ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಹಳಷ್ಟು ಪ್ರಶ್ನೆಗಳಿವೆ, ಆದರೆ ಉತ್ತರಿಸಲು ಸ್ವಲ್ಪ ಸಮಯ ಬೇಕು; ಹಾರ್ದಿಕ್ ಪಾಂಡ್ಯ ನೋವಿನ ಮಾತು

ಬಹಳಷ್ಟು ಪ್ರಶ್ನೆಗಳಿವೆ, ಆದರೆ ಉತ್ತರಿಸಲು ಸ್ವಲ್ಪ ಸಮಯ ಬೇಕು; ಹಾರ್ದಿಕ್ ಪಾಂಡ್ಯ ನೋವಿನ ಮಾತು

  • Hardik Pandya : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸೋಲಿಗೆ ಕಾರಣ ಏನೆಂಬುದನ್ನು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬಹಿರಂಗಪಡಿಸಿದ್ದಾರೆ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ 51ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 24 ರನ್​ಗಳಿಂದ ಹೀನಾಯ ಸೋಲಿಗೆ ಶರಣಾಯಿತು. ಇದರೊಂದಿಗೆ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿತು. ಆದರೂ ಸಾಸಿವೆ ಕಾಳಿನಷ್ಟು ಅವಕಾಶ ಇದೆ. 
icon

(1 / 8)

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ 51ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 24 ರನ್​ಗಳಿಂದ ಹೀನಾಯ ಸೋಲಿಗೆ ಶರಣಾಯಿತು. ಇದರೊಂದಿಗೆ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿತು. ಆದರೂ ಸಾಸಿವೆ ಕಾಳಿನಷ್ಟು ಅವಕಾಶ ಇದೆ. (AFP)

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, 20 ಓವರ್​​ಗಳಲ್ಲಿ 169 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮುಂಬೈ, 18.5 ಓವರ್​​ಗಳಲ್ಲಿ 145 ರನ್​ಗಳಿಗೆ ಆಲೌಟ್​​ ಆಯಿತು. 2012ರ ಈ ಮೈದಾನದಲ್ಲಿ ಎಂಐ ವಿರುದ್ಧ ಎಂಐ ಗೆದ್ದು ಬೀಗಿತು.
icon

(2 / 8)

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, 20 ಓವರ್​​ಗಳಲ್ಲಿ 169 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮುಂಬೈ, 18.5 ಓವರ್​​ಗಳಲ್ಲಿ 145 ರನ್​ಗಳಿಗೆ ಆಲೌಟ್​​ ಆಯಿತು. 2012ರ ಈ ಮೈದಾನದಲ್ಲಿ ಎಂಐ ವಿರುದ್ಧ ಎಂಐ ಗೆದ್ದು ಬೀಗಿತು.(AFP)

ಕೆಕೆಆರ್​ ವಿರುದ್ಧ ಪಂದ್ಯದ ಸೋಲಿಗೆ ಕಾರಣ ಏನೆಂಬುದನ್ನು ನಾಯಕ ಹಾರ್ದಿಕ್​ ಪಾಂಡ್ಯ ವಿವರಿಸಿದ್ದಾರೆ. ರನ್​ಚೇಸ್‌ನಲ್ಲಿ ಸರಿಯಾದ ಜೊತೆಯಾಟ ಬರದಿರುವುದೇ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹಾರ್ದಿಕ್ ಹೇಳಿದ್ದಾರೆ.
icon

(3 / 8)

ಕೆಕೆಆರ್​ ವಿರುದ್ಧ ಪಂದ್ಯದ ಸೋಲಿಗೆ ಕಾರಣ ಏನೆಂಬುದನ್ನು ನಾಯಕ ಹಾರ್ದಿಕ್​ ಪಾಂಡ್ಯ ವಿವರಿಸಿದ್ದಾರೆ. ರನ್​ಚೇಸ್‌ನಲ್ಲಿ ಸರಿಯಾದ ಜೊತೆಯಾಟ ಬರದಿರುವುದೇ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಹಾರ್ದಿಕ್ ಹೇಳಿದ್ದಾರೆ.(AFP)

ಬ್ಯಾಟಿಂಗ್​ ಇನ್ನಿಂಗ್ಸ್​ನಲ್ಲಿ ನಮ್ಮಿಂದ ಸರಿಯಾದ ಜೊತೆಯಾಟ ರೂಪಿಸಲು ಸಾಧ್ಯವಾಗಲಿಲ್ಲ. ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಟಿ20ಗಳಲ್ಲಿ ಜೊತೆಯಾಟ ರೂಪಿಸದಿದ್ದರೆ, ಅದು ತೀವ್ರ ಹಿನ್ನಡೆ ತಂದುಕೊಡುತ್ತದೆ ಎಂದು ಹೇಳಿದ್ದಾರೆ.
icon

(4 / 8)

ಬ್ಯಾಟಿಂಗ್​ ಇನ್ನಿಂಗ್ಸ್​ನಲ್ಲಿ ನಮ್ಮಿಂದ ಸರಿಯಾದ ಜೊತೆಯಾಟ ರೂಪಿಸಲು ಸಾಧ್ಯವಾಗಲಿಲ್ಲ. ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಟಿ20ಗಳಲ್ಲಿ ಜೊತೆಯಾಟ ರೂಪಿಸದಿದ್ದರೆ, ಅದು ತೀವ್ರ ಹಿನ್ನಡೆ ತಂದುಕೊಡುತ್ತದೆ ಎಂದು ಹೇಳಿದ್ದಾರೆ.(AFP)

