Photos: ದುಬೈನ ಈ ಸ್ಥಳದಲ್ಲಿ ಮುಖೇಶ್ ಅಂಬಾನಿಯ ಐಷಾರಾಮಿ ಮನೆ, ಇದರ ಬೆಲೆ ಇಷ್ಟು ಕೋಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Photos: ದುಬೈನ ಈ ಸ್ಥಳದಲ್ಲಿ ಮುಖೇಶ್ ಅಂಬಾನಿಯ ಐಷಾರಾಮಿ ಮನೆ, ಇದರ ಬೆಲೆ ಇಷ್ಟು ಕೋಟಿ

Photos: ದುಬೈನ ಈ ಸ್ಥಳದಲ್ಲಿ ಮುಖೇಶ್ ಅಂಬಾನಿಯ ಐಷಾರಾಮಿ ಮನೆ, ಇದರ ಬೆಲೆ ಇಷ್ಟು ಕೋಟಿ

ದುಬೈನ ಪಾಮ್ ಜುಮೇರಾ ಯಾರಿಗೆ ಗೊತ್ತಿಲ್ಲ ಹೇಳಿ. ಈ ಮಾನವ ನಿರ್ಮಿತ ದ್ವೀಪ, ವಾಸಿಸಲು ಅತ್ಯಂತ ದುಬಾರಿ ಸ್ಥಳ. ಇಲ್ಲೊಂದು ದಿನ ಕಳೆಯುವುದು ಅಂದರೆ, ಅದು ಶ್ರೀಮಂತರಿಂದ ಮಾತ್ರ ಸಾಧ್ಯ ಎಂಬ ಮಾತಿದೆ. ಅದರ ನಡುವೆ ಅಲ್ಲೇ ಒಂದು ಮನೆ ಕಟ್ಟಿದರೆ ಇದ್ದರೆ ಹೇಗಿರುತ್ತೆ? ಈ ದ್ವೀಪದಲ್ಲಿ ಸೂಪರ್ ಐಷಾರಾಮಿ ಮನೆಯ ಅತ್ಯಂತ ದುಬಾರಿ ಆಸ್ತಿ ವ್ಯವಹಾರವು ದುಬೈನಲ್ಲಿ ಸಂಚಲನವನ್ನು ಸೃಷ್ಟಿಸುತ್ತಲೇ ಇತ್ತು. ವರದಿಗಳ ಪ್ರಕಾರ, ಸದ್ಯ ಸುಮಾರು 639 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವನ್ನು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಪುತ್ರ ಅನಂತ್ ಅಂಬಾನಿಗಾಗಿ ಇದನ್ನು ಖರೀದಿಸಿದ್ದಾರೆ ಎನ್ನಲಾಗಿದೆ. 33,000 ಚದರ ಅಡಿಯಲ್ಲಿರುವ ಈ ಐಷಾರಾಮಿ ಬೀಚ್ ನಿವಾಸದ ಬಗ್ಗೆ ತಿಳಿದುಕೊಳ್ಳಿ.

ದುಬೈನ ಅತ್ಯಂತ ದುಬಾರಿ ಖರೀದಿ ಒಪ್ಪಂದದ ಪ್ರಮುಖ ವ್ಯಕ್ತಿ ಮುಖೇಶ್ ಅಂಬಾನಿ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸುಮಾರು 80 ಮಿಲಿಯನ್ ಡಾಲರ್‌ ಮೌಲ್ಯದ ಬೀಚ್‌ ಬದಿಯ ಮನೆಯು, ದುಬೈನಲ್ಲಿ ಕೃತಕವಾಗಿ ನಿರ್ಮಿಸಿದ ದ್ವೀಪವಾದ ಪಾಮ್ ಜುಮೇರಾದಲ್ಲಿದೆ. ಇದನ್ನು ಅಂಬಾನಿ ಕುಟುಂಬ ಖರೀದಿಸಿದೆ ಎಂದು ವರದಿಯಾಗಿದೆ.
icon

(1 / 8)

