ನೂತನ ನಾಯಕ, ನೂತನ ಉಪನಾಯಕ; ಶ್ರೀಲಂಕಾ ಸರಣಿಗೆ ಪ್ರಕಟಗೊಂಡ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೂತನ ನಾಯಕ, ನೂತನ ಉಪನಾಯಕ; ಶ್ರೀಲಂಕಾ ಸರಣಿಗೆ ಪ್ರಕಟಗೊಂಡ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು

ನೂತನ ನಾಯಕ, ನೂತನ ಉಪನಾಯಕ; ಶ್ರೀಲಂಕಾ ಸರಣಿಗೆ ಪ್ರಕಟಗೊಂಡ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು

  • Indian Cricket Team: ಗೌತಮ್ ಗಂಭೀರ್​ ಮಾರ್ಗದರ್ಶನದಲ್ಲಿ ಭಾರತ ತಂಡದ ಮೊದಲ ಸರಣಿ ಸಜ್ಜಾಗಿದೆ. ಈಗಾಗಲೇ ಟಿ20ಐ ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಈ ಸಿರೀಸ್​ಗೆ ಅಚ್ಚರಿಯ ಬದಲಾವಣೆಗಳನ್ನು ಕಾಣಬಹುದು. ಅವುಗಳ ಪಟ್ಟಿ ಇಲ್ಲಿದೆ.

ಗೌತಮ್ ಗಂಭೀರ್ ಅವರು ಸೂರ್ಯಕುಮಾರ್ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿರುವ ಕಾರಣ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವ ಅಥವಾ ಉಪನಾಯಕತ್ವದ ಪಾತ್ರದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. ಬದಲಿಗೆ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಶುಭ್ಮನ್ ಗಿಲ್ ಅವರನ್ನು ಏಕದಿನ ಮತ್ತು ಟಿ20ಐ ಸರಣಿಗೆ ವೈಸ್​ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ.
icon

(1 / 8)

ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ಗಂಭೀರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಶುಭ್ಮನ್ ಗಿಲ್ ಅವರನ್ನು ಸಜ್ಜುಗೊಳಿಸುವ ಗುರಿ ಹೊಂದಿರುವ ಕಾರಣ ಪಾಂಡ್ಯರನ್ನು ಕ್ಯಾಪ್ಟನ್ ಹಾಗೂ ವೈಸ್ ಕ್ಯಾಪ್ಟನ್​ ಪಟ್ಟದಿಂದ ಕಿತ್ತಾಕಿದ್ದಾರೆ.
icon

(2 / 8)

ಗಂಭೀರ್​​ ಕಣ್ಣು 2027ರ ವಿಶ್ವಕಪ್​ ಮೇಲಿದ್ದು, ಶುಭ್ಮನ್ ಗಿಲ್​ರನ್ನು ಭವಿಷ್ಯದ ನಾಯಕನಾಗಿ ಬೆಳೆಸುವುದು ಬಹುಶಃ ಗುರಿ ಹೊಂದಿದ್ದಾರೆ. ಭವಿಷ್ಯದ ನಾಯಕನನ್ನು ರೂಪಿಸಲು ಎದುರು ನೋಡುತ್ತಿರುವ ಗಂಭೀರ್​, ಶುಭ್ಮನ್​ರನ್ನು ಟಿ20 ಮತ್ತು ಏಕದಿನ ಕ್ರಿಕೆಟ್​​ಗೆ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.
icon

(3 / 8)

ಕುಲ್ದೀಪ್ ಯಾದವ್ 2024ರ ಟಿ20 ವಿಶ್ವಕಪ್​ ಗೆಲುವಿನಲ್ಲಿ ಭಾರತದ ಪರ ದೊಡ್ಡ ಪಾತ್ರ ವಹಿಸಿದ್ದರು. 5 ಪಂದ್ಯಗಳಲ್ಲಿ 10 ವಿಕೆಟ್​​ಗಳಲ್ಲಿ ಪಡೆದರು. ಆದಾಗ್ಯೂ, ಅವರನ್ನು ಶ್ರೀಲಂಕಾ ವಿರುದ್ಧದ ಟಿ20 ತಂಡದಿಂದ ಕೈಬಿಡಲಾಗಿದೆ. ಜಿಂಬಾಬ್ವೆ ಸರಣಿಯಲ್ಲಿ ಮಿಂಚಿದ ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲಾಗಿದೆ.  
icon

(4 / 8)

ಮತ್ತೊಂದೆಡೆ ರಿಯಾನ್ ಪರಾಗ್​​ಗೆ ಅದೃಷ್ಟ ಖುಲಾಯಿಸಿದೆ. ಟಿ20ಐ ಹಾಗೂ ಏಕದಿನ ಎರಡೂ ತಂಡಗಳಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ಪ್ರವಾಸದಲ್ಲೂ ಆಡುವ 11ರ ಬಳಗದಲ್ಲಿ ಆಡುವ ಅವಕಾಶ ಪಡೆದು ಮಿಂಚಿದರೆ ಭವಿಷ್ಯದಲ್ಲೂ ಸ್ಥಾನ ಭದ್ರಪಡಿಸಿಕೊಳ್ಳುವುದು ಖಚಿತ.
icon

(5 / 8)

ಕೆಕೆಆರ್ ಸ್ಟಾರ್​​ಗಳಾದ ಶ್ರೇಯಸ್ ಅಯ್ಯರ್ (ಏಕದಿನ), ಹರ್ಷಿತ್ ರಾಣಾ (ಏಕದಿನ) ಮತ್ತು ರಿಂಕು ಸಿಂಗ್​ಗೆ (ಟಿ20) ಗಂಭೀರ್ ಸ್ಥಾನ ಕಲ್ಪಿಸಿದ್ದಾರೆ. ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಈಗ ಮತ್ತೆ ತಂಡಕ್ಕೆ ಮರಳಿದ್ದಾರೆ.
icon

(6 / 8)

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
icon

(7 / 8)

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
icon

(8 / 8)

ಇತರ ಗ್ಯಾಲರಿಗಳು