ಕನ್ನಡ ಸುದ್ದಿ  /  Photo Gallery  /  Loksabha Election 2024 Difference Between President Prime Minister Who Does Have More Power Indian Constitution Rsm

Loksabha Election 2024: ರಾಷ್ಟ್ರಪತಿಗೂ ಪ್ರಧಾನ ಮಂತ್ರಿಗೂ ಏನು ವ್ಯತ್ಯಾಸ, ಯಾರಿಗೆ ಹೆಚ್ಚು ಅಧಿಕಾರ ಇದೆ? ಇಲ್ಲಿದೆ ಮಾಹಿತಿ

Loksabha Election 2024: ಪ್ರಸ್ತುತ ಭಾರತದ 15ನೇ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು, 19ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೇ ಜಗದೀಪ್‌ ಧನ್‌ಕರ್‌ 14ನೇ ಉಪ ರಾಷ್ಟ್ರಪತಿಯಾಗಿದ್ದಾರೆ.

ರಾಷ್ಟ್ರಪತಿ ದೇಶದ ಮೊದಲ ಪ್ರಜೆ, ಅದು ದೇಶದ ಅತ್ಯುನ್ನತ ಹುದ್ದೆ. ಪ್ರಧಾನ ಮಂತ್ರಿಯು ಸರ್ಕಾರದ ಅಧ್ಯಕ್ಷ ಮತ್ತು ಸರ್ಕಾರದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.  ರಾಷ್ಟ್ರಪತಿಗೂ ಪ್ರಧಾನಿಗೂ ಏನು ವ್ಯತ್ಯಾಸ? ಯಾರಿಗೆ ಹೆಚ್ಚು ಅಧಿಕಾರ ಇದೆ ಅನ್ನೋದನ್ನು ನೋಡೋಣ. 
icon

(1 / 9)

ಸಂವಿಧಾನದ  54ರ ವಿಧಿಯನ್ವಯ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್‌ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಸದಸ್ಯರು ಮತದಾನ ಮಾಡಿ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಪ್ರಧಾನ ಮಂತ್ರಿಯನ್ನು ಭಾರತದ ರಾಷ್ಟ್ರಪತಿ ನೇಮಿಸುತ್ತಾರೆ. 
icon

(2 / 9)

ರಾಷ್ಟ್ರಪತಿಗಳು ಸಂವಿಧಾನ, ಕಾರ್ಯಾಂಗ, ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರವನ್ನೊಂದಿರುತ್ತಾರೆ.  ರಾಷ್ಟ್ರಪತಿ ಹುದ್ದೆಗೆ  ಬೇರೆ ಯಾವ ಜನಪ್ರತಿನಿಧಿಗೂ, ಅಧಿಕಾರಿಗಳಿಗೂ ಇಲ್ಲದ ಮುಖ್ಯ ಅಧಿಕಾರಗಳಿವೆ. ಪ್ರಧಾನ ಮಂತ್ರಿಗೆ ಕಾರ್ಯನಿರ್ವಾಹಕ ಅಧಿಕಾರಗಳು, ಆಡಳಿತಾತ್ಮಕ ಮತ್ತು ನೇಮಕಾತಿ ಅಧಿಕಾರಗಳಿರುತ್ತದೆ. 
icon

(3 / 9)

ಕೇಂದ್ರ ಸರ್ಕಾರದ ಎಲ್ಲ ವ್ಯವಹಾರಗಳು ರಾಷ್ಟ್ರಪತಿ ಹೆಸರಿನಲ್ಲಿ ನಡೆಯುತ್ತದೆ. ಲೋಕಸಭೆ, ರಾಜ್ಯಸಭೆ ಅಧಿವೇಶನ ಕರೆಯುವ ಮತ್ತು ಪ್ರಧಾನಿ ಸಲಹೆ ಮೇರೆಗೆ ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ. ಪ್ರಧಾನ ಮಂತ್ರಿಗಳು ಸಚಿವರಿಗೆ ಉಸ್ತುವಾರಿ ಹಂಚಿಕೆಯನ್ನು ನಿರ್ಧರಿಸುತ್ತಾರೆ, ಕ್ಯಾಬಿನೆಟ್ ಪುನರಚಿಸುವ ಅಧಿಕಾರ ಕೂಡಾ ಇವರಿಗಿದೆ. 
icon

(4 / 9)

ರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿಗಳು ಅವರ ಕೆಲಸವನ್ನು ನಿಭಾಯಿಸುತ್ತಾರೆ. ಸದ್ಯಕ್ಕೆ ಜಗದೀಪ್‌ ಧನ್‌ಕರ್‌ ಉಪರಾಷ್ಟ್ರಪತಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 
icon

(5 / 9)

ಬೇರೆ ಬೇರೆ ದೇಶಗಳಿಗೆ ರಾಯಭಾರಿಗಳು, ಕಮಿಷನರ್‌ಗಳನ್ನು ಕಳಿಸುವುದು ಹಾಗೂ ವಾಪಸ್‌  ಕರೆಸಿಕೊಳ್ಳುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಮುಖ್ಯ ಚುನಾವಣಾಧಿಕಾರಿಯನ್ನು ನೇಮಕ ಮಾಡುವ ಅಧಿಕಾರ, ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವ, ಕ್ಷಮೆ ನೀಡುವ ಹಾಗೂ ಶಿಕ್ಷೆ ಕಡಿಮೆ ಮಾಡುವ ಪವರ್‌ ರಾಷ್ಟ್ರಪತಿಗಳಿಗೆ ಇದೆ.   
icon

(6 / 9)

ಪ್ರಧಾನ ಮಂತ್ರಿಗಳು ದೇಶದ ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತಾರೆ. ಒಂದು ವೇಳೆ ಪ್ರಧಾನ ಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರೆ ಅಥವಾ ಮರಣ ಹೊಂದಿದರೆ, ಕ್ಯಾಬಿನೆಟ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ, ಸ್ವಯಂಪ್ರೇರಿತವಾಗಿ ವಿಸರ್ಜನೆಯಾಗುತ್ತದೆ. 
icon

(7 / 9)

ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ವಾಸವಿರುತ್ತಾರೆ. ಅವರ ಕಾರ್ಯಲಯ ಕೂಡಾ ಅಲ್ಲೇ ಇರುತ್ತದೆ. 
icon

(8 / 9)

ಪ್ರಧಾನ ಮಂತ್ರಿಗಳಿಗೆ ದೆಹಲಿಯ ಲೋಕ್‌ ಕಲ್ಯಾಣ್‌ ಮಾರ್ಗ್‌ನ ಬಂಗಲೆಯಲ್ಲಿ ವಾಸಿಸುತ್ತಾರೆ. ಸಂಸತ್‌ ಭವನದಲ್ಲಿ ಪ್ರಧಾನ ಮಂತ್ರಿ ಕಾರ್ಯ ನಿರ್ವಹಿಸುತ್ತಾರೆ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು