ಕನ್ನಡ ಸುದ್ದಿ  /  Photo Gallery  /  Loksabha Elections Shimoga Congress Candidate Geetha Started Campaign In Bhadravati With Hattrick Hero Shivarajkumar Kub

Lok Sabha Elections 2024: ಪತ್ನಿ ಪರ ಅಖಾಡಕ್ಕಿಳಿದ ಹ್ಯಾಟ್ರಿಕ್‌ ಸ್ಟಾರ್‌ ಶಿವಣ್ಣ, ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಪ್ರಚಾರ ಶುರು Photos

 ಲೋಕಸಭೆ ಚುನಾವಣೆಗೆ ಪ್ರಚಾರ ನಿಧಾನವಾಗಿ ಶುರುವಾಗುತ್ತಿದೆ. ಶಿವಮೊಗ್ಗಕ್ಕೆ ಮೋದಿ ಬಂದು ನಂತರ ಈಗ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಪ್ರಚಾರ ಆರಂಭಿಸಿದ್ದಾರೆ. ಪತಿ ಶಿವರಾಜಕುಮಾರ್‌ ಅವರೊಂದಿಗೆ ಆಗಮಿಸಿದ ಗೀತಾ ಭದ್ರಾವತಿಯಲ್ಲಿ ಮತ ಯಾಚಿಸಿದರು. ಆ ಚಿತ್ರಣ ಹೀಗಿತ್ತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌ ಬುಧವಾರ ಪ್ರಚಾರವನ್ನು ಆರಂಭಿಸಿದರು.
icon

(1 / 7)

ದಶಕದ ಹಿಂದೆ ಜೆಡಿಎಸ್‌ನಿಂದ ಕಣಕ್ಕಿಳಿದು ಸೋತಿದ್ದ ಗೀತಾ ಶಿವರಾಜಕುಮಾರ್‌ ಅವರು ಈ ಬಾರಿ ಮತ್ತೆ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಪತಿ ಶಿವರಾಜಕುಮಾರ್‌ ಸಂಪೂರ್ಣ ಬೆಂಬಲವಿದೆ.
icon

(2 / 7)

ಟಿಕೆಟ್‌ ಘೋಷಣೆಯಾಗಿ ಪ್ರಚಾರ ಆರಂಭಿಸುವ ಮುನ್ನಾ ದಿನ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗೀತಾ ಹಾಗೂ ಶಿವರಾಜಕುಮಾರ್‌ ದಂಪತಿ ಭೇಟಿ ಮಾಡಿದ್ದರು.
icon

(3 / 7)

ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ನಗರಿ ಭದ್ರಾವತಿಗೆ ಗೀತಾ ಹಾಗೂ ಶಿವರಾಜಕುಮಾರ್‌ ಅವರು ಆಗಮಿಸಿದಾಗ ಕೊಬ್ಬರಿ ಹಾರದೊಂದಿಗೆ ಅವರನ್ನು ಬರ ಮಾಡಿಕೊಳ್ಳಲಾಯಿತು.
icon

(4 / 7)

ಭದ್ರಾವತಿ ತಾಲ್ಲೂಕಿನ ಕಾರಾಪುರಕ್ಕೆ ಆಗಮಿಸಿದ ಗೀತಾ ಹಾಗೂ ಶಿವರಾಜಕುಮಾರ್‌ ಅವರು ಪೂಜೆ ಸಲ್ಲಿಸಿದರು.
icon

(5 / 7)

ದೇಗುಲದಲ್ಲಿ ಪೂಜೆ ಸಲ್ಲಿಸಿ ಗೀತಾ ಹಾಗೂ ಶಿವರಾಜಕುಮಾರ್‌ ಅವರು ಪ್ರಚಾರ ಆರಂಭಿಸಿದಾಗ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌, ಯುವ ಕಾಂಗ್ರೆಸ್‌ ನಾಯಕ ಬಿ.ವಿ.ಶ್ರೀನಿವಾಸ್‌ ಮತ್ತಿತರರು ಸಾಥ್‌ ನೀಡಿದರು,
icon

(6 / 7)

ಭದ್ರಾವತಿ ನಗರದಲ್ಲಿ ಮೆರವಣಿಗೆ ನಡೆಸಿ ತಮಗೆ ಮತ ನೀಡುವಂತೆ ಗೀತಾ ಶಿವರಾಜಕುಮಾರ್‌ ಅವರು ಜನರಲ್ಲಿ ವಿನಂತಿಸಿದರು.ಶಿವರಾಜಕುಮಾರ್‌ ಕೂಡ ಭಾಷಣ ಮಾಡಿದರು. 
icon

(7 / 7)

IPL_Entry_Point

ಇತರ ಗ್ಯಾಲರಿಗಳು