Maha Shivaratri 2024: ಮಹಾ ಶಿವರಾತ್ರಿ ದಿನ ಕಪ್ಪು ಬಣ್ಣ ಧರಿಸಬೇಡಿ, ಹಾಗಾದರೆ ಪೂಜೆ ಮಾಡುವಾಗ ಯಾವ ಬಣ್ಣದ ವಸ್ತ್ರ ಧರಿಸಬೇಕು?
Maha Shivaratri 2024: ಮಾರ್ಚ್ 8, ಶುಕ್ರವಾರ ದೇಶಾದ್ಯಂತ ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಭಕ್ತರು ದೇಗುಲದಲ್ಲಿ, ಮನೆಯಲ್ಲಿ ಶಿವನನ್ನು ಆರಾಧಿಸುತ್ತಾರೆ. ಆದರೆ ಶಿವನ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ತಪ್ಪದೆ ಅನುಸರಿಬೇಕು.
(1 / 5)
ಮಹಾಶಿವರಾತ್ರಿ ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಭಕ್ತರು ಶಿವನನ್ನು ಪೂರ್ಣ ಭಕ್ತಿಯಿಂದ ಪೂಜಿಸುತ್ತಾರೆ. ಮಹಾಶಿವರಾತ್ರಿಯು ಶಿವಭಕ್ತರಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
(2 / 5)
ಶಿವರಾತ್ರಿಯಂದು ಜನರು ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನನ್ನು ಒಲಿಸಿಕೊಳ್ಳುತ್ತಾರೆ. ಶಿವ ಪುರಾಣದಲ್ಲಿ ಭೋಲೆನಾಥನ ಆರಾಧನೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಆದ್ದರಿಂದ ಆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮಹಾಶಿವರಾತ್ರಿಯ ದಿನ ಭಗವಾನ್ ಶಂಕರನ ಪೂಜೆಯಲ್ಲಿ ಕೆಲವೊಂದು ಬಣ್ಣಗಳನ್ನು ಬಳಸಬಾರದು. ಇದನ್ನು ತಪ್ಪಿದರೆ ಅಶುಭ ಫಲ ದೊರೆಯುತ್ತವೆ.
(3 / 5)
ಮಹಾಶಿವರಾತ್ರಿಯಂದು ಮಹಾದೇವ ಮತ್ತು ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಹೆಚ್ಚಿನ ಸಂಖ್ಯೆಯ ಭಕ್ತರು ಶಿವನ ಆಶೀರ್ವಾದವನ್ನು ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವನನ್ನು ಮೆಚ್ಚಿಸಲು ವಿವಿಧ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಾರೆ. ಆದರೆ ನೀವು ಆ ದಿನ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ.
(4 / 5)
ನಂಬಿಕೆಗಳ ಪ್ರಕಾರ ಶಿವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ವಿಶೇಷವಾಗಿ ಈ ದಿನ ಪರಮೇಶ್ವರನನ್ನು ಪೂಜಿಸುವ ಮತ್ತು ಉಪವಾಸ ಮಾಡುವ ಭಕ್ತರು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ದಿನ ಶುಭ್ರವಾದ, ಒಗೆದ ಬಿಳಿ, ಹಳದಿ ಬಟ್ಟೆಗಳನ್ನು ಧರಿಸಬೇಕು.
ಇತರ ಗ್ಯಾಲರಿಗಳು