Lalu Family politics: ಚುನಾವಣೆ ಅಖಾಡಕ್ಕೆ ಲಾಲು ಮತ್ತೊಬ್ಬ ಪುತ್ರಿ, ರಾಜಕಾರಣದಲ್ಲಿ ಕುಟುಂಬದ 6 ನೇ ಸದಸ್ಯೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lalu Family Politics: ಚುನಾವಣೆ ಅಖಾಡಕ್ಕೆ ಲಾಲು ಮತ್ತೊಬ್ಬ ಪುತ್ರಿ, ರಾಜಕಾರಣದಲ್ಲಿ ಕುಟುಂಬದ 6 ನೇ ಸದಸ್ಯೆ Photos

Lalu Family politics: ಚುನಾವಣೆ ಅಖಾಡಕ್ಕೆ ಲಾಲು ಮತ್ತೊಬ್ಬ ಪುತ್ರಿ, ರಾಜಕಾರಣದಲ್ಲಿ ಕುಟುಂಬದ 6 ನೇ ಸದಸ್ಯೆ photos

  • ಭಾರತದ ರಾಜಕೀಯ ಇತಿಹಾಸಲದಲ್ಲಿ ವೈವಿಧ್ಯಮಯ ರಾಜಕಾರಣಿ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav). ಅವರ ಕುಟುಂಬ ರಾಜಕಾರಣದ ಹರವು ಕೂಡ ವಿಶಾಲವಾಗಿದೆ. ಲಾಲೂ, ಅವರ ಪತ್ನಿ, ಇಬ್ಬರು ಪುತ್ರರು, ಪುತ್ರಿ ನಂತರ ಮತ್ತೊಬ್ಬ ಪುತ್ರಿ ಈ ಬಾರಿ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ.

ಭಾರತದ ರಾಜಕಾರಣದ ದೊಡ್ಡ ಕುಟುಂಬ ಬಿಹಾರದ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಅವರದ್ದು. ಅವರಿಗೆ ಇಬ್ಬರು ಪುತ್ರರು ಹಾಗೂ ಏಳು ಪುತ್ರಿಯರು. ತಮ್ಮ ವಿಭಿನ್ನ ಹಾವ ಭಾವದ ಮೂಲಕ ಗಮನ ಸೆಳೆಯುವ ಲಾಲೂ ಅವರು ಕುಟುಂಬ ರಾಜಕಾರಣದಲ್ಲಿ ಎತ್ತಿದ ಕೈ. ಅವರ ಮಕ್ಕಳೂ ರಾಜಕಾರಣಿಗಳ ಮಕ್ಕಳನ್ನೇ ಮದುವೆಯಾಗಿರುವದರಿಂದ ಕುಟುಂಬ ರಾಜಕಾರಣ ಇನ್ನಷ್ಟು ಹಿಗ್ಗಿದೆ. 
icon

(1 / 8)

ಸಮಾಜವಾದಿ ಹಿನ್ನಲೆಯ ಲಾಲೂ ಯಾದವ್‌(Lalu Prasad Yadav) ಅರು ಎಪ್ಪತ್ತರ ದಶಕದಲ್ಲಿಯೇ ಶಾಸಕರಾಗಿ, ಸಚಿವರಾಗಿ, ನಂತರ ಸಿಎಂ ಆಗಿ ಕೆಲಸ ಮಾಡಿದವರು. ಕೇಂದ್ರದಲ್ಲೂ ರೈಲ್ವೆ ಮಂತ್ರಿಯಾಗಿ ಗಮನ ಸೆಳೆದವರು. ಹಿಂದುಳಿದ ವರ್ಗಗಳ ನಾಯಕ ಲಾಲೂ ಅವರು ನಂತರ ಮೇವು ಹಗರಣದಲ್ಲಿ ಸಿಲುಕಿ ಜೈಲು ಸೇರಿದ್ದವರು.
icon

(2 / 8)

ಲಾಲೂ ಅವರು ಜೈಲು ಸೇರಿದಾಗ ಮುಖ್ಯಮಂತ್ರಿ ಸ್ಥಾನ ದೊರೆತಿದ್ದು ಅವರ ಪತ್ನಿ ರಾಬ್ರಿದೇವಿ(Rabri Devi) ಅವರಿಗೆ. ಮೂರು ಬಾರಿ ಬಿಹಾರದ ಸಿಎಂ ಆಗಿದ್ದು ರಾಬ್ರಿದೇವಿ ಅವರ ಹಿರಿಮೆ. ಕಡಿಮೆ ಓದಿದರೂ ಸಿಎಂ ಹುದ್ದೆ ನಿಭಾಯಿಸಿದವರು. ಈಗ ಎರಡು ಬಾರಿ ಎಂಎಲ್ಸಿಯಾಗಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕಿಯಾಗಿದ್ಧಾರೆ. 
icon

