ಕನ್ನಡ ಸುದ್ದಿ  /  Photo Gallery  /  Lok Sabha Election Katchatheevu Controversy A Big Election Who Said What Check Quotes Of K Annamalai Pm Modi Uks

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

ತಮಿಳುನಾಡಿನ ಕಡಲ ತೀರಕ್ಕೆ 20 ಕಿ.ಮೀ. ದೂರದಲ್ಲಿರುವ ಕಚ್ಚತೀವು ದ್ವೀಪ ಈಗ ವಿವಾದದ ಕೇಂದ್ರ ಬಿಂದು. ಲೋಕಸಭೆ ಚುನಾವಣೆ ಕಣದಲ್ಲಿ ಇದರದ್ದೇ ಚರ್ಚೆ. ಪಿಎಂ ಮೋದಿ, ಕೆ ಅಣ್ಣಾಮಲೈ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇನ್ಯಾರೆಲ್ಲ ಏನು ಹೇಳಿದ್ರು. ಇಲ್ಲಿದೆ ಆಯ್ದ ಕೆಲವರ ಹೇಳಿಕೆಗಳು. 

ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು
icon

(1 / 8)

ಕಣ್ಣು ತೆರೆಸುವಂಥದ್ದು ಮತ್ತು ಬೆಚ್ಚಿಬೀಳಿಸುವಂಥದ್ದು! ಕಚ್ಚತೀವು ದ್ವೀಪವನ್ನು ಕಾಂಗ್ರೆಸ್ ಪಕ್ಷ ಹೇಗೆ ನಿರ್ಭಾವುಕವಾಗಿ ಬಿಟ್ಟುಕೊಟ್ಟಿತು ಎಂಬುದನ್ನು ಹೊಸ ಸಂಗತಿಗಳು ಬಹಿರಂಗಪಡಿಸುತ್ತವೆ. ಇದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ ಮತ್ತು ಜನರ ಮನಸ್ಸಿನಲ್ಲಿ ಮತ್ತೊಮ್ಮೆ ದೃಢಪಟ್ಟಿದೆ- ನಾವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ! ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತ ಬಂದಿರುವುದು ಕಾಂಗ್ರೆಸ್‌ ಪಕ್ಷದ 75 ವರ್ಷಗಳ ಕಾರ್ಯವಿಧಾನವಾಗಿದೆ. - ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ (ಮಾರ್ಚ್ 31ರ ಟ್ವೀಟ್‌)
icon

(2 / 8)

ಮಾತುಗಳ ವರಸೆಯ ಹೊರತಾಗಿ ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಏನನ್ನೂ ಮಾಡಿಲ್ಲ. ಕಚ್ಚತೀವು ಕುರಿತು ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ಇಬ್ಬಗೆ ಗುಣವನ್ನು ಸಂಪೂರ್ಣವಾಗಿ ಬಿಚ್ಚಿಡತೊಡಗಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಪಕ್ಷಗಳಾಗಿವೆ. ಅಲ್ಲಿ ಪಕ್ಷವನ್ನು ಮುನ್ನಡೆಸುವವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳ ಏಳಿಗೆಯನ್ನಷ್ಟೇ ಬಯಸುತ್ತಾರೆ, ಕಾಳಜಿ ವಹಿಸುತ್ತಾರೆ. ಅವರಿಗೆ ಬೇರೆಯವರ ಬಗ್ಗೆ ಕಾಳಜಿ ಇಲ್ಲ. ಕಚ್ಚತೀವು ಮೇಲಿನ ಅವರ ನಿರ್ಭಾವುಕ ನಿಲುವು ನಮ್ಮ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಹಾನಿ ಉಂಟುಮಾಡಿದೆ. - ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ (ಏಪ್ರಿಲ್ 1ರ ಟ್ವೀಟ್‌)
icon

(3 / 8)

ಕಚ್ಚತೀವು ದ್ವೀಪವನ್ನು ಸೌಹಾರ್ದದ ನೆಲೆಯಲ್ಲಿ 1974ರಲ್ಲಿ ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು. ಚುನಾವಣೆ ಸಮೀಪದಲ್ಲಿರುವಾಗ ತಮಿಳುನಾಡಿಗೆ ಸಂಬಂಧಿಸಿದ ಈ ಸೂಕ್ಷ್ಮ ವಿಷಯವನ್ನು ಪ್ರಸ್ತಾಪಿಸಿದ್ದೀರಿ. 2014ರಲ್ಲಿ ನಿಮ್ಮದೇ ಸರ್ಕಾರದ ಅಟಾರ್ನಿ ಜನರಲ್‌ ಮುಕುಲ್ ರೋಹ್ಟಗಿ ಅವರು “ಕಚ್ಚತೀವು ದ್ವೀಪ 1974ರ ಒಪ್ಪಂದ ಪ್ರಕಾರ ಹಸ್ತಾಂತರವಗಿದೆ. ಅದನ್ನು ಮರಳಿ ಪಡೆಯಲು ಯುದ್ಧ ಮಾಡಬೇಕಾದೀತು" ಎಂದು ಹೇಳಿದ್ದರು. ಪ್ರಧಾನಿಯವರೇ ನೀವು ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಕಚ್ಚತೀವು ಹಿಂಪಡೆಯಲು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸಲೇ ಬೇಕು. - ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ 
icon

