ಗೃಹಸಚಿವ ಅಮಿತ್ ಶಾ, ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಸೆಲೆಬ್ರಿಟಿಗಳು
Mahakumbha Mela 2025: ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದಾರೆ. ನಾಗಾಸಾಧುಗಳು, ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡಾ ಮಹಾಕುಂಭ ಮೇಳಕ್ಕೆ ಬಂದು ಶಾಹಿಸ್ನಾನ ಮಾಡುತ್ತಿದ್ದಾರೆ.
(1 / 16)
ಈ ಮಹಾಕುಂಭ ಮೇಳವು 144 ವರ್ಷಗಳ ನಂತರ ನಡೆಯುತ್ತಿದೆ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗಂಗಾ, ಯುಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ದೊರೆಯುತ್ತದೆ ಎನ್ನುವುದು ಭಕ್ತರ ನಂಬಿಕೆ.
(AP)(2 / 16)
ಉತ್ತರಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸೋಮವಾರ 1.55 ಕೋಟಿಗೂ ಹೆಚ್ಚು ಮಂದಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
(AP)(5 / 16)
ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾತ್ರವಲ್ಲ ನಾಗಾಸಾಧು ಆಗಲು ಬಯಸುವವರು ದೀಕ್ಷೆ ಕೂಡಾ ಪಡೆಯಲು ಬರುತ್ತಾರೆ
(Deepak Gupta/Hindustan Times)(6 / 16)
ನಾಗಾಸಾಧುಗಳು ಮಾತ್ರವಲ್ಲ ಈ ಮಹಾಕುಂಭ ಮೇಳದಲ್ಲಿ 100ಕ್ಕೂ ಹೆಚ್ಚು ನಾಗ ಸನ್ಯಾಸಿನಿಯರು ದೀಕ್ಷೆ ಪಡೆದಿದ್ದಾರೆ.
(Deepak Gupta/Hindustan Times)(8 / 16)
ಸ್ವಾಮಿ ಕೈಲಾಸಾನಂದ ಗಿರಿ ಹಾಗೂ ಸ್ವಾಮಿ ಅವಧೇಶಾನಂದ ಗಿರಿ ಮಹಾಕುಂಭದ ಸಮಯದಲ್ಲಿ ಪ್ರಯಾಗರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಿದರು.
(AP)(10 / 16)
ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ವಾಮಿ ಕೈಲಾಶಾನಂದ ಗಿರಿ, ಮತ್ತು ಸ್ವಾಮಿ ಅವಧೇಶಾನಂದ ಗಿರಿ ಮಹಾಕುಂಭದ ಸಮಯದಲ್ಲಿ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
(AP)(11 / 16)
ಸೋಮವಾರ ಮಧ್ಯಾಹ್ನ 1 ಗಂಟೆಗೆ ಪವಿತ್ರ ಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪವಿತ್ರ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿದರು, ಜೊತೆಗೆ ಮಠಾಧೀಶರ ಮಾರ್ಗದರ್ಶನದಲ್ಲಿ ಇತರ ಆಚರಣೆಗಳನ್ನು ಪೂರ್ಣಗೊಳಿಸಿದರು.
(AP)(12 / 16)
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾದ ಜಯ್ ಶಾ (ಅಮಿತ್ ಶಾ ಪುತ್ರ) ಸೇರಿದಂತೆ ಗೃಹ ಸಚಿವರ ಕುಟುಂಬದ ಸದಸ್ಯರು ತ್ರಿವೇಣಿ ಸಂಗಮದಲ್ಲಿ 'ಆರತಿ' ಸೇರಿದಂತೆ ವಿವಿಧ ಆಚರಣೆಗಳಲ್ಲಿ ಭಾಗವಹಿಸಿದರು. ಅಮಿತ್ ಶಾ ಪತ್ನಿ ಸೋನಲ್, ಸೊಸೆ ರಿಷಿತಾ ಮತ್ತು ಮೊಮ್ಮಕ್ಕಳು ಕೂಢಾ ಇದ್ದರು.
(Amit Shah-X)(14 / 16)
ತ್ರಿವೇಣಿ ಸಂಗಮದಲ್ಲಿ ಪತ್ನಿ ಪ್ರೀತಿ ಅದಾನಿ, ಮಗ ಕರಣ್ ಅದಾನಿ ಮತ್ತು ಸೊಸೆ ಪರಿಧಿ ಅದಾನಿ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ.
(ANI Picture Service )(15 / 16)
ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮುಗಿಸಿ ಬಡೇ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಸುರೇಶ್ ರೈನಾ.
(ANI)ಇತರ ಗ್ಯಾಲರಿಗಳು