ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಿದ್ದತೆ, ಹೊರಟರು ಸಿಬ್ಬಂದಿ, ತಯಾರಿ ನೋಟ ಹೀಗಿದೆ
- ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ. ಈಗಾಗಲೇ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ಮತಗಟ್ಟೆಗೆ ತೆರಳಿದ್ದಾರೆ. ತಯಾರಿ ಚಿತ್ರಣ ಹೀಗಿತ್ತು.
- ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ. ಈಗಾಗಲೇ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ಮತಗಟ್ಟೆಗೆ ತೆರಳಿದ್ದಾರೆ. ತಯಾರಿ ಚಿತ್ರಣ ಹೀಗಿತ್ತು.
(1 / 7)
ಲೋಕಸಭೆ ಚುನಾವಣೆ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ಶುಕ್ರವಾರ ಮತದಾನ ಇರುವ 14 ಕ್ಷೇತ್ರಗಳಲ್ಲಿ ಹೊರ ತೆಗೆದು ಸಿಬ್ಬಂದಿಗೆ ಹಂಚಿಕೆ ಮಾಡಲಾಯಿತು.
(2 / 7)
ಚುನಾವಣೆಗೆ ಹೊರಡುವ ಸಿಬ್ಬಂದಿಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ನೀಡಲು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತಿದ್ದರು.
(3 / 7)
ಮತದಾನದಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ಕೊನೆ ಹಂತದ ತರಬೇತಿ. ಮಸ್ಟರಿಂಗ್ ಕೇಂದ್ರಗಳಲ್ಲಿಯೇ ಸಿಬ್ಬಂದಿಗೆ ಕೊನೆ ಹಂತದ ತರಬೇತಿಯನ್ನು ನೀಡಲಾಯಿತು.
(4 / 7)
ಚುನಾವಣೆ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿಗಳನ್ನು ಕರೆದೊಯ್ಯಲು ಅಣಿಯಾಗಿದ್ದ ಬಸ್‌ಗಳು. ಆಯಾ ಮಾರ್ಗದನ್ವಯ ಚುನಾವಣೆ ಸಿಬ್ಬಂದಿ ಬಸ್ ಏರಿದರು.
(5 / 7)
ಸಿಬ್ಬಂದಿಗಳು ತಮಗೆ ನೀಡಿರುವ ಚುನಾವಣೆ ಮತಯಂತ್ರ ಹಾಗೂ ಸರಂಜಾಮುಗಳೊಂದಿಗೆ ಮತದಾನ ಕೇಂದ್ರಗಳಿಗೆ ತೆರಳಲು ಬಸ್‌ಗಳನ್ನು ಏರಿದರು.
(6 / 7)
ಮೈಸೂರಿನ ಪ್ರಮುಖ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ ಚುನಾವಣೆಗೆ ಹೊರಟವರಿಂದ ವಿವರ ಪಡೆದುಕೊಂಡರು.
ಇತರ ಗ್ಯಾಲರಿಗಳು