ನನ್ನಲ್ಲಿ ಬಹಳಷ್ಟು ಪ್ರಶ್ನೆಗಳಿವೆ, ಅವುಗಳಿಗೆ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಸದ್ಯಕ್ಕೆ ಬೇರೇನು ಹೇಳಲು ಸಾಧ್ಯವಿಲ್ಲ ಎಂದು ಸೋಲು ಮತ್ತು ಪ್ಲೇಆಫ್​​ನಿಂದ ಬಹುತೇಕ ಹೊರಬಿದ್ದಿದ್ದಕ್ಕೆ ಹಾರ್ದಿಕ್ ಪಾಂಡ್ಯ, ಬೇಸರ ವ್ಯಕ್ತಪಡಿಸಿದ್ದಾರೆ.
icon

(5 / 8)

ನನ್ನಲ್ಲಿ ಬಹಳಷ್ಟು ಪ್ರಶ್ನೆಗಳಿವೆ, ಅವುಗಳಿಗೆ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಸದ್ಯಕ್ಕೆ ಬೇರೇನು ಹೇಳಲು ಸಾಧ್ಯವಿಲ್ಲ ಎಂದು ಸೋಲು ಮತ್ತು ಪ್ಲೇಆಫ್​​ನಿಂದ ಬಹುತೇಕ ಹೊರಬಿದ್ದಿದ್ದಕ್ಕೆ ಹಾರ್ದಿಕ್ ಪಾಂಡ್ಯ, ಬೇಸರ ವ್ಯಕ್ತಪಡಿಸಿದ್ದಾರೆ.(AFP)

ಸೋಲಿಗೆ ಬ್ಯಾಟಿಂಗ್​ ವಿಭಾಗವನ್ನು ದೂರಿದ ಹಾರ್ದಿಕ್ ಪಾಂಡ್ಯ, ಬೌಲರ್​​ಗಳ ಸೇವೆಯನ್ನು ಶ್ಲಾಘಿಸಿದ್ದಾರೆ. ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್​ ನಂತರ ವಿಕೆಟ್ ಉತ್ತಮವಾಗಿತ್ತು. ಆದರೆ ಹೋರಾಟದ ಮನೋಭಾವ ತೋರಬೇಕು ಎಂದು ಹೇಳಿದ್ದಾರೆ.
icon

(6 / 8)

ಸೋಲಿಗೆ ಬ್ಯಾಟಿಂಗ್​ ವಿಭಾಗವನ್ನು ದೂರಿದ ಹಾರ್ದಿಕ್ ಪಾಂಡ್ಯ, ಬೌಲರ್​​ಗಳ ಸೇವೆಯನ್ನು ಶ್ಲಾಘಿಸಿದ್ದಾರೆ. ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್​ ನಂತರ ವಿಕೆಟ್ ಉತ್ತಮವಾಗಿತ್ತು. ಆದರೆ ಹೋರಾಟದ ಮನೋಭಾವ ತೋರಬೇಕು ಎಂದು ಹೇಳಿದ್ದಾರೆ.(PTI)

ನಾನು ಹಿಂದಿನಿಂದಲೂ ಹೇಳುತ್ತಿದ್ದೇನೆ. ಯುದ್ಧ  ಭೂಮಿಯಲ್ಲಿ ಹೋರಾಡಬೇಕು. ಕಠಿಣ ದಿನಗಳಂತೆ ಒಳ್ಳೆಯ ದಿನಗಳು ಕೂಡ ಬರುತ್ತವೆ. ಆದರೆ ಎದುರಾಗುವ ಸವಾಲುಗಳು ನಿಮ್ಮನ್ನು ಉತ್ತಮಗೊಳಿಸುತ್ತವೆ ಎಂದು ಅವರು ಹೇಳಿದ್ದಾರೆ.
icon

(7 / 8)

ನಾನು ಹಿಂದಿನಿಂದಲೂ ಹೇಳುತ್ತಿದ್ದೇನೆ. ಯುದ್ಧ  ಭೂಮಿಯಲ್ಲಿ ಹೋರಾಡಬೇಕು. ಕಠಿಣ ದಿನಗಳಂತೆ ಒಳ್ಳೆಯ ದಿನಗಳು ಕೂಡ ಬರುತ್ತವೆ. ಆದರೆ ಎದುರಾಗುವ ಸವಾಲುಗಳು ನಿಮ್ಮನ್ನು ಉತ್ತಮಗೊಳಿಸುತ್ತವೆ ಎಂದು ಅವರು ಹೇಳಿದ್ದಾರೆ.(PTI)

ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 8ರಲ್ಲಿ ಸೋಲು ಕಂಡಿದೆ. 3 ರಲ್ಲಿ ಮಾತ್ರ ಗೆದ್ದಿದ್ದು, ಪ್ಲೇಆಫ್​ನಿಂದ ಬಹುತೇಕ ಹೊರಬಿದ್ದಿದೆ.
icon

(8 / 8)

ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 8ರಲ್ಲಿ ಸೋಲು ಕಂಡಿದೆ. 3 ರಲ್ಲಿ ಮಾತ್ರ ಗೆದ್ದಿದ್ದು, ಪ್ಲೇಆಫ್​ನಿಂದ ಬಹುತೇಕ ಹೊರಬಿದ್ದಿದೆ.


IPL_Entry_Point

ಇತರ ಗ್ಯಾಲರಿಗಳು