Makar Sankranti Rangoli: ಮಕರ ಸಂಕ್ರಾಂತಿಗೆ ಬಿಡಿಸಬಹುದಾದ ಸರಳ, ಸುಂದರ ರಂಗೋಲಿ ಚಿತ್ತಾರಗಳಿವು; ನಿಮಗೂ ಇಷ್ಟವಾಗಬಹುದು ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Makar Sankranti Rangoli: ಮಕರ ಸಂಕ್ರಾಂತಿಗೆ ಬಿಡಿಸಬಹುದಾದ ಸರಳ, ಸುಂದರ ರಂಗೋಲಿ ಚಿತ್ತಾರಗಳಿವು; ನಿಮಗೂ ಇಷ್ಟವಾಗಬಹುದು ಗಮನಿಸಿ

Makar Sankranti Rangoli: ಮಕರ ಸಂಕ್ರಾಂತಿಗೆ ಬಿಡಿಸಬಹುದಾದ ಸರಳ, ಸುಂದರ ರಂಗೋಲಿ ಚಿತ್ತಾರಗಳಿವು; ನಿಮಗೂ ಇಷ್ಟವಾಗಬಹುದು ಗಮನಿಸಿ

  • ಮಕರ ಸಂಕ್ರಾಂತಿ ಬಂದೇ ಬಿಟ್ಟಿದೆ. ಈ ಹಬ್ಬದಲ್ಲಿ ರಂಗೋಲಿ ಬಿಡಿಸುವುದು ವಿಶೇಷ. ಮನೆಗಳಲ್ಲಿ ಮಾತ್ರವಲ್ಲದೇ ಬೀದಿ ಬೀದಿಗಳನ್ನು ಸಹ ರಂಗೋಲಿ ಮೂಲಕ ಸಿಂಗರಿಸಲಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿಗೆ ಸರಳವಾಗಿದ್ರೂ ಸುಂದರವಾಗಿ ಕಾಣುವ ರಂಗೋಲಿ ಚಿತ್ತಾರ ಮೂಡಿಸಬೇಕು ಅಂತಿದ್ದರೆ ಇಲ್ಲಿರುವ ಡಿಸೈನ್‌ಗಳನ್ನು ಗಮನಿಸಿ.

ಮಕರ ಸಂಕ್ರಾಂತಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬ. ಈ ಹಬ್ಬದಲ್ಲಿ ಎಳ್ಳು–ಬೆಲ್ಲದ ಜೊತೆಗೆ ರಂಗೋಲಿ ಬಿಡಿಸುವುದು ವಿಶೇಷ. ಸಂಕ್ರಾಂತಿಯಲ್ಲಿ ರಂಗೋಲಿ ಇಲ್ಲ ಎಂದರೆ ಹಬ್ಬ ಪರಿಪೂರ್ಣವಾಗುವುದು ಕಷ್ಟ. ನೀವು ಮಕರ ಸಂಕ್ರಾಂತಿಗೆ ರಂಗೋಲಿ ಬಿಡಿಸಬೇಕು ಅಂತಿದ್ದು ಸಮಯವಿಲ್ಲ, ರಂಗೋಲಿ ಬಿಡಿಸಲು ಇತ್ತೀಚಿಗೆ ಕಲಿತಿರುವುದು ಅಂತೆಲ್ಲಾ ಇದ್ರೆ ಈ ರಂಗೋಲಿ ಚಿತ್ತಾರಗಳನ್ನು ಟ್ರೈ ಮಾಡಬಹುದು. ಇಲ್ಲಿವೆ ಸಂಕ್ರಾಂತಿಗೆ ಬಿಡಿಸಬಹುದಾದ ಸರಳ, ಸುಂದರ ರಂಗೋಲಿ ಡಿಸೈನ್‌ಗಳು. 
icon

(1 / 10)

ಮಕರ ಸಂಕ್ರಾಂತಿಯಲ್ಲಿ ಪೊಂಗಲ್ ಮಾಡುವುದು ವಿಶೇಷ. ಪೊಂಗಲ್ ಮಡಿಕೆ ಇರುವ ಈ ಡಿಸೈನ್ ಸರಳವಾಗಿದ್ದು, ಸುಂದರವಾಗಿ ಕಾಣುತ್ತದೆ. ಇದನ್ನು ದೇವರ ಮನೆ ಮುಂದೆ ಅಥವಾ ಮನೆಯ ಮುಂಬಾಗಿಲಿಗೆ ಬಿಡಿಸಬಹುದು. ನಿಮ್ಮಿಷ್ಟದ ಬಣ್ಣ ತುಂಬವ ಮೂಲಕ ಈ ರಂಗೋಲಿಯನ್ನು ವಿಶೇಷವನ್ನಾಗಿಸಬಹುದು. 
icon

(2 / 10)

(PC: Pinterest/ Keerthi)

ನೀವು ಹೊಸತಾಗಿ ರಂಗೋಲಿ ಬಿಡಿಸೋಕೆ ಕಲಿತಾ ಇದ್ರೆ ಚಿಂತೆ ಮಾಡ್ಬೇಡಿ, ಈ ರಂಗೋಲಿಯನ್ನು ಬಿಡಿಸುವ ಮೂಲಕ ನಿಮ್ಮ ಮನೆಯನ್ನು ಅಲಂಕರಿಸಬಹುದು. ಈ ರಂಗೋಲಿ ಡಿಸೈನ್ ತುಂಬಾನೇ ಸಿಂಪಲ್ ಆಗಿದ್ರೂ ಸಖತ್ ಟ್ರೆಂಡಿ ಆಗಿದೆ. ಮಕರ ಸಂಕ್ರಾಂತಿಯಲ್ಲಿ ನವಿಲಿನ ಚಿತ್ತಾರ ಬಿಡಿಸುವ ಕಾರಣ ನೀವು ಈ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು.
icon

(3 / 10)

ಸಂಕ್ರಾಂತಿ ಹಬ್ಬಕ್ಕೆ ಸುಂದರ ನವಿಲಿನ ಚಿತ್ತಾರ ಮೂಡಿಸಬೇಕು ಎನ್ನುವ ಆಸೆ ಇದ್ದರೆ ಈ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಇದು ತುಂಬಾನೇ ಸರಳವಾಗಿದ್ದು ಅದ್ಭುತವಾಗಿ ಕಾಣುತ್ತದೆ. ಇದಕ್ಕೆ ಬಳಸಿದ ಬಣ್ಣದ ಬದಲು ನೀವು ಹಸಿರು, ಕೆಂಪು ಕೂಡ ಆಯ್ಕೆ ಮಾಡಿಕೊಳ್ಳಬಹುದು. 
icon

(4 / 10)

(PC: Pinterest )

ರಂಗೋಲಿ ಬಿಡಿಸೋಕೆ ಟೈಮ್ ಇಲ್ಲ, ಆದ್ರೂ ರಂಗೋಲಿ ಬಿಡಿಸದೇ ಇರಲು ಆಗುವುದಿಲ್ಲ ಎನ್ನುವವರು ಈ ಡಿಸೈನ್ ಒಮ್ಮೆ ಗಮನಿಸಿ. ಇದು ಸಖತ್ ಸಿಂಪಲ್ ಆಗಿದ್ದು, ಸುಂದರವಾಗಿ ಕಾಣುವ ರಂಗೋಲಿ ಚಿತ್ತಾರವಾಗಿದೆ. ಈ ಡಿಸೈನ್‌ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.  
icon

(5 / 10)

ಹೂವಿನ ಪಕಳೆ ಹಾಗೂ ಬಣ್ಣಗಳಿಂದ ಬಿಡಿಸಿರುವ ಈ ರಂಗೋಲಿ ಚಿತ್ತಾರ ಸಂಕ್ರಾಂತಿ ಹಬ್ಬಕ್ಕೆ ಹೇಳಿ ಮಾಡಿಸಿದಂತಿದೆ. ಮನೆ ಅಂಗಳ ಅಥವಾ ಬೀದಿಯಲ್ಲಿ ಬಿಡಿಸಲು ಈ ರಂಗೋಲಿ ಬೆಸ್ಟ್ ಅಂತಲೇ ಹೇಳಬಹುದು. ಇದರ ಮೇಲ್ಗಡೆ ನೀವು ವೃತ್ತಾಕಾರದಲ್ಲಿ ಮಕರ ಸಂಕ್ರಾಂತಿ ಶುಭಾಶಯ ಎಂದು ಕೂಡ ಬರೆಯಬಹುದು. 
icon

