ಕರ್ನಾಟಕದ ಚುನಾವಣೆ ಕಣಕ್ಕೆ ತಾರಾ ರಂಗು, ಪವನ್ ಕಲ್ಯಾಣ್, ದರ್ಶನ್, ತಾರಾ, ಮುಖ್ಯಮಂತ್ರಿ ಚಂದ್ರು ಪ್ರಚಾರ photos
- ಲೋಕಸಭೆ ಚುನಾವಣೆಯ ಕರ್ನಾಟಕ ಕಣದಲ್ಲಿ ತಾರಾ ಪ್ರಚಾರವೂ ಜೋರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಹಲವಾರು ನಟ- ನಟಿ, ಕಲಾವಿದರು ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿದೆ ಅದರ ವಿವರ.
- ಲೋಕಸಭೆ ಚುನಾವಣೆಯ ಕರ್ನಾಟಕ ಕಣದಲ್ಲಿ ತಾರಾ ಪ್ರಚಾರವೂ ಜೋರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಹಲವಾರು ನಟ- ನಟಿ, ಕಲಾವಿದರು ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿದೆ ಅದರ ವಿವರ.
(1 / 7)
ಆಂಧ್ರದ ನಟ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ ಪವನ್ ಕಲ್ಯಾಣ್ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದಾರೆ. ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರದಲ್ಲಿ ಅವರು ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ.
(2 / 7)
ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಅನುರಾಧ ಅವರು ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸಿದರು.
(3 / 7)
ನಟ ದರ್ಶನ್ ಮಂಡ್ಯಡಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ರೋಡ್ ಶೋ ನಡೆಸಿದರು.ಬೆಂಗಳೂರಿನಲ್ಲೂ ಅವರು ಪ್ರಚಾರ ನಡೆಸಲಿದ್ದಾರೆ.
(4 / 7)
ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಪರವಾಗಿ ಮತ ಯಾಚಿಸಿದರು.
(5 / 7)
ನಟ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಬೆಂಗಳೂರು, ಕೋಲಾರ ಸಹಿತ ಹಲವು ಕಡೆಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ.
(6 / 7)
ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ರಾಮನಗರ ಸಹಿತ ಹಲವು ಕಡೆ ಪ್ರಚಾರ ನಡೆಸಿದ್ದಾರೆ.
ಇತರ ಗ್ಯಾಲರಿಗಳು