Mahashivratri 2024: ಭಾರತದಲ್ಲಿನ 7 ಪ್ರಸಿದ್ಧ ಶಿವ ದೇಗುಲಗಳಿವು; ಮಹಾದೇವನ ಆಶೀರ್ವಾದ ಪಡೆಯಲು ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahashivratri 2024: ಭಾರತದಲ್ಲಿನ 7 ಪ್ರಸಿದ್ಧ ಶಿವ ದೇಗುಲಗಳಿವು; ಮಹಾದೇವನ ಆಶೀರ್ವಾದ ಪಡೆಯಲು ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ

Mahashivratri 2024: ಭಾರತದಲ್ಲಿನ 7 ಪ್ರಸಿದ್ಧ ಶಿವ ದೇಗುಲಗಳಿವು; ಮಹಾದೇವನ ಆಶೀರ್ವಾದ ಪಡೆಯಲು ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ

  • ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮಧ್ಯ ಭಾರತದಲ್ಲೇ 5 ಜ್ಯೋತಿರ್ಲಿಂಗಗಳನ್ನು ಕಾಣಬಹುದಾಗಿದೆ. ಉಜ್ಜಯನಿಯ ಮಹಾ ಕಾಳೇಶ್ವರ, ಎಲ್ಲೋರಾದ ಕೈಲಾಸ ದೇವಾಲಯ, ಪುಣೆಯ ಭೀಮಾಶಂಕರ ಇವೆಲ್ಲವೂ ಭಾರತದ ಪ್ರಸಿದ್ಧ ಶಿವಾಲಯಗಳು. ನೀವು ಶಿವ ಭಕ್ತರಾದರೆ ಈ ದೇಗುಲಗಳಿಗೆ ಜೀವನದಲ್ಲಿ ಒಮ್ಮೆಯಾದ್ರೂ ಭೇಟಿ ಕೊಡಿ. 

ಭಾರತ ದೇಗುಲಗಳ ನಾಡು. ಇಲ್ಲಿನ ಪ್ರತಿ ಊರಿನಲ್ಲೂ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರೆ, ಉಳಿದವು ಬಹಳ ಪುರಾತನವೆಂದೂ, ಅಥವಾ ಅಪರೂಪದ ದೇವಸ್ಥಾಗಳೆಂದೂ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ಭಾರತದ ಪ್ರತಿ ಊರಿನಲ್ಲೂ ನಾವು ಶಿವ ದೇವಾಲಯಗಳನ್ನು ಕಾಣಬಹುದು. ಅಲ್ಲೆಲ್ಲಾ ಶಿವನ ದೊಡ್ಡ ಭಕ್ತವೃಂದವನ್ನು ನೋಡಬಹುದು. ಪ್ರತಿ ವರ್ಷ ಶಿವರಾತ್ರಿಯಂದು ಶಿವನ ಭಕ್ತರು ದೇವಸ್ಥಾನಗಳಿಗೆ ಹೋಗುತ್ತಾರೆ. ಶಿವನ್ನು ಪೂಜಿಸುತ್ತಾರೆ. ಕೆಲವಡೆ ಶಿವನ್ನು ಮೂರ್ತಿ ರೂಪದಲ್ಲಿ ಪೂಜಿಸಿದರೆ ಇನ್ನು ಕಲವಡೆ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಮಧ್ಯ ಭಾರತದಲ್ಲಿ ಅನೇಕ ಪ್ರಸಿದ್ಧ ಶಿವನ ದೇವಸ್ಥಾನಗಳಿವೆ. ಜ್ಯೋತಿರ್ಲಿಂಗಗಳು, ಅತ್ಯಂತ ಪುರಾತನ ದೇವಸ್ಥಾನಗಳು ಅಲ್ಲಿವೆ. ಉಜ್ಜಯನಿಯ ಮಹಾ ಕಾಳೇಶ್ವರ, ಎಲ್ಲೋರಾದ ಕೈಲಾಸ ದೇವಾಲಯ, ಪುಣೆಯ ಭೀಮಾಶಂಕರ, ನಾಸಿಕದ ತ್ರಯಂಬಕೇಶ್ವರ ಇವೆಲ್ಲವೂ ಮಧ್ಯ ಭಾರತದಲ್ಲೇ ಇವೆ.
icon

