Lost items in trains: ರೈಲಿನಲ್ಲಿ ಲಗೇಜ್‌ ಮಿಸ್‌ ಆಯ್ತಾ? ಅದು ಸಿಗುತ್ತಾ? ಏನ್‌ ಮಾಡಬೇಕು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lost Items In Trains: ರೈಲಿನಲ್ಲಿ ಲಗೇಜ್‌ ಮಿಸ್‌ ಆಯ್ತಾ? ಅದು ಸಿಗುತ್ತಾ? ಏನ್‌ ಮಾಡಬೇಕು?

Lost items in trains: ರೈಲಿನಲ್ಲಿ ಲಗೇಜ್‌ ಮಿಸ್‌ ಆಯ್ತಾ? ಅದು ಸಿಗುತ್ತಾ? ಏನ್‌ ಮಾಡಬೇಕು?

  • ರೈಲು ಪ್ರಯಾಣದ ವೇಳೆ, ಪ್ರಯಾಣಿಕರು ಲಗೇಜ್‌ ಅನ್ನು ಬೋಗಿಗಳಲ್ಲೇ ಮರೆತು ಹೋಗುವುದು ಸಾಮಾನ್ಯ. ಆದ್ರೆ ಈ ರೀತಿ ಮರೆತು ಹೋದ ಲಗೇಜ್‌ ವಾಪಸ್‌ ಪಡೆಯುವುದು ಹೇಗೆ? ಇದಕ್ಕೇನಾದರೂ ವ್ಯವಸ್ಥೆ ಇದೆಯಾ? ಅಥವಾ ಅದು ಹೋಗಿದ್ದೇ ಅಂತ ಕೈ ಚೆಲ್ಲೋದಾ? ಇಲ್ಲಿದೆ ವಿವರ ನೋಡಿ. 

ರೈಲಿನಲ್ಲಿ ದೂರ ಪ್ರಯಾಣ ಹೋಗುವಾಗ ಪ್ರಯಾಣಿಕರು ತಮ್ಮೊಂದಿಗೆ ಬಹಳಷ್ಟು ಲಗೇಜ್ ತೆಗೆದುಕೊಂಡು ಹೋಗುತ್ತಾರೆ. ಕೆಲವರು ಆಕಸ್ಮಿಕವಾಗಿ ತಮ್ಮ ಬ್ಯಾಗ್ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ರೈಲಿನಲ್ಲಿ ಬಿಟ್ಟು ಹೋಗುತ್ತಾರೆ.  ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕು? ಲಗೇಜ್‌ ಕಳೆದು ಹೋದ ಬಗ್ಗೆ ಅಥವಾ ಮರೆತು ಹೋಗಿರುವ ಬಗ್ಗೆ ರೈಲ್ವೆ ನಿಲ್ದಾಣದಲ್ಲಿ ತಿಳಿಸದೇ ಇದ್ದರೆ ಭಾರತೀಯ ರೈಲ್ವೆ ಇಂತಹ ಲಗೇಜ್‌ಗಳನ್ನು ಏನು ಮಾಡುತ್ತದೆ ಎಂಬುದನ್ನು ತಿಳಿಯೋಣ. (ಚಿತ್ರ ಪಿಟಿಐ)
icon

(1 / 6)

ರೈಲಿನಲ್ಲಿ ದೂರ ಪ್ರಯಾಣ ಹೋಗುವಾಗ ಪ್ರಯಾಣಿಕರು ತಮ್ಮೊಂದಿಗೆ ಬಹಳಷ್ಟು ಲಗೇಜ್ ತೆಗೆದುಕೊಂಡು ಹೋಗುತ್ತಾರೆ. ಕೆಲವರು ಆಕಸ್ಮಿಕವಾಗಿ ತಮ್ಮ ಬ್ಯಾಗ್ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ರೈಲಿನಲ್ಲಿ ಬಿಟ್ಟು ಹೋಗುತ್ತಾರೆ.  ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕು? ಲಗೇಜ್‌ ಕಳೆದು ಹೋದ ಬಗ್ಗೆ ಅಥವಾ ಮರೆತು ಹೋಗಿರುವ ಬಗ್ಗೆ ರೈಲ್ವೆ ನಿಲ್ದಾಣದಲ್ಲಿ ತಿಳಿಸದೇ ಇದ್ದರೆ ಭಾರತೀಯ ರೈಲ್ವೆ ಇಂತಹ ಲಗೇಜ್‌ಗಳನ್ನು ಏನು ಮಾಡುತ್ತದೆ ಎಂಬುದನ್ನು ತಿಳಿಯೋಣ. (ಚಿತ್ರ ಪಿಟಿಐ)(PTI)

