Lok Sabha Election 2024: ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ; ಗಣ್ಯರಿಂದ ಹಕ್ಕು ಚಲಾವಣೆ; ಫೋಟೊಸ್
- ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನದಲ್ಲಿ ಮತದಾರರರು ಉತ್ಸಾಹದಿಂದ ಭಾಗವಹಿಸಿದ್ದಾರೆ. ವಿವಿಧ ಪಕ್ಷಗಳ ನಾಯಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಫೋಟೊ ಸಹಿತ ವಿವರ ಇಲ್ಲಿದೆ.
- ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನದಲ್ಲಿ ಮತದಾರರರು ಉತ್ಸಾಹದಿಂದ ಭಾಗವಹಿಸಿದ್ದಾರೆ. ವಿವಿಧ ಪಕ್ಷಗಳ ನಾಯಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಫೋಟೊ ಸಹಿತ ವಿವರ ಇಲ್ಲಿದೆ.
(1 / 9)
ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಲ್ಲಿ ಮತದಾನ ಮಾಡಿದರು? ರಾಜಕೀಯ ಪಕ್ಷಗಳು ನಾಯಕರು, ಗಣ್ಯರ ಮತದಾನ ಮಾಡಿರುವ ಫೋಟೊ ಮತ್ತು ಮಾಹಿತಿ ಇಲ್ಲಿದೆ.
(2 / 9)
ಲೋಕಸಭೆ ಚುನಾವಣೆಯ 4 ಹಂತದ ಮತದಾನ ಬಿರುಸಿನಿಂದ ಸಾಗುತ್ತಿದೆ. ನೋಯಿಡಾದ ಮತಗಟ್ಟೆಯೊಂದರಲ್ಲಿ ಮತದಾನಕ್ಕೂ ಮುನ್ನ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು.
(PTI)(3 / 9)
ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಕುಟುಂಬ ಸಮೇತರಾಗಿ ಬಂದು ಹೈದರಾಬಾದ್‌ನ ವಟ್ಟಪಲ್ಲಿಯಲ್ಲಿ ಹಕ್ಕು ಚಲಾಯಿಸಿದ್ದಾರೆ.
(PTI)(4 / 9)
ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಕುಟುಂಬ ಸಮೇತರಾಗಿ ಬಂದು ಗುಂಟೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
(PTI)(5 / 9)
ಹೈದರಾಬಾದ್‌ನ ಸಿಕಿಂದರಾಬಾದ್‌ನ ಮತಗಟ್ಟೆಗೆ ಕುಟುಂಬದವರೊಂದಿಗೆ ಬಂದಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಮತದಾನ ಮಾಡಿದ್ದಾರೆ. ಶಾಯಿ ಗುರುತನ್ನು ಪ್ರದರ್ಶಿಸಿದರು.
(PTI)(6 / 9)
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಮತದಾನ ಮಾಡಿದ್ದಾರೆ. ಇವರು ಪಶ್ಟಿಮ ಬಂಗಾಳದ ಕೃಷ್ಣನಗರ್ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿದ್ದಾರೆ.
(PTI)(7 / 9)
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಪುಲಿವೆಂದು ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
(PTI)(8 / 9)
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪತ್ನಿ ನಾರಾ ಭುವನೇಶ್ವರಿ ಅಂದವಲ್ಲಿ ಮತಗಟ್ಟೆಯಲ್ಲಿ ಮತದಾನದ ಬಳಿಕ ಶಾಯಿ ಗುರುತಿನ ತೋರು ಬೆರಳನ್ನು ಪ್ರದರ್ಶಿಸಿದರು.
(PTI)ಇತರ ಗ್ಯಾಲರಿಗಳು