(1 / 9)

ಟೂಟಿ ಝರನಾ, ಜಾರ್ಖಂಡ: ಜಾರ್ಖಂಡದ ರಾಮಗಢದಲ್ಲಿರುವ ಶಿವನ ದೇವಸ್ಥಾನವನ್ನು ಟೂಟಿ ಝರನಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ದೇವಸ್ಥಾದಲ್ಲಿ ಬೋಲೆನಾಥ ಅಂದರೆ ಶಿವನಿಗೆ ವರ್ಷದ ಹನ್ನೆರಡೂ ತಿಂಗಳು ಮತ್ತು ಇಪ್ಪತ್ನಾಲ್ಕೂ ಗಂಟೆಯೂ ಜಲಾಭಿಷೇಕ ನಡೆಯುತ್ತದೆ. ಅದು ಮಾನವನಿಂದಲ್ಲ ಪ್ರಕೃತಿಯಿಂದ. ಇಲ್ಲಿನ ಶಿವಲಿಂಗಕ್ಕೆ ನೈಸರ್ಗಿಕವಾಗಿಯೇ ನಿರಂತರವಾಗಿ ಅಭಿಷೇಕವಾಗುತ್ತಿರುತ್ತದೆ. ಶಿವಲಿಂಗದ ಮೇಲಿನ ಬಂಡೆಗಳಿಂದ ನಿರಂತರವಾಗಿ ನೀರು ಬೀಳುತ್ತದೆ. ಅದು ಗಂಗಾ ಮಾತೆಯ ವಿಗ್ರಹದ ಕೈಯಿಂದ ಹೊರಬಂದು ಶಿವನಿಗೆ ಅಭಿಷೇಕ ಮಾಡಲ್ಪಡುತ್ತದೆ. ಟೂಟಿ ಝರನಾ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ, ಅಭಿಷೇಕದ ನೀರನ್ನು ತೀರ್ಥ ರೂಪದಲ್ಲಿ ಸೇವಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂದು ನಂಬಲಾಗಿದೆ.
icon

(2 / 9)

ಬೈದ್ಯನಾಥ ದೇವಾಲಯ, ಜಾರ್ಖಂಡ್‌: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಜಾರ್ಖಂಡ್‌ದ ಬೈದ್ಯನಾಥ ದೇವಾಲಯವು ಶಿವನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬ ಖ್ಯಾತಿ ಪಡೆದುಕೊಂಡಿದೆ. ಜಾರ್ಖಂಡ್‌ದ ದಿಯೋಘಡನಲ್ಲಿ ಶಿವನು ಬೈದ್ಯನಾಥನಾಗಿ ನೆಲೆನಿಂತಿದ್ದಾನೆ. ವಿಶಾಲವಾದ ಪ್ರಾಗಂಣದಲ್ಲಿ ಹರಡಿರುವ ದೇವಾಲಯವು ಹಲವಾರು ಸಣ್ಣ ದೇವಾಲಯಗಳು ಮತ್ತು ಕೊಳಗಳನ್ನು ಹೊಂದಿದೆ. ಸೂಕ್ಷ್ಮ ಕೆತ್ತನೆಗಳಿಂದ ಈ ದೇವಸ್ಥಾನವು ಅಲಂಕರಿಸಲ್ಪಟ್ಟಿದೆ. ದೇಶಾದ್ಯಂತ ಭಕ್ತರು ಇಲ್ಲಿದೆ ಬಂದು ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿ ಮತ್ತು ಶ್ರಾವಣಿ ಮೇಳವು ಇಲ್ಲಿನ ಪ್ರಮುಖ ಆಚರಣೆಯಾಗಿದೆ. ಆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನಿಡುತ್ತಾರೆ.
icon

(3 / 9)

