಒಡೆಯರ್ ಅವರ ಜನುಮದಿನವಿಂದು. ಇದೇ ದಿನ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಬಿಜೆಪಿಯಿಂದ ಯದುವೀರ್ ಗೆದ್ದಿದ್ದಾರೆ.
(2 / 7)
ಕೃಷ್ಣರಾಜ ಒಡೆಯರ್ ಅವರು ಬರೀ ಕಟ್ಟಡ ಕಟ್ಟಲಿಲ್ಲ. ಅದಕ್ಕೆ ಜೀವ ತುಂಬಿದರು. ಶಿಕ್ಷಣ, ಆರೋಗ್ಯ, ನೀರಾವರಿ, ನಗರಾಭಿವೃದ್ದಿಗೆ ಒತ್ತು ನೀಡಿದ ಕೃಷ್ಣರಾಜ ಮೀಸಲು ಕೂಡ ನೀಡಿದವರು. ಅವರ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ಈಗ ಅಧಿಕಾರ ಹಿಡಿದಿದೆ.
(3 / 7)
ಕೃಷ್ಣರಾಜ ಒಡೆಯರ್ ಅವರು ಕೆಲವೇ ಅವಧಿಗೆ ಮೈಸೂರು ಸಂಸ್ಥಾನದ ಮಹಾರಾಜರಾದರು ಆ ಕುಟುಂಬದ ಛಾಪು ಈಗಲೂ ಜನರ ಮೇಲೆ ಇದೆ ಎನ್ನುವುದಕ್ಕೆ ಯದುವೀರ್ ಗೆಲುವಿನ ಮೂಲಕ ಸಾಬೀತಾಗಿದೆ.
(4 / 7)
ಯದುವೀರ್ ಅವರ ತಾಯಿಯ ಅಜ್ಜ ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ. ಆನಂತರ ಮೈಸೂರು ರಾಜ್ಯದ ರಾಜ್ಯಪಾಲರೂ ಆಗಿದ್ದರು. ಅವರ ವಂಶದ ಕುಡಿ ಯದುವೀರ್ ಗೆ ಈಗ ಜನಪ್ರತಿನಿಧಿ ಪಟ್ಟ.
(5 / 7)
ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈಸೂರು ಕ್ಷೇತ್ರದಿಂದಲೇ ನಾಲ್ಕು ಬಾರಿ ಸಂಸದರಾಗಿದ್ದವರು. ಬಿಜೆಪಿಗೆ ಸೇರಿ ಸೋತಿದ್ದರು. ಅವರ ನಂತರ ದತ್ತು ಪುತ್ರ ಯದುವೀರ್ ಮೂರು ದಶಕದ ನಂತರ ಸಂಸದರಾಗುತ್ತಿದ್ದಾರೆ.
(6 / 7)
ಯದುವೀರ್ ಅವರನ್ನು ದತ್ತು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಪ್ರಮೋದಾದೇವಿ ಒಡೆಯರ್. ಅವರೇ ಯದುವೀರ್ ಗೆ ಸಂಸದರಾಗಲು ಆಶಿರ್ವಾದ ಮಾಡಿದ್ದಾರೆ.
ಇತರ ಗ್ಯಾಲರಿಗಳು