ಆದ್ದರಿಂದ ಪ್ರತಿ ರೈಲು ಕೂಡ ಅದರ ಗಮ್ಯಸ್ಥಾನವನ್ನು ತಲುಪಿದ ನಂತರ ಪ್ರತಿ ಬೋಗಿಯನ್ನೂ ಪರಿಶೀಲಿಸಲಾಗುತ್ತದೆ.  ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ (RPF) ಸಿಬ್ಬಂದಿ ಈ ತಪಾಸಣೆ ನಡೆಸುತ್ತಾರೆ. ಈ ತಪಾಸಣೆ ಸುರಕ್ಷತೆ, ಭದ್ರತೆಯ ದೃಷ್ಟಿಯಿಂದಲೂ ನಡೆಯುತ್ತದೆ. ಯಾವುದೇ ಪ್ರಯಾಣಿಕರು ಲಗೇಜ್ ಮಿಸ್‌ ಮಾಡಿಕೊಂಡಿದ್ದರೆ ಅಥವಾ ಇನ್ನೇನಾದರೂ ಬಿಟ್ಟು ಹೋಗಿದ್ದರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಏನಾದರೂ ಸಿಕ್ಕರೆ, ಅವುಗಳನ್ನು ಸ್ಟೇಷನ್ ಮಾಸ್ಟರ್ ಗೋಡೌನ್‌ನಲ್ಲಿ ಇರಿಸಲಾಗುತ್ತದೆ. (ಚಿತ್ರ - ಭಾರತೀಯ ರೈಲ್ವೆ)
icon

(2 / 6)

ಆದ್ದರಿಂದ ಪ್ರತಿ ರೈಲು ಕೂಡ ಅದರ ಗಮ್ಯಸ್ಥಾನವನ್ನು ತಲುಪಿದ ನಂತರ ಪ್ರತಿ ಬೋಗಿಯನ್ನೂ ಪರಿಶೀಲಿಸಲಾಗುತ್ತದೆ.  ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ (RPF) ಸಿಬ್ಬಂದಿ ಈ ತಪಾಸಣೆ ನಡೆಸುತ್ತಾರೆ. ಈ ತಪಾಸಣೆ ಸುರಕ್ಷತೆ, ಭದ್ರತೆಯ ದೃಷ್ಟಿಯಿಂದಲೂ ನಡೆಯುತ್ತದೆ. ಯಾವುದೇ ಪ್ರಯಾಣಿಕರು ಲಗೇಜ್ ಮಿಸ್‌ ಮಾಡಿಕೊಂಡಿದ್ದರೆ ಅಥವಾ ಇನ್ನೇನಾದರೂ ಬಿಟ್ಟು ಹೋಗಿದ್ದರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಏನಾದರೂ ಸಿಕ್ಕರೆ, ಅವುಗಳನ್ನು ಸ್ಟೇಷನ್ ಮಾಸ್ಟರ್ ಗೋಡೌನ್‌ನಲ್ಲಿ ಇರಿಸಲಾಗುತ್ತದೆ. (ಚಿತ್ರ - ಭಾರತೀಯ ರೈಲ್ವೆ)(Indian Railways)

ಸ್ಟೇಷನ್ ಮಾಸ್ಟರ್ ಗೋಡೌನ್‌ನಲ್ಲಿ ಇರಿಸುವಾಗ ಪ್ರಯಾಣಿಕರು ಬಿಟ್ಟು ಹೋದ ವಸ್ತುವಿನ ವಿವರ, ತೂಕ, ಅಂದಾಜು ಬೆಲೆಯನ್ನು ಬರೆಯಲಾಗುತ್ತದೆ. ಚೀಲ ಅಥವಾ ಪೆಟ್ಟಿಗೆಯಲ್ಲಿಟ್ಟು ಬಂದ್‌ ಮಾಡಿ ಇರಿಸಲಾಗುತ್ತದೆ. (ಚಿತ್ರ - ಪಿಟಿಐ )
icon

(3 / 6)

ಸ್ಟೇಷನ್ ಮಾಸ್ಟರ್ ಗೋಡೌನ್‌ನಲ್ಲಿ ಇರಿಸುವಾಗ ಪ್ರಯಾಣಿಕರು ಬಿಟ್ಟು ಹೋದ ವಸ್ತುವಿನ ವಿವರ, ತೂಕ, ಅಂದಾಜು ಬೆಲೆಯನ್ನು ಬರೆಯಲಾಗುತ್ತದೆ. ಚೀಲ ಅಥವಾ ಪೆಟ್ಟಿಗೆಯಲ್ಲಿಟ್ಟು ಬಂದ್‌ ಮಾಡಿ ಇರಿಸಲಾಗುತ್ತದೆ. (ಚಿತ್ರ - ಪಿಟಿಐ )(PTI)

ರೈಲು ಪ್ರಯಾಣದ ವೇಳೆ ಲಗೇಜ್‌ ಮಿಸ್‌ ಮಾಡಿಕೊಂಡರೆ ಅಥವಾ ಬೋಗಿಯಲ್ಲೇ ಮರೆತು ಹೋಗಿದ್ದರೆ ಪ್ರಯಾಣಿಕರು ತಾವು ಇಳಿದ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್‌ ಮಾಸ್ಟರ್‌ ಅನ್ನು ಸಂಪರ್ಕಿಸಬೇಕು. ಅವರಿಗೆ ಸರಿಯಾದ ಪುರಾವೆ ಒದಗಿಸಿ, ಮಿಸ್‌ ಮಾಡಿಕೊಂಡ ವಸ್ತುವನ್ನು ಹಿಂದಿರುಗಿಸುವಂತೆ ಮನವಿ ಮಾಡಬೇಕು. ಅವರು ಅದನ್ನು ಖಚಿತ ಪಡಿಸಿಕೊಂಡು ವಸ್ತುವನ್ನು ಪ್ರಯಾಣಿಕರಿಗೆ ಹಿಂದಿರುಗಿಸುತ್ತಾರೆ. (ಚಿತ್ರ - ಪಿಟಿಐ)
icon

(4 / 6)

ರೈಲು ಪ್ರಯಾಣದ ವೇಳೆ ಲಗೇಜ್‌ ಮಿಸ್‌ ಮಾಡಿಕೊಂಡರೆ ಅಥವಾ ಬೋಗಿಯಲ್ಲೇ ಮರೆತು ಹೋಗಿದ್ದರೆ ಪ್ರಯಾಣಿಕರು ತಾವು ಇಳಿದ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್‌ ಮಾಸ್ಟರ್‌ ಅನ್ನು ಸಂಪರ್ಕಿಸಬೇಕು. ಅವರಿಗೆ ಸರಿಯಾದ ಪುರಾವೆ ಒದಗಿಸಿ, ಮಿಸ್‌ ಮಾಡಿಕೊಂಡ ವಸ್ತುವನ್ನು ಹಿಂದಿರುಗಿಸುವಂತೆ ಮನವಿ ಮಾಡಬೇಕು. ಅವರು ಅದನ್ನು ಖಚಿತ ಪಡಿಸಿಕೊಂಡು ವಸ್ತುವನ್ನು ಪ್ರಯಾಣಿಕರಿಗೆ ಹಿಂದಿರುಗಿಸುತ್ತಾರೆ. (ಚಿತ್ರ - ಪಿಟಿಐ)(PTI)

ಆದರೆ ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ರೈಲು ಪ್ರಯಾಣದ ವೇಳೆ ಕಳೆದುಕೊಂಡ ವಸ್ತುವನ್ನು 7 ದಿನಗಳ ಒಳಗೆ ಕ್ಲೇಮ್‌ ಮಾಡಬೇಕು. ಅಂದರೆ ಸ್ಟೇಷನ್‌ ಮಾಸ್ಟರ್‌ ಅನ್ನು ಸಂಪರ್ಕಿಸಿ ವಸ್ತು ತನ್ನದೆಂದು ಹೇಳಿಕೊಳ್ಳಬೇಕು. ಅದಕ್ಕೆ ಪುರಾವೆ ಒದಗಿಸಬೇಕು. ವಾರದ ಒಳಗೆ ಕ್ಲೇಮ್‌ ಮಾಡದೇ ಇದ್ದರೆ ಅಂತಹ ಸಂದರ್ಭದಲ್ಲಿ ಅದನ್ನು ಕಳೆದು ಹೋದ ಆಸ್ತಿ (Lost Property Office)  ಕಚೇರಿಗೆ ಕಳುಹಿಸಲಾಗುತ್ತದೆ. ಹೀಗಿರುವಾಗ ಯಾರಾದರೂ ಅಲ್ಲಿಂದ ಏನನ್ನಾದರೂ ತರಲು ಬಯಸಿದರೆ, ಆಗ ಅಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. (ಕಡತ ಚಿತ್ರ - HT) 
icon

(5 / 6)

ಆದರೆ ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ರೈಲು ಪ್ರಯಾಣದ ವೇಳೆ ಕಳೆದುಕೊಂಡ ವಸ್ತುವನ್ನು 7 ದಿನಗಳ ಒಳಗೆ ಕ್ಲೇಮ್‌ ಮಾಡಬೇಕು. ಅಂದರೆ ಸ್ಟೇಷನ್‌ ಮಾಸ್ಟರ್‌ ಅನ್ನು ಸಂಪರ್ಕಿಸಿ ವಸ್ತು ತನ್ನದೆಂದು ಹೇಳಿಕೊಳ್ಳಬೇಕು. ಅದಕ್ಕೆ ಪುರಾವೆ ಒದಗಿಸಬೇಕು. ವಾರದ ಒಳಗೆ ಕ್ಲೇಮ್‌ ಮಾಡದೇ ಇದ್ದರೆ ಅಂತಹ ಸಂದರ್ಭದಲ್ಲಿ ಅದನ್ನು ಕಳೆದು ಹೋದ ಆಸ್ತಿ (Lost Property Office)  ಕಚೇರಿಗೆ ಕಳುಹಿಸಲಾಗುತ್ತದೆ. ಹೀಗಿರುವಾಗ ಯಾರಾದರೂ ಅಲ್ಲಿಂದ ಏನನ್ನಾದರೂ ತರಲು ಬಯಸಿದರೆ, ಆಗ ಅಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. (ಕಡತ ಚಿತ್ರ - HT) (HT_PRINT)

ಇನ್ನು, ಪ್ರಯಾಣಿಕರು ಬಿಟ್ಟು ಹೋದ ಲಗೇಜ್‌ನಲ್ಲಿ ಯಾವುದೇ ಬೆಲೆಬಾಳುವ ವಸ್ತುವಿದ್ದರೆ ಮತ್ತು ಪ್ರಯಾಣಿಕರ ಜತೆ ಸಂಪರ್ಕ ಸಾಧಿಸುವ ವಿಳಾಸ, ಫೋನ್‌ ನಂ‌ಬರ್‌ ಇದ್ದರೆ ಆಗ ರೈಲ್ವೆ ಪೊಲೀಸರೇ ಅದನ್ನು ಅವರಿಗೆ ತಲುಪಿಸುತ್ತಾರೆ. ಇದಕ್ಕೆ ಯಾವುದೇ ಶುಲ್ಕವನ್ನು ಅವರು ಪಡೆದುಕೊಳ್ಳುವುದಿಲ್ಲ. ( ಸಾಂದರ್ಭಿಕ ಚಿತ್ರ - ಟ್ವಿಟರ್‌)
icon

(6 / 6)

ಇನ್ನು, ಪ್ರಯಾಣಿಕರು ಬಿಟ್ಟು ಹೋದ ಲಗೇಜ್‌ನಲ್ಲಿ ಯಾವುದೇ ಬೆಲೆಬಾಳುವ ವಸ್ತುವಿದ್ದರೆ ಮತ್ತು ಪ್ರಯಾಣಿಕರ ಜತೆ ಸಂಪರ್ಕ ಸಾಧಿಸುವ ವಿಳಾಸ, ಫೋನ್‌ ನಂ‌ಬರ್‌ ಇದ್ದರೆ ಆಗ ರೈಲ್ವೆ ಪೊಲೀಸರೇ ಅದನ್ನು ಅವರಿಗೆ ತಲುಪಿಸುತ್ತಾರೆ. ಇದಕ್ಕೆ ಯಾವುದೇ ಶುಲ್ಕವನ್ನು ಅವರು ಪಡೆದುಕೊಳ್ಳುವುದಿಲ್ಲ. ( ಸಾಂದರ್ಭಿಕ ಚಿತ್ರ - ಟ್ವಿಟರ್‌)(Twitter)


ಇತರ ಗ್ಯಾಲರಿಗಳು