ಮಹಾಕಾಳೇಶ್ವರ ದೇವಸ್ಥಾನ ಉಜ್ಜಯನಿ, ಮಧ್ಯಪ್ರದೇಶ: ಶಿಪ್ರಾ ನದಿಯ ದಂಡೆಯ ಮೇಲಿರುವ ಮಹಾಕಾಳೇಶ್ವರ ದೇವಸ್ಥಾನವು ಮಧ್ಯಪ್ರದೇಶ ರಾಜ್ಯದ ಉಜ್ಜಯನಿಯಲ್ಲಿದೆ. ಈ ದೇವಸ್ಥಾನವನ್ನು 5 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದನ್ನು ಮರಾಠರ ದೊರೆ ರಾನೋಜಿ ಶಿಂಧೆಯು 18 ನೇ ಶತಮಾನದಲ್ಲಿ ಪುನರ್‌ನಿರ್ಮಾಣ ಮಾಡಿದನು ಎಂದು ಹೇಳುತ್ತಾರೆ. ಇಲ್ಲಿ ಶಿವನು ಸ್ವಯಂಭು ಲಿಂಗವಾಗಿ ನೆಲೆನಿಂತಿದ್ದಾನೆ. ಈ ದೇವಾಲಯದ ವಿಶೇಷವೆಂದರೆ ಭಸ್ಮ ಆರತಿ. ಇಲ್ಲಿನ ಸಂಜೆಯ ಆರತಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಶಿವನ ಭಕ್ತರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
icon

(4 / 9)

ಓಂಕಾರೇಶ್ವರ ದೇವಾಲಯ, ಮಧ್ಯಪ್ರದೇಶ: ನರ್ಮದಾ ನದಿಯ ದಂಡೆಯಲ್ಲಿರುವ ಮಂಧಾತ ಅಥವಾ ಶಿವಪುರಿ ದ್ವೀಪದಲ್ಲಿ ನೆಲೆಗೊಂಡಿರುವ ಓಂಕಾರೇಶ್ವರ ದೇವಾಲಯವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿದೆ. ದೇವಾಲಯವಿರುವ ದ್ವೀಪವು ಆಕಾರವು ಹಿಂದೂ ಧರ್ಮದ ಪವಿತ್ರ  ಓಂ ಆಕಾರವನ್ನು ಹೋಲುತ್ತದೆ ಎಂದು ನಂಬಲಾಗಿದೆ. ಜನಪ್ರಿಯ ದಂತೆಕತೆಗಳ ಪ್ರಕಾರ, ರಾಜ ಮಾಂಧಾತನು ನರ್ಮದಾ ನದಿಯ ಬಳಿ ಶಿವನನ್ನು ಪೂಜಿಸುತ್ತಿದ್ದನು ಎಂದು ಹೇಳಲಾಗುತ್ತದೆ. ಓಂಕಾರೇಶ್ವರ ದೇವಾಲಯವು ಅದ್ಭುತ ಶಿಲ್ಪಕಲೆಗಳಿಂದ ಕಂಗೊಳಿಸುತ್ತದೆ.
icon

(5 / 9)

ಕೈಲಾಸ ದೇವಾಲಯ, ಮಹಾರಾಷ್ಟ್ರ: ಮಹಾರಾಷ್ಟ್ರದ ಎಲ್ಲೋರಾದಲ್ಲಿರುವ ಕೈಲಾಸ ದೇವಾಲಯವು ಭಾರತದ ಅತ್ಯುತ್ತಮ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 6 ರಿಂದ 10 ನೇ ಶತಮಾನದಲ್ಲಿ ಆಳಿದ ರಾಷ್ಟ್ರಕೂಟರ ಅದ್ಭುತ ವಾಸ್ತುಶಿಲ್ಪಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಇದು 34 ದೇವಾಲಯಗಳ ಸಮುಚ್ಛಯವಾಗಿದೆ. ಬಂಡೆಗಳನ್ನು ಕೆತ್ತಿ ಮಾಡಿದ ದೇಶದ ಅತಿದೊಡ್ಡ ದೇವಾಲಯ ಇದಾಗಿದೆ. ಎಲ್ಲೋರಾ ಕೈಲಾಸ ದೇವಾಲಯವು ಜಗತ್ತಿನ ಅದ್ಭುತಗಳಲ್ಲೊಂದಾಗಿದೆ. ಇದರ ರಚನೆಯು ಕೈಲಾಸ ಪರ್ವತದಂತೆ ಕಾಣುವುದರಿಂದ ಇದನ್ನು ಕೈಲಾಸ ದೇವಾಲಯ ಎಂದು ಕರೆಯಲಾಗುತ್ತದೆ.
icon