(3 / 8)

ಲಾಲೂ ಹಾಗೂ ರಾಬ್ರಿದೇವಿ ಅವರ ಹಿರಿಯ ಪುತ್ರಿ ಮಿಸಾ ಭಾರತಿ(Misa Bharti). ಈವರೆಗೂ ಎರಡು ಬಾರಿ ಲೋಕಸಭೆ ಚುನಾವಣೆಗೆ ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯೆ. ಈ ಬಾರಿಯೂ ಪಾಟಲಿಪುತ್ರ ಕ್ಷೇತ್ರದಿಂದ ಲೋಕಸಭಾ ಕ್ಷೇತ್ರಕ್ಕೆ ಮಿಸಾ ಭಾರತಿ ಸ್ಪರ್ಧಿಸುವ ಸಾಧ್ಯತೆಯಿದೆ.
icon

(4 / 8)

ಲಾಲೂ ಪ್ರಸಾದ್‌ ಅವರ ಉತ್ತರಾಧಿಕಾರಿಯಾಗಿರುವವರು ಅವರ ಎರಡನೇ ಪುತ್ರ ತೇಜಸ್ವಿ ಪ್ರಸಾದ್‌ ಯಾದವ್‌(Tejashwi Prasad Yadav). ರಾಷ್ಟ್ರೀಯ ಜನತಾದಳ ಪಕ್ಷವನ್ನು ಮುನ್ನಡೆಸುತ್ತಿರುವ ತೇಜಸ್ವಿ ಬಿಹಾರದಲ್ಲಿ ಎರಡು ಬಾರಿ ಡಿಸಿಎಂ ಆಗಿ ಕೆಲಸ ಮಾಡಿದವರು. ಸಂಯುಕ್ತ ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ಇವರೇ ಪಕ್ಷದ ಚುಕ್ಕಾಣಿ ಹಿಡಿದವರು. ಈಗ ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ.
icon

(5 / 8)

ಲಾಲೂ ಅವರ ಹಿರಿಯ ಪತ್ರ ತೇಜ್‌ ಪ್ರತಾಪ್‌ ಯಾದವ್‌(Tej Pratap Yadav). ಮೊದಲ ಬಾರಿಗೆ ಆರೋಗ್ಯ ಸಚಿವರಾಗಿದ್ದ ತೇಜ್‌, ಎರಡನೇ ಬಾರಿಗೆ ಅರಣ್ಯ ಸಚಿವರಾಗಿದ್ದರು. ವಿವಿಧ ದೇವರ ವೇಷಧಾರಿಯಾಗಿ ತೇಜ್‌ ಪ್ರತಾಪ್‌ ಗಮನ ಸೆಳೆದಿದ್ದರು. ಈಗಲೂ ಶಾಸಕ.
icon

(6 / 8)

ಲಾಲೂ ಅವರ ಮೂರನೇ ಪುತ್ರಿ ರೋಹಿಣಿ ಆಚಾರ್ಯ(Rohini Acharya) ಉದ್ಯಮಿ ಮದುವೆಯಾಗಿ ಸಿಂಗಾಪೂರದಲ್ಲಿದ್ದಾರೆ. ಎರಡು ವರ್ಷದ ಹಿಂದೆ ರೋಹಿಣಿ ಅವರು ತಮ್ಮ ತಂದೆಗೆ ಒಂದು ಕಿಡ್ನಿ ದಾನ ಮಾಡಿ ಸುದ್ದಿಯಲ್ಲಿದ್ದರು. ಈಗಲೂ ಅದೇ ಕಿಡ್ನಿಯಲ್ಲಿಯೇ ಲಾಲೂ ಜೀವನ ನಡೆದಿದೆ. 
icon

(7 / 8)

ರೋಹಿಣಿ ಆಚಾರ್ಯ ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅದೂ ತಂದೆ ಲಾಲೂ ಯಾದವ್‌ ಮೂರು ಬಾರಿ ಪ್ರತಿನಿಧಿಸಿದ್ದ ಸರನ್‌ ಲೋಕಸಭಾ ಕ್ಷೇತ್ರದಿಂದ. ತಾಯಿ ರಾಬ್ರಿದೇವಿ ಕೂಡ ಹತ್ತು ವರ್ಷದ ಹಿಂದೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಈಗ ಮಗಳು ಆ ಕ್ಷೇತ್ರದತ್ತ ಮುಖ ಮಾಡಿರುವುದು ವಿಶೇಷ. ಈ ಮೂಲಕ ಲಾಲೂ ಕುಟುಂಬದ ಆರನೇ ಪ್ರತಿನಿಧಿಯಾಗಿ ರೋಹಿಣಿ ಸ್ಪರ್ಧಿಸುತ್ತಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು