ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ 2 ದಿನದ ಅಂತರದಲ್ಲೇ ಆಲಮಟ್ಟಿ ಜಲಾಶಯಕ್ಕೆ ಹರಿಯಿತು 12 ಟಿಎಂಸಿ ನೀರು, ಹೀಗಿದೆ ನೋಟ
ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೆ ಮೇ ತಿಂಗಳಲ್ಲೇ ಉತ್ತಮ ಒಳ ಹರಿವು ಶುರುವಾಗಿ ಎರಡನೇ ದಿನದಲ್ಲಿ ಹನ್ನೆರಡು ಟಿಎಂಸಿ ನೀರು ಹರಿದು ಬಂದಿದೆ. ಇದರ ಚಿತ್ರನೋಟ ಇಲ್ಲಿದೆ.
(1 / 6)
ವಿಜಯಪುರ- ಬಾಗಲಕೋಟೆ ಜಿಲ್ಲೆಯ ನಡುವೆ ಹಂಚಿ ಹೋಗಿರುವ ಆಲಮಟ್ಟಿಯ ಲಾಲ್ ಬಹದ್ದೂರು ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ಮತ್ತೆ ಏರತೊಡಗಿದೆ. ಮಹಾರಾಷ್ಟ್ರದ ಮಳೆ ಪರಿಣಾಮ ಜಲಾಶಯಕ್ಕೆ ಜೀವ ಕಳೆ ಬರತೊಡಗಿದೆ.
(2 / 6)
ಮೇ ತಿಂಗಳಲ್ಲಿ ಜಲಾಶಯಕ್ಕೆ ಒಳ ಹರಿವುದು ಬರುವುದು ಅತೀ ಕಡಿಮೆ. ಮೂರು ವರ್ಷದ ಹಿಂದೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿದ್ದು ಬಿಟ್ಟರೆ ಜೂನ್ ನಂತರವೇ ಒಳ ಹರಿವು ಹೆಚ್ಚುತ್ತದೆ. ಈ ಬಾರಿ ಮೇ ಕೊನೆ ವಾರವೇ ನೀರಿನ ಒಳ ಹರಿವು ಅಧಿಕವಾಗಿದೆ.
(3 / 6)
ಕಳೆದ ವರ್ಷ ಜಲಾಶಯ ತುಂಬಿದರೂ ಆಂಧ್ರಪ್ರದೇಶ, ತೆಲಂಗಾಣಕ್ಕೆ ನೀರು ಹರಿಸಿದ ಪರಿಣಾಮವಾಗಿ ಆರು ಟಿಎಂಸಿಯಷ್ಟು ನೀರು ಆಲಮಟ್ಟಿಯಲ್ಲಿ ಲಭ್ಯವಿತ್ತು. ಈಗ ಬೇಗನೇ ಮಳೆ ಬಂದಿರುವುದರಿಂದ ಮತ್ತೆ ಟಿಎಂಸಿ ಪ್ರಮಾಣದಲ್ಲಿ ಏರಿಕೆ ಕಾಣತೊಡಗಿದೆ.
(4 / 6)
ಆಲಮಟ್ಟಿ ವಿಭಾಗದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯಕ್ಕೆ 48,807 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಮೂರು ದಿನದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
(5 / 6)
ಆಲಮಟ್ಟಿ ಜಲಾಶಯದ ನೀರಿನ ಮಟ್ಟವು ಮಂಗಳವಾರದಂದು 511.160 ಮೀಟರ್ ತಲುಪಿದೆ. ಗರಿಷ್ಠ ಮಟ್ಟವು 519.60 ಮೀಟರ್‌ನಷ್ಟಿದೆ.
ಇತರ ಗ್ಯಾಲರಿಗಳು