ಲೋಕಸಭಾ ಚುನಾವಣೆ; ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಹಂತದ ಮತದಾನ, ಸಂಭ್ರಮ, ಸಡಗರದ ಚಿತ್ರನೋಟ ಹೀಗಿದೆ
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ಬೆಳಗ್ಗೆ 7 ಗಂಟೆಗೆ ಶುರುವಾಗಿದೆ. 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮತದಾರರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಹಂತದ ಮತದಾನದ ಸಂಭ್ರಮ, ಸಡಗರಗಳ ಚಿತ್ರನೋಟ ಇಲ್ಲಿದೆ.
(1 / 10)
ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನವಜೋಡಿಯೊಂದು ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸಂದರ್ಭ.
(PTI/ CEOMPElection)(3 / 10)
ಮೊದಲ ಹಂತದ ಚುನಾವಣೆಯಲ್ಲಿ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 1.87 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 16.6 ಕೋಟಿಗೂ ಅಧಿಕ ಮತದಾರರು ಮತದಾನ ಮಾಡುತ್ತಿದ್ದಾರೆ.
(Bloomberg)(5 / 10)
100 ಕೋಟಿ ಭಾರತೀಯರು ಮತದಾನ ಮಾಡುವ ಪ್ರಜಾಪ್ರಭುತ್ವದ ಹಬ್ಬ ಆರುವಾರ ನಡೆಯಲಿದ್ದು, ಮೊದಲ ಹಂತದ ಮತದಾನದೊಂದಿಗೆ ಇಂದು ಶುರುವಾಗಿದೆ.
(Bloomberg)(7 / 10)
ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಅವರ ಪತ್ನಿ ಮತದಾನ ಮಾಡಿದ ಬಳಿಕ ತಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿಸಿದರು.
(PTI)(9 / 10)
ಪಶ್ಚಿಮ ಬಂಗಾಳದ ಕೂಚ್ ಬೆಹರ್‌ನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು ಮತಚಲಾಯಿಸಲು ಸರದಿ ನಿಂತ ಮತದಾರರು.
(AFP)ಇತರ ಗ್ಯಾಲರಿಗಳು