ಮಕರ ಸಂಕ್ರಾಂತಿ ಸಂಭ್ರಮ ಹೆಚ್ಚಿಸಲಿ ಮೆಹಂದಿ ಡಿಸೈನ್‌ಗಳು, ಈ ವರ್ಷ ಸಂಕ್ರಾಂತಿಗೆ ಮೆಹಂದಿ ಹಾಕುವ ಪ್ಲ್ಯಾನ್ ಇದ್ರೆ ಈ ಚಿತ್ತಾರಗಳನ್ನು ಗಮನಿಸಿ
ಸಂಕ್ರಾಂತಿ ಹಬ್ಬ ಎಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ. ನೀವು ಸಂಕ್ರಾಂತಿ ಹಬ್ಬಕ್ಕೆ ಚೆನ್ನಾಗಿ ರೆಡಿಯಾಗಬೇಕು ಅಂತಿದ್ದರೆ ಮೆಹಂದಿ ಮರೆತು ಬಿಡಬೇಡಿ. ಮೆಹಂದಿ ಚಿತ್ತಾರವು ನಿಮ್ಮ ಅಂದಕ್ಕೆ ಮೆರುಗು ನೀಡುವುದು ಸುಳ್ಳಲ್ಲ. ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಈ ಮೆಹಂದಿ ಡಿಸೈನ್‌ಗಳನ್ನ ಆಯ್ಕೆ ಮಾಡಿಕೊಂಡು, ಅಂದ ಹೆಚ್ಚಿಸಿಕೊಳ್ಳಿ.
(1 / 9)
ಪ್ರತಿವರ್ಷ ಜನವರಿ 14 ಅಥವಾ 15ಕ್ಕೆ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡ ಒಂದು. ಸಂಕ್ರಾಂತಿ ಹಬ್ಬ ಎಂದರೆ ಹೆಣ್ಣುಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಎಳ್ಳು ಬೀರಿ, ಪೊಂಗಲ್ ತಯಾರಿಸಿ, ಬಗೆ ಬಗೆ ಅಡುಗೆ ಮಾಡುವ ಜೊತೆ ಹೊಸ ಬಟ್ಟೆ ಧರಿಸಿ ಸಖತ್ ಆಗಿ ರೆಡಿ ಆಗುತ್ತಾರೆ. ನೀವು ಈ ಸಲ ಸಂಕ್ರಾಂತಿಗೆ ಟ್ರೆಡಿಷನಲ್ ಆಗಿ ರೆಡಿ ಆಗಬೇಕು ಅಂತಿದ್ರೆ ಮೆಹಂದಿ ನೆನಪು ಬಿಡಬೇಡಿ. ಇಲ್ಲಿವೆ ಲೇಟೆಸ್ಟ್ ಹಾಗೂ ಸಖತ್ ಸಿಂಪಲ್ ಆಗಿರುವ ಮೆಹಂದಿ ಡಿಸೈನ್‌ಗಳು.
(PC: Pinterest)(2 / 9)
ಸಂಕ್ರಾಂತಿಗೆ ಮದುಮಗಳಂತೆ ಕೈ ತುಂಬಾ ಮೆಹಂದಿ ಹಾಕಬೇಕು ಎನ್ನುವ ಬಯಕೆ ಇದ್ದರೆ ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಸಂಕೀರ್ಣ ವಿನ್ಯಾಸವಾಗಿದ್ದು, ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಈ ಚಿತ್ತಾರವು ನಿಮ್ಮ ಕೈಗಳು ವಿಶೇಷವಾಗಿ ಕಾಣುವಂತೆ ಮಾಡುತ್ತದೆ.
(3 / 9)
ಸಂಕ್ರಾಂತಿ ಹಬ್ಬಕ್ಕೆ ಕೈಗಳಿಗೆ ಮಾತ್ರವಲ್ಲ, ಕಾಲುಗಳಿಗೂ ಮೆಹಂದಿ ಹಚ್ಚಿಕೊಳ್ಳುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. ಸರಳ ಡಿಸೈನ್‌ನಿಂದ ಸಂಕೀರ್ಣ ಡಿಸೈನ್‌ವರೆಗೆ ಮಕರ ಸಂಕ್ರಾಂತಿಗೆ ನೀವು ಕಾಲಿನ ಮೇಲೆ ಬಿಡಿಸಿಕೊಳ್ಳಬಹುದಾದ ಸುಂದರ ಚಿತ್ತಾರಗಳಿವು.
