ಮಹಾ ಕುಂಭಮೇಳಕ್ಕೆ 2 ದಿನಗಳು ಬಾಕಿ, ತಂಡೋಪತಂಡವಾಗಿ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿರುವ ನಾಗಾ ಸಾಧುಗಳು; ಫೋಟೋಗಳು
Maha Kumbh Mela 2025: ಜನವರಿ 13 ರಿಂದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮೊದಲ ಶಾಹಿ ಸ್ನಾನವು ಜನವರಿ 13 ರಂದು ನಡೆಯಲಿದೆ. ಕುಂಭ ಮೇಳ ನಡೆಯುವ ಪ್ರದೇಶವನ್ನು ಸಂಪೂರ್ಣ ಅಲಂಕರಿಸಲಾಗಿದೆ. ಲಕ್ಷಾಂತರ ಸಾಧುಗಳು ಮಹಾಕುಂಭಕ್ಕೆ ಆಗಮಿಸುತ್ತಿದ್ದಾರೆ.
(1 / 10)
ಮಹಾಕುಂಭಕ್ಕೆ 2 ದಿನಗಳು ಬಾಕಿ ಉಳಿದಿರುವಂತೆ ನಾಗಾಸಾಧುಗಳು ಪ್ರಯಾಗ್‌ರಾಜ್‌ಗೆ ಬಂದು ಸೇರುತ್ತಿದ್ದಾರೆ. ಕಾಳಿ ವೇಷ ಧರಿಸಿ ಬಂದ ನಾಗಾಸಾಧು ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
(2 / 10)
ಮತ್ತೊಬ್ಬರು ಸಾಧು ಕಾಲಿಗೆ ಬೂಟುಗಳನ್ನು ಧರಿಸಿ, ರಸ್ತೆಯಲ್ಲಿ ಕತ್ತಿ ವರಸೆ ಮಾಡುತ್ತಿದ್ದದ್ದು ಕೂಡಾ ಎಲ್ಲರ ಗಮನ ಸೆಳೆಯಿತು. ಈ ಬಾರಿಯ ಕುಂಭಮೇಳ ಸುಮಾರು 44 ದಿನಗಳ ಕಾಲ ನಡೆಯಲಿದೆ.
(3 / 10)
ಕೆಲವರು ಕುದುರೆ ಮೇಲೆ ಕುಳಿತು ಗದೆ ಹಾಗೂ ಕತ್ತಿಯನ್ನು ಹಿಡಿದಿರುವುದು ಗಮನ ಸೆಳೆಯಿತು. ಕುಂಭಮೇಳವನ್ನು ವೀಕ್ಷಿಸಲು ನಾಗಾಸಾಧುಗಳು ಮಾತ್ರವಲ್ಲದೆ, ವಿಐಪಿಗಳು ಕೂಡಾ ಆಗಮಿಸಲಿದ್ದಾರೆ.
(4 / 10)
ಬಹುತೇಕ ನಾಗಾಸಾಧುಗಳು ಹುಲಿ ಚರ್ಮ ಧರಿಸಿ, ಹೂವಿನ ಹಾರಗಳನ್ನು ಹಾಕಿಕೊಂಡ ಮೈಗೆಲ್ಲಾ ವಿಭೂತಿ ಬಳಿದುಕೊಂಡು ಡಮರುಗ ಬಾರಿಸುತ್ತಾ, ಮಹಾಕುಂಭ ನಡೆಯುವ ಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
(5 / 10)
ಬಿಹಾರ್, ಜಾರ್ಖಂಡ್, ಉತ್ತರಾಖಂಡ್ ಸೇರಿದಂತೆ ವಿವಿಧ ಕಡೆಗಳಿಂದ ಮಹಿಳಾ ಕಲ್ಪವಾಸಿಗಳು ಕೂಡಾ ಕುದುರೆ ಮೇಲೆ ಮಹಾಕುಂಭಕ್ಕೆ ಆಗಮಿಸುತ್ತಿರುವುದು ಕಂಡುಬಂತು.
(6 / 10)
ಹಿರಿಯ ನಾಗಾಸಾಧುವೊಬ್ಬರು ಕುದುರೆ ಮೇಲೆಯೇ ಡೋಲು ಬಾರಿಸುತ್ತಾ, ಕಪ್ಪು ಕನ್ನಡಕ ಧರಿಸಿ ಕುದುರೆ ಏರಿ ಬಂದರು. ಮಹಾಕುಂಭಕ್ಕೆ ಆಪಲ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಪತ್ನಿ ಲ್ಯೂರೆನ್ ಪೊವೆಲ್ ಜಾಬ್ಸ್ ಕೂಡ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.
(7 / 10)
ಪುಷ್ಯ ಹುಣ್ಣಿಮೆಯಿಂದ ಮಾಘಿ ಹುಣ್ಣಿಮೆಯವರೆಗೆ ಒಂದು ತಿಂಗಳ ಕಾಲ ಕಲ್ಪವಾಸ್ ನಡೆಯುತ್ತದೆ. ಈ ಸಮಯದಲ್ಲಿ ಸಾಧು, ಸಂತರು ಬೆಳಗ್ಗೆ ಗಂಗಾನೀರಿನಲ್ಲಿ ಸ್ನಾನ ಮಾಡಿ ಪೂಜೆ, ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
(8 / 10)
ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ, ಆದರೆ 144 ವರ್ಷಗಳಿಗೆ ಒಮ್ಮೆ ಮಹಾಕುಂಭ ಮೇಳ ನಡೆಯಲಿದೆ, ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ.
(9 / 10)
ಮಹಾಕುಂಭದಲ್ಲಿ ಗಂಗಾ, ಯುಮನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.
ಇತರ ಗ್ಯಾಲರಿಗಳು