(4 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(5 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ಕಚ್ಚತೀವು ದ್ವೀಪವನ್ನು ಕಾಂಗ್ರೆಸ್‌ನವರು ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟರು. ಅವರಿಗೆ ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಕೆಲವೊಮ್ಮೆ ಕಾಂಗ್ರೆಸ್ ಪಕ್ಷದ ಕೆಲ ಸಂಸದರು ದೇಶ ವಿಭಜಿಸುವ ಮಾತನಾಡುತ್ತಾರೆ. ಕೆಲವೊಮ್ಮೆ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಹೇಳನ ಮಾಡುತ್ತಾರೆ. ದೇಶದ ಏಕತೆ ಮತ್ತು ಸಮಗ್ರತೆಗೆ ಅವರು ವಿರುದ್ಧವಾಗಿರುವುದನ್ನು ಅವರ ಈ ವರ್ತನೆ ತೋರಿಸುತ್ತದೆ. ಅವರು ಭಾರತವನ್ನು ನಮ್ಮ ರಾಷ್ಟ್ರವನ್ನು ವಿಭಜಿಸಲು, ಒಡೆಯಲು ಬಯಸುತ್ತಾರೆ. - ಅಮಿತ್ ಶಾ, ಕೇಂದ್ರ ಗೃಹ ಸಚಿವ, (ಮಾರ್ಚ್ 31ರ ಟ್ವೀಟ್‌)
icon

(6 / 8)

ಕಳೆದ 20 ವರ್ಷಗಳಲ್ಲಿ, 6,184 ಭಾರತೀಯ ಮೀನುಗಾರರನ್ನು ಶ್ರೀಲಂಕಾದವರು ಬಂಧಿಸಿದ್ದಾರೆ.1,185 ಮೀನುಗಾರಿಕಾ ಹಡಗುಗಳನ್ನು ವಶಪಡಿಸಿಕೊಂಡರು. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರಂತಹ ಪ್ರಧಾನ ಮಂತ್ರಿಗಳು 1974 ರಲ್ಲಿ ಕಡಲ ಗಡಿ ಒಪ್ಪಂದದ ಭಾಗವಾಗಿ ಶ್ರೀಲಂಕಾಕ್ಕೆ ನೀಡಿರುವ ಕಚ್ಚತೀವು ಪ್ರದೇಶವನ್ನು "ಪುಟ್ಟ ದ್ವೀಪ", "ಚಿಕ್ಕ ಬಂಡೆ" ಎಂದು ಕೇವಲವಾಗಿ ಕಂಡರು. ಆ ಸಮಸ್ಯೆ ಥಟ್ಟನೆ ಬೆಳೆದುದಲ್ಲ. ಅದು ಯಾವತ್ತಿಗೂ ಜೀವಂತ ವಿಷಯ. - ಎಸ್. ಜೈಶಂಕರ್, ಭಾರತದ ವಿದೇಶಾಂಗ ಸಚಿವ 
icon

(7 / 8)

ವಿದೇಶಾಂಗ ಸಚಿವರು ಮತ್ತು ಅವರ ಸಚಿವಾಲಯ ಈಗ ಏಕೆ ಪಲ್ಟಿ ಹೊಡೆಯುತ್ತಿದೆ?. ಜನರು ಎಷ್ಟು ಬೇಗನೆ ಬಣ್ಣ ಬದಲಾಯಿಸಬಹುದು. ಜೈಶಂಕರ್ ಅವರು ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದಾಗ 2015ರಲ್ಲಿ ಜುಲೈ 27ರಂದು ಕೊಟ್ಟ ಉತ್ತರ ಗಮನಿಸಬೇಕು. ಉದಾರವಾದಿ ವಿದೇಶಾಂಗ ಸೇವಾ ಅಧಿಕಾರಿಯಿಂದ ಹಿಡಿದು ಚಾಣಾಕ್ಷ ವಿದೇಶಾಂಗ ಕಾರ್ಯದರ್ಶಿಯವರೆಗೆ ಆರ್‌ಎಸ್‌ಎಸ್-ಬಿಜೆಪಿಯ ಮುಖವಾಣಿಯಾಗುವ ತನಕ ಜೈಶಂಕರ್ ಅವರ ಜೀವನ ಪಥವನ್ನು ಚಮತ್ಕಾರಿ ಕ್ರೀಡಾ ವಾರ್ಷಿಕದಲ್ಲಿ ದಾಖಲು ಮಾಡಲಾಗುವುದು. - ಪಿ.ಚಿದಂಬರಂ, ಕಾಂಗ್ರೆಸ್ ಸಂಸದ, ಕೇಂದ್ರದ ಮಾಜಿ ವಿತ್ತ ಸಚಿವ
icon

(8 / 8)

IPL_Entry_Point

ಇತರ ಗ್ಯಾಲರಿಗಳು