(6 / 10)

ನವಿಲು, ದೀಪ, ನವಿಲುಗರಿ ಹಬ್ಬದ ದಿನಗಳಿಗೆ ಇದು ಹೇಳಿ ಮಾಡಿಸಿದ ರಂಗೋಲಿ. ಬಣ್ಣಗಳಿಂದ ತುಂಬಿರುವ ಈ ರಂಗೋಲಿ ಮನೆ ಮುಂದೆ ಬಿಡಿಸುವುದರಿಂದ ಮನೆಗೆ ಹೊಸ ಕಳೆ ಬರುವುದು ಖಂಡಿತ. ಇದು ಕೂಡ ಸರಳವಾಗಿ ಬಿಡಿಸಬಹುದಾದ ರಂಗೋಲಿ ಚಿತ್ತಾರವಾಗಿದೆ. 
icon

(7 / 10)

ಸಂಕ್ರಾಂತಿ ಹಬ್ಬದಲ್ಲಿ ಗಾಳಿಪಟವೂ ವಿಶೇಷ. ಗಾಳಿಪಟದೊಂದಿಗೆ ಅರಿಸಿನ, ಕುಂಕುಮ ವೀಳದ್ಯೆಲೆ ಇರುವ ಈ ರಂಗೋಲಿ ಚಿತ್ತಾರವನ್ನು ಈ ವರ್ಷ ಮಕರ ಸಂಕ್ರಾಂತಿಗೆ ಆಯ್ಕೆ ಮಾಡಿಕೊಳ್ಳಿ.  
icon

(8 / 10)

ಸಂಕ್ರಾಂತಿ ಹಬ್ಬದಲ್ಲಿ ಗಾಳಿಪಟವೂ ವಿಶೇಷ. ಗಾಳಿಪಟದೊಂದಿಗೆ ಅರಿಸಿನ, ಕುಂಕುಮ ವೀಳದ್ಯೆಲೆ ಇರುವ ಈ ರಂಗೋಲಿ ಚಿತ್ತಾರವನ್ನು ಈ ವರ್ಷ ಮಕರ ಸಂಕ್ರಾಂತಿಗೆ ಆಯ್ಕೆ ಮಾಡಿಕೊಳ್ಳಿ.  

(PC: Pinterest )

ನವಿಲು ಗರಿ ಬಿಚ್ಚಿದಂತಿರುವ ಈ ಸುಂದರ ರಂಗೋಲಿ ಚಿತ್ತಾರವು  ನಿಮ್ಮ ಮನೆ ಅಂಗಳ ಅಥವಾ ಬೀದಿಯಲ್ಲಿ ಬಿಡಿಸಲು ಹೇಳಿ ಮಾಡಿಸಿದಂತಿದೆ. ಇದು ಕೂಡ ತುಂಬಾನೇ ಸಿಂಪಲ್ ಆಗಿರುವ ರಂಗೋಲಿ ಡಿಸೈನ್‌. ಬಣ್ಣ ಬಣ್ಣವಾಗಿ ಸುಂದರವಾಗಿ ಕಾಣುವ ಈ ಡಿಸೈನ್‌ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. 
icon

(9 / 10)

ನಿಮ್ಮನೆಯಲ್ಲಿ ನಾಲ್ಕೈದು ಬಣ್ಣದ ರಂಗೋಲಿ ಪುಡಿ ಇದ್ದರೆ ನೀವು ಈ ರಂಗೋಲಿ ಚಿತ್ತಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರಂಗೋಲಿ ಚಿತ್ತಾರವು ಸರಳವಾಗಿದ್ದರೂ ಸುಂದರವಾಗಿ ಕಾಣುತ್ತದೆ. ಪೊಂಗಲ್ ಮಡಿಕೆ, ಕಬ್ಬಿನ ಜಲ್ಲೆ ಇರುವ ಈ ರಂಗೋಲಿ ಚಿತ್ತಾರ ಸಂಕ್ರಾಂತಿ ಸಂಭ್ರಮ ಹೆಚ್ಚಿಸುವುದು ಖಂಡಿತ. 
icon

(10 / 10)

ಇತರ ಗ್ಯಾಲರಿಗಳು