ದುಬೈನ ಅತ್ಯಂತ ದುಬಾರಿ ಖರೀದಿ ಒಪ್ಪಂದದ ಪ್ರಮುಖ ವ್ಯಕ್ತಿ ಮುಖೇಶ್ ಅಂಬಾನಿ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸುಮಾರು 80 ಮಿಲಿಯನ್ ಡಾಲರ್‌ ಮೌಲ್ಯದ ಬೀಚ್‌ ಬದಿಯ ಮನೆಯು, ದುಬೈನಲ್ಲಿ ಕೃತಕವಾಗಿ ನಿರ್ಮಿಸಿದ ದ್ವೀಪವಾದ ಪಾಮ್ ಜುಮೇರಾದಲ್ಲಿದೆ. ಇದನ್ನು ಅಂಬಾನಿ ಕುಟುಂಬ ಖರೀದಿಸಿದೆ ಎಂದು ವರದಿಯಾಗಿದೆ.(https://www.belleview.ae/)

ಉತ್ತರ ಪಾಮ್ ಜುಮೇರಾದಲ್ಲಿರುವ ಈ  ಮನೆಯು ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಅರಮನೆಯಂತಹಾ ಮನೆಯಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ ಮತ್ತು ಎರಡು ಈಜುಕೊಳಗಳಿವೆ.
icon

(2 / 8)

ಉತ್ತರ ಪಾಮ್ ಜುಮೇರಾದಲ್ಲಿರುವ ಈ  ಮನೆಯು ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಅರಮನೆಯಂತಹಾ ಮನೆಯಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ ಮತ್ತು ಎರಡು ಈಜುಕೊಳಗಳಿವೆ.(https://www.belleview.ae/)

ಇಟಾಲಿಯನ್ ಮಾರ್ಬಲ್ ಮತ್ತು ಕೆಲವು ಸುಂದರವಾಗಿ ಕಲಾಕೃತಿಗಳೊಂದಿಗೆ ಮನೆಯನ್ನು ಅಲಂಕರಿಸಲಾಗಿದೆ. ಈ ಆಸ್ತಿಯನ್ನು 2022 ರ ಆರಂಭಿಕ ತಿಂಗಳುಗಳಲ್ಲಿ ಮಾರಾಟ ಮಾಡಲಾಗಿದೆ. ಈ ವ್ಯವಹಾರವು ಖಾಸಗಿಯಾಗಿರುವುದರಿಂದ, ಕುಟುಂಬವು ಒಪ್ಪಂದದ ಬಗ್ಗೆ ಅಧಿಕೃತ ದೃಢೀಕರಣವನ್ನು ನೀಡಿಲ್ಲ.
icon

(3 / 8)

ಇಟಾಲಿಯನ್ ಮಾರ್ಬಲ್ ಮತ್ತು ಕೆಲವು ಸುಂದರವಾಗಿ ಕಲಾಕೃತಿಗಳೊಂದಿಗೆ ಮನೆಯನ್ನು ಅಲಂಕರಿಸಲಾಗಿದೆ. ಈ ಆಸ್ತಿಯನ್ನು 2022 ರ ಆರಂಭಿಕ ತಿಂಗಳುಗಳಲ್ಲಿ ಮಾರಾಟ ಮಾಡಲಾಗಿದೆ. ಈ ವ್ಯವಹಾರವು ಖಾಸಗಿಯಾಗಿರುವುದರಿಂದ, ಕುಟುಂಬವು ಒಪ್ಪಂದದ ಬಗ್ಗೆ ಅಧಿಕೃತ ದೃಢೀಕರಣವನ್ನು ನೀಡಿಲ್ಲ.(https://www.belleview.ae/)

ಈ ಮಹಲು ಪಾಮ್ ಜುಮೇರಾದಲ್ಲಿದೆ. ತಾಳೆ ಮರದ ಆಕಾರದಲ್ಲಿರುವ ಕೃತಕ ದ್ವೀಪಸಮೂಹವೇ ಪಾಮ್ ಜುಮೇರಾ. ಇದು ದುಬಾರಿ ಹೋಟೆಲ್‌ಗಳು ಮತ್ತು ಐಷಾರಾಮಿ ಅಪಾರ್ಟ್ಮೆಂಟ್ಗಳಿಗೆ ಹೆಸರುವಾಸಿಯಾಗಿದೆ.
icon

(4 / 8)