(4 / 9)
ಸಿಂಪಲ್ ಆಗಿದ್ರೂ ಟ್ರೆಂಡಿ ಆಗಿ ಕಾಣಿಸಬೇಕು ಎನ್ನುವ ಬಯಕೆ ಇದ್ದರೆ ಈ ಡಿಸೈನ್ ನಿಮಗೆ ಹೇಳಿ ಮಾಡಿಸಿದ್ದು. ಇದು ನೋಡಲು ಸರಳವಾಗಿದ್ದು, ಕೈಗಳ ಅಂದವನ್ನು ಹೆಚ್ಚಿಸುತ್ತದೆ.
(5 / 9)
ಕಾಲಿಗೆ ಹಾಕಿರುವ ಈ ಮೆಹಂದಿ ಡಿಸೈನ್ ಸಖತ್ ಆಗಿದೆ. ಇದೇ ಚಿತ್ತಾರವನ್ನು ನೀವು ಕೈಗಳ ಮೇಲೂ ಮೂಡಿಸಿಕೊಳ್ಳಬಹುದು. ಅರ್ಧ ಕಾಲಿಗೆ ಬಂದರೂ ಈ ಡಿಸೈನ್ ಸೂಪರ್ ಆಗಿ ಕಾಣುತ್ತೆ. ಸಂಕ್ರಾಂತಿಗೆ ನಿಮ್ಮ ಕಾಲಿಗೆ ಈ ಡಿಸೈನ್ ಬಿಡಿಸಿಕೊಳ್ಳಿ.
(6 / 9)
ರಾಧಾಕೃಷ್ಣರ ಚಿತ್ತಾರ ಮೂಡಿರುವ ಈ ಡಿಸೈನ್ ನೋಡಿ. ಇದು ನೋಡಿದ ಕೂಡಲೇ ಎಂಥವರನ್ನು ಸೆಳೆಯುವಂತಿದೆ. ಸಂಕ್ರಾಂತಿ ಹಬ್ಬಕ್ಕೆ ಮೆಹಂದಿ ಹಾಕಿಕೊಳ್ಳುವ ಪ್ಲ್ಯಾನ್ ಇದ್ದರೆ ನೀವು ಈ ಡಿಸೈನ್ ಟ್ರೈ ಮಾಡಿ. ಕೈಗಳ ಹಿಂಭಾಗಕ್ಕೆ ಸಖತ್ ಸಿಂಪಲ್ ಆಗಿ ಕಾಣುವ ಈ ಡಿಸೈನ್ ನೋಡಿ. ಹೂವಿನ ಚಿತ್ತಾರದ ಡಿಸೈನ್ ಕೂಡ ನಿಮ್ಮ ಕೈಗಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.
(7 / 9)
ಕಾಲಿನ ಮೇಲೆ ತರುಲತೆಗಳೇ ಹಬ್ಬಿದಂತೆ ಕಾಣುವ ಈ ಮೆಹಂದಿ ಡಿಸೈನ್ ಟ್ರೆಂಡಿ ಆಗಿಯೂ ಸಖತ್ ಸ್ಟೈಲಿಶ್ ಆಗಿಯೂ ಕಾಣಿಸುತ್ತದೆ. ಇದನ್ನು ಬಿಡಿಸುವುದು ಸುಲಭ. ಈ ಸಂಕ್ರಾಂತಿಗೆ ಟ್ರೈ ಮಾಡಿ
(8 / 9)
ಮಕರ ಸಂಕ್ರಾಂತಿಯಲ್ಲಿ ಗಾಳಿಪಟ ವಿಶೇಷ. ಈ ವರ್ಷ ಸಂಕ್ರಾಂತಿಗೆ ನೀವು ಗಾಳಿಪಟದ ಚಿತ್ತಾರವಿರುವ, ತುಂಬಾನ ಸರಳವಾಗಿ ಬಿಡಿಸಬಹುದಾಗ ಈ ಮೆಹಂದಿ ಡಿಸೈನ್ ಆಯ್ಕೆ ಮಾಡಬಹುದು ಗಮನಿಸಿ.
ಇತರ ಗ್ಯಾಲರಿಗಳು