ಮತದಾನ ಕೇಂದ್ರಕ್ಕೆ ವಿಭಿನ್ನ ಸ್ಪರ್ಶ, ಹಸಿರು ವಾತಾವರಣ, ವಿಕಲಚೇತನ ಸ್ನೇಹಿ
- ಕರ್ನಾಟಕದಲ್ಲಿ ಮಂಗಳವಾರ ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಹಲವು ಕಡೆ ವಿಭಿನ್ನ ಮತಗಟ್ಟೆ ಸ್ಥಾಪಿಸಲಾಗಿದೆ. ಅವುಗಳ ನೋಟ ಇಲ್ಲಿದೆ.
- ಕರ್ನಾಟಕದಲ್ಲಿ ಮಂಗಳವಾರ ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಹಲವು ಕಡೆ ವಿಭಿನ್ನ ಮತಗಟ್ಟೆ ಸ್ಥಾಪಿಸಲಾಗಿದೆ. ಅವುಗಳ ನೋಟ ಇಲ್ಲಿದೆ.
(1 / 6)
ಮಂಗಳವಾರ ನಡೆಯಲಿರುವ ಮತಹಬ್ಬಕ್ಕೆ ಶಿವಮೊಗ್ಗ ಜಿಲ್ಲೆಯ ಶ್ರೀರಾಂಪುರದಲ್ಲಿ ಮಹಿಳೆಯರಿಂದ ಕಾರ್ಯ ನಿರ್ವಹಿಸಲ್ಪಡುವ ಮಾದರಿ ಮತಗಟ್ಟೆಯಾದ ಸಖಿ ಮತಗಟ್ಟೆಯು ಅಲಂಕೃತಗೊಂಡು ಸಜ್ಜಾಗಿದೆ.
(2 / 6)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಂಗಾನೂರಿನಲ್ಲಿ ವಿಷಯಾಧಾರಿತ ಮತಗಟ್ಟೆ ನಿರ್ಮಾಣಗೊಂಡು ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ಮಹಿಳೆಯರಿಂದ ನಿರ್ವಹಿಸಲ್ಪಡುವ ಈ ಸಖಿ ಮತಗಟ್ಟೆಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಮಾನತೆಯನ್ನು ಸಾರುತ್ತವೆ.
(3 / 6)
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ವಿಶೇಷ ಚೇತನರ ಮಾದರಿ ಮತಗಟ್ಟೆ ನಿರ್ಮಾಣಗೊಂಡಿದ್ದು ಇಲ್ಲಿ ಎಲ್ಲರೂ ಅರ್ಹರೂ ಮತ್ತು ಸಮಾನರು ಎಂದು ಸಾರಿ ಹೇಳುತ್ತಿದೆ.
(4 / 6)
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋಳೂರು ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 200 ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸಜ್ಜಾಗಿದ್ದು ಅಲ್ಲಿನ ಭಿತ್ತಿ ಚಿತ್ರಗಳು ಮತದಾರರನ್ನು ಸೆಳೆಯಲು ರೆಡಿಯಾಗಿವೆ.
(5 / 6)
ಹಾವೇರಿ ಪಂಚಾಯತ್ ರಾಜ್ಯ ಇಂಜಿನೀಯರಿಂಗ್ ಕಚೇರಿಯಲ್ಲಿ ಸ್ಥಾಪಿಸಲಾದ ಗ್ರೀನ್ ಬೂತ್ ಮತದಾರರನ್ನು ಆಕರ್ಷಿಸಲು ಹಸಿರು ತಳಿರು ತೋರಣಗಳಿಂದ ಅಲಂಕೃತಗೊಂಡಿದೆ.
ಇತರ ಗ್ಯಾಲರಿಗಳು