HD Kumaraswamy: ಕಾಂಗ್ರೆಸ್ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ವಿಷಾದ
- ನಾನು ದಾರಿ ತಪ್ಪಿದ್ದೆ. ದಾರಿ ತಪ್ಪಿದ್ದಾಗ ನನ್ನ ಪತ್ನಿ ತಿದ್ದಿದ್ದಾಳೆ. ನಿಮ್ಮ ರೀತಿ ನಾನು ಬದುಕಿನಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
- ನಾನು ದಾರಿ ತಪ್ಪಿದ್ದೆ. ದಾರಿ ತಪ್ಪಿದ್ದಾಗ ನನ್ನ ಪತ್ನಿ ತಿದ್ದಿದ್ದಾಳೆ. ನಿಮ್ಮ ರೀತಿ ನಾನು ಬದುಕಿನಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
(1 / 7)
ನನಗೆ ಪ್ರತಿಷ್ಠೆ ಇಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಎನ್‌ಡಿಎ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 15, ಸೋಮವಾರ) ಮಾಧ್ಯಮಗಳ ಜತೆ ಮಾತನಾಡಿದರು.
(2 / 7)
ನಾಡಿನ ಜನತೆಗೆ ಹೇಳಿದ್ದು ಎಚ್ಚರಿಕೆಯಿಂದ ತೀರ್ಮಾನ ಮಾಡಿ ಅಂತ, ನಿಮ್ಮ ಬದುಕನ್ನು ಇವತ್ತು ಹಾಳು ಮಾಡುತ್ತಾರೆ. ಬದುಕು ಎಂದರೆ ಬೇರೆ ರೀತಿಯಲ್ಲ ಹೇಳಿದ್ದು. ಕುಟುಂಬದ ಬದುಕಿನ ಬಗ್ಗೆ ಹೇಳಿರೋದು. ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ, ಉಚಿತ ಶಾಲೆ, ಆಸ್ಪತ್ರೆ, ರೈತರ ಬದುಕನ್ನ ಸರಿಪಡಿಸಬೇಕು, ಜನರು ಆರ್ಥಿಕ ಸದೃಢವಾಗಿ ಬೆಳೆಯಬೇಕೆಂದು ಹೇಳಿದ್ದೇನೆ ಎಂದು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
(3 / 7)
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್‌ಡಿಕೆ, ಚುನಾವಣೆಯಲ್ಲಿ ಜನತೆಯ ಮನಸ್ಸು ಪರಿವರ್ತನೆ ಮಾಡಲು ಹೊರಟಿದ್ದಾರೆ. ನಿಮ್ಮ ಹೇಳಿಕೆಗಳು, ಸಾರ್ವಜನಿಕವಾಗಿ ಹೇಗೆ ನಡೆದುಕೊಂಡಿದ್ದೀರಿ ಎಂಬುದರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಬೇಕಾದಷ್ಟು ಪ್ರಕರಣಗಳಿವೆ ಎಂದಿದ್ದಾರೆ.
(4 / 7)
ಕೆಲವು ಬಾರಿ ನಾನು ದಾರಿ ತಪ್ಪಿದ್ದೇನೆ. ನಾನು ದಾರಿ ತಪ್ಪಿದ್ದಾಗ ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ. ನಿಮ್ಮ ರೀತಿ ನಾನು ಬದುಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯದ ಯಾವುದೇ ಮಹಿಳೆಗೆ ನೋವು ಮಾಡಿಲ್ಲ, ನನ್ನ ಹೇಳಿಕೆಯಿಂದ ಒಂದು ವೇಳೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
(6 / 7)
ತುಮಕೂರು ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇತರ ಗ್ಯಾಲರಿಗಳು