ತುಳುನಾಡು- ಥೈಲ್ಯಾಂಡ್ ಲವ್ ಸ್ಟೋರಿ; ಮಂಗಳೂರು ಯುವಕ ಪೃಥ್ವಿರಾಜ್ ಕೈ ಹಿಡಿದ ಮೊಂತಕಾನ್ ಸಸೂಕ್, ಅಪೂರ್ವ ವಿವಾಹದ ಚಿತ್ರನೋಟ
ತುಳುನಾಡು- ಥೈಲ್ಯಾಂಡ್ ಲವ್ ಸ್ಟೋರಿ ಇದು. ಹೌದು ತುಳುನಾಡಿನ ಯುವಕ ಪೃಥ್ವಿರಾಜ್ ಅಮೀನ್ ಮತ್ತು ಥೈಲ್ಯಾಂಡ್ ಯುವತಿ ಮೊಂತಕಾನ್ ಸಸೂಕ್ ಅವರು ನಿನ್ನೆ (ಡಿಸೆಂಬರ್ 5) ಮಂಗಳೂರಿನ ಮಂಗಳಾದೇವಿ ಸನ್ನಿಧಿಯಲ್ಲಿ ಭಾರತೀಯ ಪದ್ಧತಿ ಪ್ರಕಾರ ವಿವಾಹವಾದರು. ಈ ವಿವಾಹದ ಚಿತ್ರ ನೋಟ ಇಲ್ಲಿದೆ.
(1 / 9)
ಮದುವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಆಡುನುಡಿ. ಪ್ರೀತಿ, ಪ್ರೇಮಕ್ಕೆ ನಾಡು, ನುಡಿ ಸೇರಿ ಯಾವುದೇ ಎಲ್ಲೆಯ ಹಂಗಿಲ್ಲ ಎಂಬ ಮಾತೂ ಇದೆ. ಇವೆರಡೂ ನಿಜ ಎನ್ನುವಂತೆ ಕೆಲಸದ ನಿಮಿತ್ತ ಥೈಲ್ಯಾಂಡ್ ಪ್ರವಾಸಕ್ಕೆ ಹೋದವನಿಗೆ ಅಲ್ಲಿನ ಯುವತಿ ಜತೆಗೆ ಪ್ರೇಮಾಂಕುರವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸದ್ಯದ ಸುದ್ದಿ. ಅಂತಹದೊಂದು ಅಪೂರ್ವ ವಿವಾಹದ ಸಚಿತ್ರ ವರದಿ ಇಲ್ಲಿದೆ.
(2 / 9)
ಮಂಗಳೂರಿನ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಎಂಬ ಮಂಗಳೂರಿನ ಮಂಗಳಾದೇವಿ ಸನ್ನಿಧಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇದಕ್ಕೂ ಮೊದಲೇ ಈ ಜೋಡಿ ಥೈಲ್ಯಾಂಡ್ ಸಂಪ್ರದಾಯ ಪ್ರಕಾರ ಜುಲೈನಲ್ಲೇ ವಿವಾಹವಾಗಿತ್ತು.
(3 / 9)
ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಸೇವೆ ಒದಗಿಸುತ್ತದೆ. ಥೈಲ್ಯಾಂಡ್ ಹೋಗಿದ್ದ ವೇಳೆ ಪೃಥ್ವಿರಾಜ್‌ಗೆ ಪ್ರೇಮಿಗಳ ದಿನವೇ ಮೊಂತಕನ್ ಸಸೂಕ್ ಪರಿಚಯವಾಗಿದ್ದು, ಪ್ರೇಮ ನಿವೇದನೆ ಮಾಡಿಕೊಂಡಿದ್ದರು.
(4 / 9)
ಮೊದಲ ನೋಟದ ಪ್ರೇಮದ ವಿವರಣೆ ನೀಡಿದ ಪೃಥ್ವಿರಾಜ್, ಮೊಂತಕನ್ ಕೂಡಾ ಇವರ ಪ್ರೀತಿಯನ್ನು ಒಪ್ಪಿದ್ದಾಗಿ ಹೇಳುತ್ತಾರೆ. ಪರಸ್ಪರ ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೂ ಬಂದಿರುವುದಾಗಿ ವಿವರಿಸಿದ್ದಾರೆ.
(5 / 9)
ಥೈಲ್ಯಾಂಡ್ ಯುವತಿಯನ್ನು ವಿವಾಹವಾಗುವುದಾಗಿ ಹೇಳಿದಾಗ ಪಾಲಕರು ಆಘಾತಕ್ಕೆ ಒಳಗಾಗಿದ್ದರು. ಬಳಿಕ ಸಮ್ಮತಿ ನೀಡಿದರು ಎಂದು ಪೃಥ್ವಿರಾಜ್ ಹೇಳಿದ್ದಾರೆ. ಅವರ ತಾಯಿ ಸುಜಯಾ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವೇ ಹುಡುಕಿದ್ದರೂ ಇಷ್ಟು ಉತ್ತಮ ಗುಣನಡತೆಯ ಸೊಸೆಯನ್ನು ಭಾರತದಲ್ಲಿ ಕಂಡುಕೊಳ್ಳುವುದು ಕಷ್ಟ ಇತ್ತು ಎಂದು ಹೇಳಿಕೊಂಡಿದ್ದಾರೆ.
(6 / 9)
ಥೈಲ್ಯಾಂಡ್ ಭಾಷೆ ಸ್ವಲ್ಪ ಸ್ವಲ್ಪ ಕಲಿಯತೊಡಗಿದ್ದೇನೆ. ಕೆಲವು ಪದಗಳು ಬರುತ್ತವೆ. ಮೊಂತಕಾನ್ ಕೂಡ ತುಳು ಭಾಷೆಯ ಕೆಲವು ಪದಗಳನ್ನು ಕಲಿತಿದ್ದು, ಆಕೆಯೂ ಮುಂದೆ ಭಾಷೆ ಕಲಿಯಲಿದ್ದಾರೆ ಎಂದು ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.
(7 / 9)
ಮೊಂತಕಾನ್ ಮನೆಯಲ್ಲೂ ವಿವಾಹಕ್ಕೆ ಸಮ್ಮತಿ ದೊರಕಿದ್ದು, ಇಬ್ಬರಿಗೂ ಥೈಲ್ಯಾಂಡ್‌ನಲ್ಲಿ ಅಲ್ಲಿನ ಪದ್ಧತಿಯಂತೆ ಜುಲೈನಲ್ಲಿ ವಿವಾಹ ನೆರವೇರಿದೆ. ಈ ವಿವಾಹಕ್ಕೆ ಪೃಥ್ವಿರಾಜ್ ಹೆತ್ತವರೂ ಸಾಕ್ಷಿಯಾಗಿದ್ದರು. ಸೊಸೆಯ ಜೊತೆಗೆ ಸತೀಶ್ ಅವರು ಇರುವಂತಹ ಚಿತ್ರ ಇಲ್ಲಿದೆ.
(8 / 9)
ಇದೀಗ ಭಾರತೀಯ ಪದ್ಧತಿ ಪ್ರಕಾರ ಗುರುವಾರ ಶ್ರೀಮಂಗಳಾದೇವಿ ದೇವಸ್ಥಾನದಲಿ ಗುರು-ಹಿರಿಯರ ಡಿ.7ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿ ರಿಸೆಪ್ಪನ್ ನಡೆಯಲಿದೆ. ಇನ್ನು ಮುಂದೆ ಮೊಂತಕಾನ್ ಸಸೂಕ್ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಲಿದ್ದಾರೆ
ಇತರ ಗ್ಯಾಲರಿಗಳು