ಈ ಮಹಲು ಪಾಮ್ ಜುಮೇರಾದಲ್ಲಿದೆ. ತಾಳೆ ಮರದ ಆಕಾರದಲ್ಲಿರುವ ಕೃತಕ ದ್ವೀಪಸಮೂಹವೇ ಪಾಮ್ ಜುಮೇರಾ. ಇದು ದುಬಾರಿ ಹೋಟೆಲ್‌ಗಳು ಮತ್ತು ಐಷಾರಾಮಿ ಅಪಾರ್ಟ್ಮೆಂಟ್ಗಳಿಗೆ ಹೆಸರುವಾಸಿಯಾಗಿದೆ.(https://www.vibesofindia.com/)

33,000 ಚದರ ಅಡಿಯ ಎರಡು ಅಂತಸ್ತಿನ ಮಹಲು, ಸ್ಪಾ ಸೌಲಭ್ಯಗಳನ್ನು ಹೊಂದಿದೆ. ಸೆಲೂನ್, 70 ಮೀಟರ್ ಖಾಸಗಿ ಬೀಚ್ ಮತ್ತು ಲೆಕ್ಕವಿಲ್ಲದಷ್ಟು ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
icon

(5 / 8)

33,000 ಚದರ ಅಡಿಯ ಎರಡು ಅಂತಸ್ತಿನ ಮಹಲು, ಸ್ಪಾ ಸೌಲಭ್ಯಗಳನ್ನು ಹೊಂದಿದೆ. ಸೆಲೂನ್, 70 ಮೀಟರ್ ಖಾಸಗಿ ಬೀಚ್ ಮತ್ತು ಲೆಕ್ಕವಿಲ್ಲದಷ್ಟು ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.(https://www.belleview.ae/)

ಸೂಪರ್ ಐಷಾರಾಮಿ ವಿಲ್ಲಾವು ಕೇವಲ ಹೊರಾಂಗಣ ಈಜುಕೊಳವನ್ನು ಹೊಂದಿರದೆ, ಒಳಗೆ ಕೂಡಾ ಅಷ್ಟೇ ದೊಡ್ಡ ಸ್ವಿಮ್ಮಿಂಗ್‌ ಪೂಲ್ ಹೊಂದಿದೆ.
icon

(6 / 8)

ಸೂಪರ್ ಐಷಾರಾಮಿ ವಿಲ್ಲಾವು ಕೇವಲ ಹೊರಾಂಗಣ ಈಜುಕೊಳವನ್ನು ಹೊಂದಿರದೆ, ಒಳಗೆ ಕೂಡಾ ಅಷ್ಟೇ ದೊಡ್ಡ ಸ್ವಿಮ್ಮಿಂಗ್‌ ಪೂಲ್ ಹೊಂದಿದೆ.(https://www.belleview.ae/)

ಮೂಲಗಳ ಪ್ರಕಾರ, ಈ ಆಸ್ತಿಯನ್ನು ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ಖರೀದಿಸಲಾಗಿದೆ. ಕುಟುಂಬವು ತನ್ನ ರಿಯಲ್ ಎಸ್ಟೇಟ್ ಅಸ್ತಿತ್ವವನ್ನು ಸಾಗರೋತ್ತರದಲ್ಲಿ ವಿಸ್ತರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ
icon

(7 / 8)

ಮೂಲಗಳ ಪ್ರಕಾರ, ಈ ಆಸ್ತಿಯನ್ನು ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ಖರೀದಿಸಲಾಗಿದೆ. ಕುಟುಂಬವು ತನ್ನ ರಿಯಲ್ ಎಸ್ಟೇಟ್ ಅಸ್ತಿತ್ವವನ್ನು ಸಾಗರೋತ್ತರದಲ್ಲಿ ವಿಸ್ತರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ(https://www.belleview.ae/)

ಅತಿ ಶ್ರೀಮಂತ ಖರೀದಿದಾರರಿಗೆ, ದುಬೈ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರನ್ನು ಈ ಅರಬ್‌ ರಾಷ್ಟ್ರದ ನಗರ ಆಕರ್ಷಿಸುತ್ತಿದೆ.
icon

(8 / 8)

ಅತಿ ಶ್ರೀಮಂತ ಖರೀದಿದಾರರಿಗೆ, ದುಬೈ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರನ್ನು ಈ ಅರಬ್‌ ರಾಷ್ಟ್ರದ ನಗರ ಆಕರ್ಷಿಸುತ್ತಿದೆ.(https://www.vibesofindia.com/)


ಇತರ ಗ್ಯಾಲರಿಗಳು