Mahashivratri 2023: ಎಲ್ಲೆಡೆ ಶಿವಧಾನ್ಯ, ದೇಶಾದ್ಯಂತ ಶಿವರಾತ್ರಿ ಆಚರಿಸುತ್ತಿರುವ ಭಕ್ತರು | ಚಿತ್ರ ಮಾಹಿತಿ
- ಕರ್ನಾಟಕ ಸೇರಿದಂತೆ ಎಲ್ಲೆಡೆ ಶಿವನಾಮ ಸ್ಮರಣೆ ಕೇಳಿ ಬರುತ್ತಿದೆ. ರಾಜ್ಯದ ದೇಗುಲಗಳಲ್ಲಿ ಇಂದು ಶಿವಪೂಜೆ, ವಿಶೇಷ ಪೂಜೆಗಳು ನಡೆಯುತ್ತಿವೆ. ಉಪವಾಸ, ಜಾಗರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ದೇಶದ ವಿವಿಧಡೆ ಇಂದು ಶಿವರಾತ್ರಿ ಆಚರಣೆ ಹೇಗೆ ನಡೆಯುತ್ತಿದೆ ಎಂಬ ಚಿತ್ರ ಮಾಹಿತಿ ಇಲ್ಲಿದೆ.
- ಕರ್ನಾಟಕ ಸೇರಿದಂತೆ ಎಲ್ಲೆಡೆ ಶಿವನಾಮ ಸ್ಮರಣೆ ಕೇಳಿ ಬರುತ್ತಿದೆ. ರಾಜ್ಯದ ದೇಗುಲಗಳಲ್ಲಿ ಇಂದು ಶಿವಪೂಜೆ, ವಿಶೇಷ ಪೂಜೆಗಳು ನಡೆಯುತ್ತಿವೆ. ಉಪವಾಸ, ಜಾಗರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ದೇಶದ ವಿವಿಧಡೆ ಇಂದು ಶಿವರಾತ್ರಿ ಆಚರಣೆ ಹೇಗೆ ನಡೆಯುತ್ತಿದೆ ಎಂಬ ಚಿತ್ರ ಮಾಹಿತಿ ಇಲ್ಲಿದೆ.
(1 / 9)
ಹಿಂದೂ ಹಬ್ಬಗಳಲ್ಲಿ ಮಹಾ ಶಿವರಾತ್ರಿಗೆ ಎಲ್ಲಿಲ್ಲದ ಮಹತ್ವ. ಇಂದು ವಾರಣಾಸಿ ಕಾಶಿ ವಿಶ್ವನಾಥ ದೇಗುಲದಿಂದ ಒಡಿಸ್ಸಾದ ಶ್ರೀ ಲಿಂಗರಾಜ ದೇಗುಲದವರೆಗೆ ಎಲ್ಲೆಲ್ಲೂ ಶಿವ ಪೂಜೆ ನಡೆಯುತ್ತಿದೆ. ಕರ್ನಾಟಕದಲ್ಲಿ ವಿವಿಧ ಶಿವ ದೇಗುಲಗಳಲ್ಲಿ ಇಂದು ಶಿವರಾತ್ರಿ ಆಚರಣೆ ಜೋರಾಗಿದೆ. (HT Photo/Deepak Gupta)
(2 / 9)
ಒಡಿಸ್ಸಾದ ಜನಪ್ರಿಯ ಶಿವ ದೇಗುಲಗಳಾದ ಪುರಿ ಲೋಕನಾಥ ದೇಗುಲ, ಭುವನೇಶ್ವರದ ಲಿಂಗರಾಜ ದೇಗುಲ, ಕತಕ್‌ನ ದಬಲೇಶ್ವರ ದೇಗುಲ, ಧೀನ್‌ಕಲಾಲ್‌ನ ಕಪಿಲೇಶ್ವ ಸೇರಿದಂತೆ ವಿವಿಧೆಡೆ ಹಲವು ಸಾವಿರ, ಲಕ್ಷ ಭಕ್ತರು ಇಂದು ನೆರೆದು ಶಿವ ನಾಮಸ್ಮರಣೆ ಮಾಡುತ್ತಿದ್ದಾರೆ.
(4 / 9)
"ನಾವು ಇಲ್ಲಿ ವೇದ ಮಂತ್ರಗಳೊಂದಿಗೆ ಶಿವನನ್ನು ಪೂಜಿಸುವೆವು. ಇಲ್ಲಿ ಶಿವನು ಲಿಂಗವಾಗಿ ಉದ್ಭವವಾಗಿದ್ದಾನೆ" ಎಂದು ಬಬುಲ್‌ನಾಥ ದೇಗುಲದಲ್ಲಿ ಭಕ್ತರೊಬ್ಬರು ಸುದ್ದಿ ಸಂಸ್ಥ ಎಎನ್‌ಐಗೆ ತಿಳಿಸಿದರು.(HT Photo/Deepak Gupta)
(5 / 9)
"ನಾವು ಪ್ರತಿವರ್ಷ ಈ ದೇಗುಲಕ್ಕೆ ಭೇಟಿ ನೀಡುವವೆವು. ಇದು ದೇಶದ ಪ್ರಮುಖ ಶಿವ ದೇಗುಲಗಳಲ್ಲಿ ಒಂದಾಗಿದೆʼʼ ಎಂದು ಬಬುಲ್‌ನಾಥ ದೇಗುಲಕ್ಕೆ ಆಗಮಿಸಿದ ಭಕ್ತರೊಬ್ಬರು ಹೇಳಿದ್ದಾರೆ. (ANI)
(6 / 9)
ಇಲ್ಲಿ ಶಿವನಿಗೆ ಭಕ್ತರು ತೀರ್ಥ, ಹಣ್ಣು ಅರ್ಪಿಸುತ್ತಾರೆ. ಈ ಬಾರಿಯ ಮಹಾ ಶಿವರಾತ್ರಿಯ ಹಬ್ಬವನ್ನು ಫೆಬ್ರವರಿ 18, 2023 ರಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ಫೆಬ್ರವರಿ 18, 2023 ರಿಂದ 20:02 (ರಾತ್ರಿ 08:02) ರಿಂದ ಆರಂಭಗೊಂಡು ಫೆಬ್ರವರಿ 19, 2023 ರ 16:18 (ಸಂಜೆ 4:18) ರವರೆಗೆ ಇರಲಿದೆ.(ANI)
(8 / 9)
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಶ್ರೀ ಗೋರಕ್‌ನಾಥ್ ದೇಗುಲದಲ್ಲಿ ರುದ್ರಾಭಿಷೇಕ ಮಾಡಿ ಶಿವನನ್ನು ಪ್ರಾರ್ಥಿಸಿದರು.(PTI)
ಇತರ ಗ್ಯಾಲರಿಗಳು