ಕೋಟಿ ಕೋಟಿ ಆದಾಯ ತರುವ ಮಹಾಗನಿ ಮರ ಹಲವು ರೋಗಗಳಿಗೂ ರಾಮಬಾಣ; ಇಷ್ಟೆ ಅಲ್ಲ, ಇನ್ನೂ ಇದೆ ಉಪಯೋಗ
- Mahogany Benefits: ಕೋಟಿ ಕೋಟಿ ಆದಾಯ ತಂದುಕೊಡುವ ಮಹಾಗನಿ ಮರದಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಇದು ಮಾತ್ರವಲ್ಲ, ಈ ಮರದಿಂದ ಇನ್ನೂ ಹಲವು ಉಪಯೋಗಗಳಿವೆ.
- Mahogany Benefits: ಕೋಟಿ ಕೋಟಿ ಆದಾಯ ತಂದುಕೊಡುವ ಮಹಾಗನಿ ಮರದಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಇದು ಮಾತ್ರವಲ್ಲ, ಈ ಮರದಿಂದ ಇನ್ನೂ ಹಲವು ಉಪಯೋಗಗಳಿವೆ.
(1 / 5)
ಮಹಾಗನಿ ಕೃಷಿಯಿಂದ ರೈತರು ಕೋಟಿ ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಒಂದು ಎಕರೆಯಲ್ಲಿ 400 ರಿಂದ 500 ಸಸಿಗಳನ್ನು ಬೆಳೆಯಲಾಗುತ್ತದೆ. 12 ವರ್ಷಗಳ ನಂತರ 1 ಗಿಡಕ್ಕೆ ಕನಿಷ್ಠ ಅಂದರೂ 70 ರಿಂದ 80 ಸಾವಿರಕ್ಕೆ ಮಾರಾಟವಾಗುತ್ತದೆ (ಪ್ರಸ್ತುತ ಮಾರುಕಟ್ಟೆಯ ಬೆಲೆ ಇದಾಗಿದೆ). ಮುಂದಿನ ದಿನಗಳಲ್ಲಿ ಈ ಬೆಲೆ ಹೆಚ್ಚಾಗಬಹುದು.(istockphoto)
(2 / 5)
ಈ ಗಿಡ ನೆಟ್ಟ 12 ವರ್ಷಗಳ ಬಳಿಕ ಕೊಯ್ಲಿಗೆ ಬರುತ್ತದೆ. ಮೂರುವರೆ ಅಡಿಯಿಂದ 6 ಅಡಿ ಸುತ್ತಳತೆ ಬರುತ್ತದೆ. 40 ಅಡಿ ಎತ್ತರ ಬೆಳೆಯುತ್ತದೆ. ಆದರೆ, ರೈತರಿಗೆ ಕೋಟಿ ಕೋಟಿ ತಂದುಕೊಡುವ ಮಹಾಗನಿ ಮರದ ಉಪಯೋಗಗಳು ಏನು? ಇಲ್ಲಿದೆ ಉತ್ತರ.
(3 / 5)
ಮಣ್ಣಿನ ಸವೆತ ರಕ್ಷಿಸುವ ಮಹಾಗನಿ ಕೃಷಿಯು ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಇದು ಔಷಧೀಯ ಸಸಿಯಾಗಿದ್ದು, ಅದರ ಎಲೆಗಳಿಂದ ಕ್ಯಾನ್ಸರ್, ರಕ್ತದೊತ್ತಡ, ಅಸ್ತಮಾ, ಶೀತ, ಮಧುಮೇಹ ಸೇರಿ ಅನೇಕ ರೋಗಗಳನ್ನು ಗುಣಪಡಿಸಬಹುದು. (indiamart)
(4 / 5)
ಈ ಮರವನ್ನು ವಿವಿಧ ರೀತಿಯ ಪೀಠೋಪಕರಣಗಳು, ಅಲಂಕಾರಿಕ, ಶಿಲ್ಪಗಳು, ಬಂದೂಕು ತಯಾರಿಕೆಗೂ ಬಳಸುತ್ತಾರೆ. ನೀರು ಜಾಸ್ತಿಯಾದರೂ ಅಥವಾ ನೀರು ನಿಂತರೂ ಹಾಳಾಗದ ಕಾರಣ ದೋಣಿಗಳ ನಿರ್ಮಾಣಕ್ಕೂ ಬಳಸಲಾಗುತ್ತದೆ.(naturalmangoes)
ಇತರ ಗ್ಯಾಲರಿಗಳು