(6 / 9)

ಭೀಮಾಶಂಕರ, ಪುಣೆ, ಮಹಾರಾಷ್ಟ್ರ: ಭೀಮಾ ನದಿಯ ದಡದಲ್ಲಿದೆ ಭೀಮಾಶಂಕರ ದೇವಾಲಯ. ನಾಗರ ವಾಸ್ತುಶಿಲ್ಪದ, ಕಪ್ಪು ಬಂಡೆಗಳಿಂದ ಈ ದೇವಸ್ಥಾನವು ಅದ್ಭುತವಾಗಿದೆ. ಇಲ್ಲಿ ಮಹಾಶಿವರಾತ್ರಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಶಿವನ ಭಕ್ತಾದಿಗಳು ಭೇಟಿ ನೀಡುತ್ತಾರೆ. ಬೀಮಾಶಂಕರ ದೇವಸ್ಥಾನದ ಜೊತೆಗೆ ಭಕ್ತು ಕಮಲಜ ದೇವಸ್ಥಾನವನ್ನೂ ವೀಕ್ಷಿಸುತ್ತಾರೆ. ಇದು ಭಾರತದ ಅತ್ಯಂತ ಜನಪ್ರಿಯ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಭೀಮಾಶಂಕರವು ಭೀಮಾ ನದಿಯ ಉಗಮ ಸ್ಥಾನ ಎಂದು ಹೇಳಲಾಗುತ್ತದೆ. ತ್ರಿಪುರಾಸುರ ಮತ್ತು ಪರಶಿವನಿಗೆ ಯುದ್ಧವಾದಾಗ ಈ ಭೀಮಾ ನದಿಯು ಆವಿಯಾಗಿ ಹೋಯಿತು ಎಂದು ಸ್ಥಳ ಪುರಾಣ ಹೇಳುತ್ತದೆ.
icon

(7 / 9)

ತ್ರಯಂಬಕೇಶ್ವರ, ನಾಸಿಕ: ಬ್ರಹ್ಮಗಿರಿ ಪರ್ವತದ ಬಳಿ ಇರುವ ತ್ರಯಂಬಕೇಶ್ವರ ದೇವಾಲಯವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಗೋದಾವರಿ ನದಿಯ ಉಗಮ ಸ್ಥಳವಾಗಿದೆ. ಇದನ್ನು ಇಲ್ಲಿ ಗೌತಮಿ ಗಂಗೆ ಎಂದೂ ಕರೆಯುತ್ತಾರೆ. ಶಿವಪುರಾಣದ ಪ್ರಕಾರ ಗೋದವರಿ ನದಿ ಮತ್ತು ಗೌತಮ ಋಷಿಗಳು ಶಿವನನ್ನು ಇಲ್ಲಿ ನೆಲೆಸುವಂತೆ ಕೋರಿಕೆ ಇಟ್ಟರು ಎನ್ನಲಾಗಿದೆ. ಹಾಗಾಗಿ ಶಿವನು ತ್ರಯಂಬಕೇಶ್ವರನ ರೂಪದಲ್ಲಿ ನೆಲೆಗೊಂಡಿರುವನು. ಇದು ಜ್ಯೋತಿರ್ಲಿಂಗಗಳಲ್ಲೇ ಅತ್ಯಂತ ವಿಶಿಷ್ಟವಾದ ಭಾಗವೆಂದು ಹೇಳಲಾಗುತ್ತದೆ.
icon

(8 / 9)

ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿಯ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ 
icon

(9 / 9)

ಇತರ ಗ್ಯಾಲರಿಗಳು