ಮಹಾ ಕುಂಭ ಮೇಳದಲ್ಲಿ ವೈರಲ್ ಆದ ಅರಳು ಕಂಗಳ ಚೆಲುವೆ, ಸಾಮಾಜಿಕ ಜಾಲತಾಣದಲ್ಲಿ ಮೊನಾಲಿಸಾಗೆ ಹೋಲಿಸುತ್ತಿರುವ ಈ ಸುಂದರಿ ಯಾರು?
- ಈ ವರ್ಷದ ಮಹಾ ಕುಂಭ ಮೇಳದಲ್ಲಿ ಹಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಐಐಟಿ ಬಾಬಾ, ಸಾಧ್ವಿ ಹರ್ಷ ರಿಚಾರಿಯಾ ಸೇರಿದಂತೆ ಈಗಾಗಲೇ ಹಲವರು ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದ್ದಾರೆ. ಇದೀಗ ಅರಳು ಕಂಗಳ ಚೆಲುವೆ ಒಬ್ಬಳ ಫೋಟೊ ವೈರಲ್ ಆಗುತ್ತಿವೆ. ಆಕೆಯ ಸೌಂದರ್ಯವನ್ನು ಮೊನಾಲಿಸಾ ಜೊತೆ ಹೋಲಿಕೆ ಮಾಡಲಾಗುತ್ತಿದೆ.
- ಈ ವರ್ಷದ ಮಹಾ ಕುಂಭ ಮೇಳದಲ್ಲಿ ಹಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಐಐಟಿ ಬಾಬಾ, ಸಾಧ್ವಿ ಹರ್ಷ ರಿಚಾರಿಯಾ ಸೇರಿದಂತೆ ಈಗಾಗಲೇ ಹಲವರು ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದ್ದಾರೆ. ಇದೀಗ ಅರಳು ಕಂಗಳ ಚೆಲುವೆ ಒಬ್ಬಳ ಫೋಟೊ ವೈರಲ್ ಆಗುತ್ತಿವೆ. ಆಕೆಯ ಸೌಂದರ್ಯವನ್ನು ಮೊನಾಲಿಸಾ ಜೊತೆ ಹೋಲಿಕೆ ಮಾಡಲಾಗುತ್ತಿದೆ.
(1 / 6)
ಮಹಾ ಕುಂಭ ಮೇಳದಲ್ಲಿ ವೈರಲ್ ಆದ ಈ ಸುಂದರಿ ಸಾಧ್ವಿ ಖಂಡಿತ ಅಲ್ಲ. ಆಕೆ ಹೂ, ಸರಗಳನ್ನು ಮಾರಾಟ ಮಾಡುವವಳು. ಸ್ನಿಗ್ಧ ಸೌಂದರ್ಯದ ಅವಳ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ಜನ ಆಕೆಯನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ.
(2 / 6)
ಈ ಸುಂದರಿ ಮಧ್ಯಪ್ರದೇಶದ ಇಂದೋರ್ ನಿವಾಸಿ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿರುವ ಆಕೆಯನ್ನು ಗುರುತಿಸಿ ಮಾತನಾಡಲು ನೋಡಿದಾಗ ಆಕೆ ತಾನು ಹೂ ಮಾರುವವಳು ಎಂದಷ್ಟೇ ಹೇಳುತ್ತಾಳೆ. ತನ್ನ ಹೆಸರನ್ನು ಕೂಡ ಬಹಿರಂಗ ಪಡಿಸುವುದಿಲ್ಲ.
(3 / 6)
ಹೂವಿನ ಹಾರ ಮಾರುವ ಈ ಹುಡುಗಿಯನ್ನು ಮೊನಾಲಿಸಾಗೆ ಹೋಲಿಸಲಾಗುತ್ತಿದೆ. ಮಹಾ ಕುಂಭ ಮೇಳಕ್ಕೆ ಹೋದ ಜನ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಾತರರಾಗಿದ್ದಾರೆ. ಆಕೆ ‘ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.
(4 / 6)
ವೈರಲ್ ಆದ ಹರ್ಷ ರಿಚಾರಿಯಾ
ಈ ಹೂವು ಮಾರುವ ಹುಡುಗಿಗಿಂತ ಮೊದಲು, ಹರ್ಷ ರಿಚಾರಿಯಾ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಅವಳನ್ನು 'ಸುಂದರ' ಸಾಧ್ವಿ ಎಂದು ಕರೆಯಲಾಗುತ್ತಿತ್ತು. ಆದಾಗ್ಯೂ, ನಂತರದ ಸಂದರ್ಶನವೊಂದರಲ್ಲಿ ಅವರು ಸ್ವತಃ ತಾನು ಸಾಧ್ವಿ ಅಲ್ಲ ಅಥವಾ ಸನ್ಯಾಸ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಉತ್ತರಾಖಂಡದವರಾಗಿದ್ದು, ಸುಮಾರು 2 ವರ್ಷಗಳಿಂದ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
(5 / 6)
'ಈ ಹೊಸ ಗುರುತನ್ನು ಸಾಧಿಸಲು ನಾನು ಎಲ್ಲವನ್ನೂ ತೊರೆದಿದ್ದೇನೆ' ಎಂದು ಹರ್ಷ ರಿಚಾರಿಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವಳು ತನ್ನನ್ನು ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆ ಎಂದು ಕರೆದುಕೊಳ್ಳುತ್ತಾಳೆ. ಆದಾಗ್ಯೂ, ಅವರು ಸಾಮಾಜಿಕ ಮಾಧ್ಯಮ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ.
(Instagram/shivam_bikaneri_official)ಇತರ ಗ್ಯಾಲರಿಗಳು