Devendra Fadnavis: ಅತೀ ಕಿರಿಯ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆದ ದೇವೇಂದ್ರ ಫಡ್ನವೀಸ್ ಹಿನ್ನೆಲೆ ಏನು, ಹೈಕಮಾಂಡ್ ಮತ್ತೆ ಮಣೆ ಹಾಕಿದ್ದೇಕೆ
- Devendra Fadnavis as Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಕುರಿತಾದ ಚಿತ್ರನೋಟ ಇಲ್ಲಿದೆ.
- Devendra Fadnavis as Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಕುರಿತಾದ ಚಿತ್ರನೋಟ ಇಲ್ಲಿದೆ.
(1 / 8)
ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಬಿಜೆಪಿಯಲ್ಲಿ ದಶಕದಿಂದ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು, ಈಗಾಗಲೇ ಎರಡು ಬಾರಿ ಸಿಎಂ, ಪಕ್ಷದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು ಫಡ್ನವೀಸ್.
(2 / 8)
ಫಡ್ನವೀಸ್ ಅವರು ಜನಿಸಿದ್ದು 1970ರ ಜುಲೈ 22 ರಂದು. ನಾಗಪುರ ಮೂಲದವರು. ತಂದೆ ಗಂಗಾಧರ ಫಡ್ನವೀಸ್ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿದ್ದವರು. ವಿಧಾನಪರಿಷತ್ ಸದಸ್ಯರೂ ಆಗಿದ್ದರು. ದೇವೇಂದ್ರ ಚಿಕ್ಕವರಿದ್ದಾಗಲೇ ತಂದೆ ತೀರಿಕೊಂಡರು.
(3 / 8)
ತಂದೆಯ ಹಿನ್ನೆಲೆ. ತಮ್ಮ ಆಸಕ್ತಿಯಿಂದಲೇ ಆರ್‌ಎಸ್‌ಎಸ್ ಜತೆ ನಂಟು, ಬಿಜೆಪಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ಬಂದವರ ದೇವೇಂದ್ರ ಫಡ್ನವೀಸ್. ಸಂಘಟನೆಯಲ್ಲಿಯೇ ಬೆಳೆಯುತ್ತಲೇ ಎರಡು ದಶಕದಲ್ಲಿ ಉನ್ನತ ಹಂತಕ್ಕೆ ಬೆಳೆದು ಮೂರನೇ ಬಾರಿಗೆ ಸಿಎಂ ಆಗುತ್ತಿದ್ದಾರೆ.
(4 / 8)
ತಮ್ಮ ಮೃದುಭಾಷೆ, ದ್ವೇಷವಿಲ್ಲದ ರಾಜಕಾರಣದಿಂದಲೇ ಎಲ್ಲಾ ಪಕ್ಷದವರೊಂದಿಗೂ ಒಡನಾಟ ಇಟ್ಟುಕೊಂಡು ಬಂದವರು. ದಶಕದ ಹಿಂದೆಯೇ ಸಿಎಂ ಆಗಿದ್ದವರು ಅವರು ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನಂತರ ಸಿಎಂ ಆಗ ಅತ್ಯಂತ ಕಿರಿಯ ನಾಯಕ ಎನ್ನಿಸಿದ್ದಾರೆ.
(5 / 8)
ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ರಾಜಕಾರಣ ಉನ್ನತ ಹುದ್ದೆ ಏರುವ ಹಿಂದೆ ನರೇಂದ್ರ ಮೋದಿ ಅವರ ಒತ್ತಾಸೆಯೂ ಇದೆ. ದೇವೇಂದ್ರ ಅವರ ಕುಟುಂಬದ ಹಿನ್ನೆಲೆ, ಕೆಲಸ ಮಾಡುವ ಛಾತಿಯನ್ನು ಗುರುತಿಸಿ ಮೋದಿ ಅವರೇ ಗಟ್ಟಿ ಬೆಂಬಲ ನೀಡಿದ್ದರಿಂದ ಈ ಹಂತಕ್ಕೆ ಏರಿದ್ಧಾರೆ.
(6 / 8)
ಮೂರು ವರ್ಷದ ಹಿಂದೆ ಶಿವಸೇನೆ ವಿಭಜನೆಯಾದಾಗ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರೆ ಏಕನಾಥ ಶಿಂಧೆ ಸಿಎಂ ಆದರು. ಈಗ ಉಲ್ಟಾ. ದೇವೇಂದ್ರ ಸಿಎಂ ಆದರೆ ಏಕನಾಥ ಶಿಂಧೆ ಡಿಸಿಎಂ ಆಗುತ್ತಿದ್ದಾರೆ.
(7 / 8)
ದೇವೇಂದ್ರ ಫಡ್ನವೀಸ್ ಸಣ್ಣ ವಯಸ್ಸಿಗೆ ತಂದೆ ಕಳೆದುಕೊಂಡಿದ್ದರಿಂದ ತಾಯಿ ಸರಿತಾ ಫಡ್ನವೀಸ್ ಅವರ ಸುಪರ್ದಿಯಲ್ಲಿಬೆಳೆದಿದ್ದಾರೆ. ಈಗಲೂ ತಾಯಿ ಅವರ ಆಶೀರ್ವಾದ, ಹಾರೈಕೆ ಅವರಿಗಿದೆ.
ಇತರ ಗ್ಯಾಲರಿಗಳು