ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಗೆ ನಾಯಕಿಯಾದ ಮಹಾನಟಿ ವಿಜೇತೆ ಪ್ರಿಯಾಂಕಾ ಆಚಾರ್
- “ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ" ಚಿತ್ರಕ್ಕೆ ನಾಯಕನಾಗಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾರನ್ನು ಪರಿಚಯಿಸಿದ್ದ ನಿರ್ದೇಶಕ ತರುಣ್ ಸುಧೀರ್ ಈಗ, ಅದೇ ಚಿತ್ರದ ನಾಯಕಿಯನ್ನು ರಿವೀಲ್ ಮಾಡಿದ್ದಾರೆ. ಮಹಾನಟಿ ಮೂಲಕ ಮನಗೆದ್ದ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಚಂಚನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

(1 / 6)
ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ನೈಜ ಘಟನೆಯ "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ" ಮೈಸೂರಿನ ಪ್ರಿಟಿ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
(2 / 6)
ಮಹಾನಟಿ ವಿನ್ನರ್ ಪಟ್ಟ ಪಡೆದಿದ್ದ ಪ್ರಿಯಾಂಕಾ, ತರುಣ್ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮಹಾನಟಿ ಶೋ ಜಡ್ಜ್ ಆಗಿದ್ದಾಗ್ಲೇ ಪ್ರಿಯಾಂಕಾ ಅಭಿನಯವನ್ನು ತರುಣ್ ಸುಧೀರ್ ಮೆಚ್ಚಿಕೊಂಡಿದ್ದರು.
(3 / 6)
ಇದೀಗ ಅವರದ್ದೇ ನಿರ್ಮಾಣದ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಬೊಂಬಾಟ್ ಚಾನ್ಸ್ ಪ್ರಿಯಾಂಕಾಗೆ ಸಿಕ್ಕಿದೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ನಟಿಯಬೇಕು ಎಂಬ ಕನಸಿತ್ತು. ಆ ಕನಸಿಗೆ ತರುಣ್ ಸಾಥ್ ಕೊಡುತ್ತಿದ್ದಾರೆ.
(4 / 6)
ತರುಣ್ ಸುಧೀರ್ ಹೊಸ ನಾಯಕಿಯರನ್ನು ಪರಿಚಯಿಸುವುದರಲ್ಲಿ ನಿಸ್ಸಿಮರು. ರಾಬರ್ಟ್ ಮೂಲಕ ಆಶಾ ಭಟ್, ಕಾಟೇರ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರನ್ನು ಕನ್ನಡ ಸಿನಿಮಾಪ್ರೇಮಿಗಳ ಎದುರು ತಂದಿದ್ದರು.
(5 / 6)
ಈಗ ಮಹಾನಟಿ ಮೂಲಕ ಗೆದ್ದು ಬೀಗಿದ ಪ್ರಿಯಾಂಕಾ ಆಚಾರ್ ಅವರನ್ನು ತಮ್ಮದೇ ನಿರ್ಮಾಣದ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ನಿಲ್ಲಿಸುತ್ತಿದ್ದಾರೆ.
ಇತರ ಗ್ಯಾಲರಿಗಳು