ಮಹಾ ಕುಂಭಮೇಳ 2025: ಪ್ರಯಾಗರಾಜ್‌ನಲ್ಲಿ ಧಾರ್ಮಿಕ ಮಹಾ ಸಂಗಮಕ್ಕೆ ಆಗಮಿಸಿದ ಸಾಧುಗಳ ಹಾವ ಭಾವ, ಆಕರ್ಷಕ ಚಿತ್ರನೋಟ
Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ಶುರುವಾಗಿದೆ. 44 ದಿನಗಳ ಮಹಾ ಧಾರ್ಮಿಕ ಸಂಗಮಕ್ಕೆ ನಾನಾ ಭಾಗಗಳಿಂದ ನಾಗಾ ಸಾಧುಗಳು ಆಗಮಿಸಿದ್ದಾರೆ. ಸಾಧು ಸಂತರ ಆಗಮನವೂ ಆಗಿದೆ. ಈ ಪೈಕಿ ಕೆಲವು ಸಾಧುಗಳ ಹಾವ ಭಾವ, ವಿಲಕ್ಷಣ ಅಲಂಕಾರ ಗಮನಸೆಳೆದಿದೆ. ಆಕರ್ಷಕ ಚಿತ್ರನೋಟ ಇಲ್ಲಿದೆ.
(1 / 10)
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2025 ರ ಮಹಾ ಕುಂಭ ಮೇಳ ಶುರುವಾಗಿದೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಉತ್ತರಾಯಣ ಕಾಲ ಶುರುವಾಗುತ್ತಿದ್ದಂತೆ, ಸಾಧು ಸಂತರು, ಹಿಂದೂ ಧರ್ಮದ ಶ್ರದ್ಧಾಳುಗಳು ಪವಿತ್ರ ಸಂಗಮದಲ್ಲಿ ಶಾಹಿ ಸ್ನಾನ ಕೈಗೊಂಡರು. ದಾರ್ಶನಿಕರ ನೇತೃತ್ವದ ಅನೇಕ ಅಖಾಡಗಳಲ್ಲಿ ನೆರೆದಿರುವ ಸಂತರು ಈ ಮಹಾ ಧಾರ್ಮಿಕ ಸಂಗಮದ ಆಕರ್ಷಣೆಯೂ ಹೌದು. ಅವರ ವಿಶಿಷ್ಟ, ವಿಲಕ್ಷಣ ಅಲಂಕಾರಗಳ ಚಿತ್ರನೋಟ ಇಲ್ಲಿದೆ.
(2 / 10)
ಮಹಾ ಕುಂಭಮೇಳಕ್ಕೆ ಆಗಮಿಸಿದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಧರಿಸಿದ ವಿಚತ್ರ ವೇಷ ಭೂಷಣಗಳು.
(Niharika KULKARNI / AFP)(3 / 10)
ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಹಿಂದೂ ಭಕ್ತರೊಬ್ಬರು ಜನವರಿ 10 ರಂದು ನಡೆದ ನಯಾ ಉದಾಸಿನ್ ಅಖಾಡದ ಮೆರವಣಿಗೆ ಸಂದರ್ಭದಲ್ಲಿ ಗಮನಸೆಳೆದುದು ಹೀಗೆ.
(Niharika KULKARNI / AFP)(4 / 10)
ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳದ ಮೆರವಣಿಗೆಯಲ್ಲಿ ಭಕ್ತರು ಭಸ್ಮ ಚೆಲ್ಲುತ್ತ ನೃತ್ಯ ಮಾಡುತ್ತ ಸಾಗಿದ ಪರಿ ಇದು
(Niharika KULKARNI / AFP)(5 / 10)
ಮಹಾ ಕುಂಭಮೇಳ ಸ್ಥಳದಲ್ಲಿರುವ ನಯಾ ಉದಾಸಿನ್ ಅಖಾಡದ ಅನುಯಾಯಿಯೊಬ್ಬರ ಮುಖದ ಅಲಂಕಾರ ಹೀಗಿತ್ತು
(Niharika KULKARNI / AFP)(6 / 10)
ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಅಲ್ಲಿ ನಾಗಾ ಸಾಧು ಒಬ್ಬರು ಸಾಂಪ್ರದಾಯಿಕ ಭಂಗಿ ಸೇವನೆ ಭಂಗಿ ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಸಾಗಿದ್ದು ಗಮನಸೆಳೆಯಿತು.
(Niharika KULKARNI / AFP)(7 / 10)
ಶ್ರೀಪಂಚಾಯಿತಿ ಅಖಾಡ ನಯಾ ಉದಾಸಿನ್ ನಿರ್ಯಾನ್‌ದ ಸಾಧು ಒಬ್ಬರು ಮಹಾ ಕುಂಭಮೇಳದ ಮೆರವಣಿಗೆಯಲ್ಲಿ ಗೋಚರಿಸಿದ್ದು ಹೀಗೆ.
(PTI)(8 / 10)
ಮಹಾ ಕುಂಭಮೇಳಕ್ಕೆ ಆಗಮಿಸಿರುವ ನಯಾ ಉದಾಸೀನ್ ಅಖಾಡದ ಸಾಧು ಒಬ್ಬರ ಮುಖದ ಅಲಂಕಾರ ಗಮನಸೆಳೆಯಿತು
(Niharika KULKARNI / AFP)(9 / 10)
ಶ್ರೀ ಪಂಚಾಯತಿ ಅಖಾಡ ನಯಾ ಉದಾಸಿನ್ ನಿರ್ಯಾನ್ ಸಾಧು ಒಬ್ಬರು ಚವನಿ ಪ್ರವೇಶ ಮೆರವಣಿಗೆಯಲ್ಲಿ ಭಾಗವಹಿಸಿದಾಗ ತಮ್ಮ ಕೇಶಾಲಂಕಾರದ ಕಡೆಗೆ ಗಮನಹರಿಸಿದ ಸಂದರ್ಭ.
(PTI)ಇತರ ಗ್ಯಾಲರಿಗಳು