ಬೆಂಗಳೂರಿನಲ್ಲಿ ದಳಪತಿಗಳು, ಕಮಲ ನಾಯಕರ ಮೊದಲ ಸಮನ್ವಯ ಸಭೆ, ಹೀಗಿತ್ತು ನಾಯಕರ ನೋಟ photos
- ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಒಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ನಾಯಕರು,ಮುಖಂಡರು, ಪ್ರಮುಖರ ಸಮನ್ವಯ ಸಮಿತಿ ಸಭೆ ನಡೆದು ಚುನಾವಣೆ ಎದುರಿಸುವ ಕುರಿತು ಚರ್ಚಿಸಲಾಯಿತು. ಹೀಗಿತ್ತು ಮೊದಲ ಸಭೆಯ ಚಿತ್ರನೋಟ.
- ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಒಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ನಾಯಕರು,ಮುಖಂಡರು, ಪ್ರಮುಖರ ಸಮನ್ವಯ ಸಮಿತಿ ಸಭೆ ನಡೆದು ಚುನಾವಣೆ ಎದುರಿಸುವ ಕುರಿತು ಚರ್ಚಿಸಲಾಯಿತು. ಹೀಗಿತ್ತು ಮೊದಲ ಸಭೆಯ ಚಿತ್ರನೋಟ.
(1 / 9)
ಈಗಾಗಲೇ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕ್ಷೇತ್ರ ಹಂಚಿಕೆ ಪ್ರಕ್ರಿಯೆ ಮುಗಿಸಿ ಬೆಂಗಳೂರಿನಲ್ಲಿ ಮೊದಲ ಸಮನ್ವಯ ಸಭೆ ನಡೆಸಿದರು. ಸಭೆಗೂ ಮುನ್ನ ಕಂಡು ಬಂದ ನಾಯಕರು,
(2 / 9)
ಒಂದೂವರೆ ದಶಕದ ನಂತರ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯವಾಗಿ ಹತ್ತಿರವಾಗಿರುವುದಾಗಿ ಕಂಡರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಂಡ ಹಿರಿಯ ನಾಯಕರ ನೋಟ ಹೀಗಿತ್ತು.
(3 / 9)
ಸಮನ್ವಯ ಸಮಿತಿಯಲ್ಲಿ ಭಾಗಿಯಾದ ಜೆಡಿಎಸ್ ಹಾಗೂ ಬಿಜೆಪಿ ನಾಯಕರಾದ ಆರ್, ಅಶೋಕ್, ರಾಧಾಮೋಹನ ಅಗರವಾಲ್, ಬಿ.ವೈ.ವಿಜಯೇಂದ್ರ, ಎಚ್.ಡಿ.ದೇವಗೌಡ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ಡಿ,ವಿ.ಸದಾನಂದಗೌಡ, ಒಟ್ಟಾಗಿ ಸೇರಿ ಕಾಂಗ್ರೆಸ್ ಮಣಿಸುವ ತೀರ್ಮಾನಕ್ಕೆ ನಾಯಕರು ಬಂದರು.
(4 / 9)
ಸಮನ್ವಯ ಸಭೆಯಲ್ಲಿ ಲೋಕಸಭೆ ಚುನಾವಣೆಯನ್ನು ಹೇಗೆ ಎದುರಿಸಬೇಕು. ಉಭಯ ಪಕ್ಷಗಳ ಕೆಳ ಹಂತದ ನಾಯಕರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಣಿಸುವ ಕುರಿತು ಚರ್ಚಿಸಲಾಯಿತು.
(5 / 9)
ಸಮನ್ವಯ ಸಭೆಯಲ್ಲಿ ಪಾಲ್ಗೊಂಡ ಗೋವಿಂದಕಾರಜೋಳ, ಜಿ.ಟಿ.ದೇವೇಗೌಡ, ಆರ್.ಅಶೋಕ, ರಾಧಾಮೋಹನ್ ಅಗರವಾಲ್, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಚ್.ಡಿಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಮತ್ತಿತರ ನಾಯಕರು ಒಗ್ಗಟ್ಟನ ಮಂತ್ರ ಜಪಿಸಿದರು.
(6 / 9)
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮನ್ವಯ ಸಮಿತಿ ಮೊದಲ ಸಭೆಯನ್ನು ಉದ್ಘಾಟಿಸಲಾಯಿತು. ಗೋವಿಂದ ಕಾರಜೋಳ, ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ರಾಧಾಮೋಹನ್ ಅಗರವಾಲ್ ಭಾಗಿಯಾದರು,
(7 / 9)
ಕೇಂದ್ರದ ಸಚಿವೆ ಶೋಬಾ ಕರಂದ್ಲಾಜೆ ಸೇರಿದಂತೆ ಎರು ಪಕ್ಷಗ ನಾಯಕರು, ಶಾಸಕರು, ಮಾಜಿ ಶಾಸಕರು ಸಮನ್ವಯ ಸಮಿತಿಯಲ್ಲಿ ಭಾಗಿಯಾದರು. ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಬಿಡದೇ ಹೋರಾಟ ಮಾಡೋಣ ಎಂದು ದೇವೇಗೌಡರು ಕಿವಿಮಾತು ಹೇಳಿದರು.
(8 / 9)
ಸಮನ್ವಯ ಸಮಿತಿ ಸಭೆಯಲ್ಲಿ ಹಲವಾರು ವಿಷಯಗಳನ್ನು ನಾಯಕರು ಪ್ರಸ್ತಾಪಿಸಿದರು. ಅದರಲ್ಲಿ ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವುದು ಸಂತೋಷದಾಯಕ.ರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಬಿಜೆಪಿ ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಾಹಿತಿಯನ್ನ ಬಿಜೆಪಿ ವರಿಷ್ಠರಿಗೆ ನೀಡ್ತಿದ್ದಾರೆ. ಎ ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯ ಎಂದರು ದೇವೇಗೌಡರು.
ಇತರ ಗ್ಯಾಲರಿಗಳು