Apple Store launch: ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನೆಯಲ್ಲಿ ಟಿಮ್ ಕುಕ್ ಜೊತೆ ಬಾಲಿವುಡ್ ಸೆಲೆಬ್ರಿಟಿಗಳ ಸೆಲ್ಫಿ
ಮುಂಬೈನಲ್ಲಿ ಇವತ್ತು (ಏ.18, ಮಂಗಳವಾರ) ಆ್ಯಪಲ್ ರಿಟೇಲ್ ಸ್ಟೋರ್ (Apple Store launch) ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಇಒ ಟಿಮ್ ಕುಕ್ ಜೊತೆ ಬಾಲಿವುಡ್ ಸ್ಟಾರ್ ಗಳು ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದಾರೆ.
(1 / 11)
ಆಸ್ಕರ್ ಪ್ರಶಸ್ತಿ ಪಡೆದಿದ್ದ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಕೂಡ ಆಪಲ್ ಸ್ಟೋರ್ ಲಾಂಚ್ನಲ್ಲಿ ಭಾಗವಹಿಸಿ ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
(2 / 11)
ಟಿಮ್ ಕುಕ್ ಅವರೊಂದಿಗೆ ಇರುವ ಫೋಟೋವನ್ನು ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಹಂಚಿಕೊಂಡಿದ್ದಾರೆ. ಕುಕ್ ಅವರೊಂದಿಗೆ ರೆಹಮಾನ್ ಅವರು ಏನು ಮಾತನಾಡುತ್ತಿರಬಹುದು ಎಂದು ಅವರ ಫ್ಯಾನ್ಸ್ ಯೋಚಿಸುತ್ತಿದ್ದಾರೆ.
(4 / 11)
ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ನಟಿ ರವೀನಾ ಟಂಡನ್ ಕೂಡ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಆ್ಯಪಲ್ ಸ್ಟೋರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಪುತ್ರ ಮಗ ರಣಬೀರ್ ಥಡಾನಿ ಜೊತೆಯಲ್ಲಿ ಬಂದಿದ್ದ ಟಂಡನ್ ಕುಕ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.
(5 / 11)
ಗಾಯಕ ಅರ್ಮಾನ್ ಮಲಿಕ್ ಕೂಡ ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಮ್ ಕುಕ್ ಜೊತೆ ತೆಗೆಸಿಕೊಂಡಿರುವ ಸೆಲ್ಫಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
(6 / 11)
ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನೆಗೂ ಮುನ್ನ ಟಿಮ್ ಕುಕ್ ಅವರೊಂದಿಗೆ ನಟಿ ನಟಿ ಮಾಧುರಿ ದೀಕ್ಷಿತ್ ವಡಾ ಪಾವ್ ಸೇವಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
(7 / 11)
ರವೀನಾ ಟಂಡನ್ ಇನ್ಸ್ಟಾಗ್ರಾಮ್ ಈ ಕಾರ್ಯಕ್ರಮದ ಹಲವು ಸೆಲ್ಪಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋನಾಲಿ ಬೇಂದ್ರೆ, ವಿದ್ಯಾ ಬಾಲನ್ ಹಾಗೂ ಸೋನಾಕ್ಷಿ ಸಿನ್ಹಾ ಅವರೊಂದಿಗೂ ಫೋಸ್ ನೀಡಿದ್ದಾರೆ.
(8 / 11)
ಆ್ಯಪಲ್ ಸ್ಟೋರ್ ಲಾಂಚ್ ವೇಳೆ ನಟಿ ಮಾಧುರಿ ದೀಕ್ಷಿತ್ ಅವರೊಂದಿಗೆ ಮೌನಿ ರಾಯ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ನೀಲಿ ಬಣ್ಣದ ಡ್ರಸ್ ನಲ್ಲಿ ಕಾಣಿಸಿಕೊಂಡರೆ ಮೌನಿ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದಾರೆ.
(9 / 11)
ನೀಲಿ ಬಣ್ಣದ ಟಾಪ್ ಮತ್ತು ಸ್ಟೈಲಿಶ್ ಪ್ಯಾಂಟ್ ಧರಿಸಿದ್ದ ರಾಕುಲ್ ಪ್ರೀತ್ ಸಿಂಗ್ ಕೂಡ ಆಪಲ್ ಸ್ಟೋರ್ ಉದ್ಘಾಟನೆ ವೇಳೆ ಟಿಮ್ ಕುಕ್ ಅವರೊಂದಿಗೆ ತೆಗೆದುಕೊಂಡ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ.
ಇತರ ಗ್ಯಾಲರಿಗಳು